KSRLPS Recruitment 2023: ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿಯು (Karnataka State Rural Livelihood Promotion Society) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 41 ಬ್ಲಾಕ್ ಮ್ಯಾನೇಜರ್, ಕ್ಲಸ್ಟರ್ ಸೂಪರ್ವೈಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಡ್ಯ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇದೇ ಜನವರಿ 15, 2023 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಇದನ್ನೂ ಓದಿ: ಅಕ್ಕಮಹಾದೇವಿ ಯೂನಿವರ್ಸಿಟಿಯಲ್ಲಿ ಬೋಧಕ & ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂಸ್ಥೆ | ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ |
ಹುದ್ದೆ | ಬ್ಲಾಕ್ ಮ್ಯಾನೇಜರ್, ಕ್ಲಸ್ಟರ್ ಸೂಪರ್ವೈಸರ್ |
ಒಟ್ಟು ಹುದ್ದೆ | 41 |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ಮಂಡ್ಯ, ಶಿವಮೊಗ್ಗ, ಕೊಡಗು |
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ksrlps.karnataka.gov.in ಗೆ ಭೇಟಿ ನೀಡಿ.
ಎಷ್ಟೆಷ್ಟು ಹುದ್ದೆಗಳಿವೆ:
ಕ್ಲಸ್ಟರ್ ಸೂಪರ್ವೈಸರ್- 4
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್-5
ಆಫೀಸ್ ಅಸಿಸ್ಟೆಂಟ್-2
ಡಿಸ್ಟ್ರಿಕ್ಟ್ ಮ್ಯಾನೇಜರ್-ಫಾರ್ಮ್ ಲೈವ್ಲಿಹುಡ್-2
ಕ್ಲಸ್ಟರ್ ಸೂಪರ್ವೈಸರ್- ಸ್ಕಿಲ್- 8
ಬ್ಲಾಕ್ ಮ್ಯಾನೇಜರ್- ನಾನ್ ಫಾರ್ಮ್ ಲೈವ್ಲಿಹುಡ್-10
ಬ್ಲಾಕ್ ಮ್ಯಾನೇಜರ್- ಫಾರ್ಮ್ ಲೈವ್ಲಿಹುಡ್- 10
ಇದನ್ನೂ ಓದಿ: ಬೆಂಗಳೂರು ಯೂನಿವರ್ಸಿಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- 36,000 ಸಂಬಳ
ವಿದ್ಯಾರ್ಹತೆ:
ಕ್ಲಸ್ಟರ್ ಸೂಪರ್ವೈಸರ್- ಪದವಿ
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್- ಸ್ನಾತಕೋತ್ತರ ಪದವಿ
ಆಫೀಸ್ ಅಸಿಸ್ಟೆಂಟ್- ಪದವಿ
ಡಿಸ್ಟ್ರಿಕ್ಟ್ ಮ್ಯಾನೇಜರ್-ಫಾರ್ಮ್ ಲೈವ್ಲಿಹುಡ್-ಬಿಎಸ್ಸಿ, ಎಂಎಸ್ಸಿ
ಕ್ಲಸ್ಟರ್ ಸೂಪರ್ವೈಸರ್- ಸ್ಕಿಲ್- ಪದವಿ
ಬ್ಲಾಕ್ ಮ್ಯಾನೇಜರ್- ನಾನ್ ಫಾರ್ಮ್ ಲೈವ್ಲಿಹುಡ್-ಸ್ನಾತಕೋತ್ತರ ಪದವಿ
ಬ್ಲಾಕ್ ಮ್ಯಾನೇಜರ್- ಫಾರ್ಮ್ ಲೈವ್ಲಿಹುಡ್- ಬಿಎಸ್ಸಿ, ಎಂಎಸ್ಸಿ
ಅರ್ಜಿ ಸಲ್ಲಿಸಲು ಕೊನೆಯ ದಿನ:
ಕ್ಲಸ್ಟರ್ ಸೂಪರ್ವೈಸರ್- ಜನವರಿ 7, 9, 15
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್-ಜನವರಿ 7, 9, 15
ಆಫೀಸ್ ಅಸಿಸ್ಟೆಂಟ್- ಜನವರಿ 9 & 15
ಡಿಸ್ಟ್ರಿಕ್ಟ್ ಮ್ಯಾನೇಜರ್-ಫಾರ್ಮ್ ಲೈವ್ಲಿಹುಡ್-ಜನವರಿ 9 & 15
ಕ್ಲಸ್ಟರ್ ಸೂಪರ್ವೈಸರ್- ಸ್ಕಿಲ್- ಜನವರಿ 9 & 15
ಬ್ಲಾಕ್ ಮ್ಯಾನೇಜರ್- ನಾನ್ ಫಾರ್ಮ್ ಲೈವ್ಲಿಹುಡ್-ಜನವರಿ 9 & 15
ಬ್ಲಾಕ್ ಮ್ಯಾನೇಜರ್- ಫಾರ್ಮ್ ಲೈವ್ಲಿಹುಡ್- ಜನವರಿ 9 & 15
ಅರ್ಜಿ ಹಾಕುವುದು ಹೇಗೆ?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ವೇತನ ಎಷ್ಟು?
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.
ಉದ್ಯೋಗದ ಸ್ಥಳ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಡ್ಯ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ