KSP Recruitment 2022: ಕರ್ನಾಟಕ ಸರ್ಕಾರದ ಉದ್ಯೋಗ(Karnataka Government Job) ಅರಸುತ್ತಿರುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(Karnataka Police Department)ಯಲ್ಲಿ ಖಾಲಿ ಇರುವ ವಿಶೇಷ ರಿಸರ್ವ್ ಸಬ್-ಇನ್ಸ್ಪೆಕ್ಟರ್(ಕೆಎಸ್ಆರ್ಪಿ & ಐಆರ್ಬಿ) 70 ಹುದ್ದೆಗಳಿಗೆ ಲಿಖಿತ ಪರೀಕ್ಷೆ ಯಾವಾಗ ನಡೆಯುತ್ತೆ ದಿನಾಂಕವನ್ನು ಪ್ರಕಟಿಸಲಾಗಿದೆ.
ಕರ್ನಾಟಕ ವಿಶೇಷ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್ಬಿ) ಪೊಲೀಸ್ಗಾಗಿ ಖಾಲಿ ಇರುವ 70 ವಿಶೇಷ ಮೀಸಲು ಸಬ್-ಇನ್ಸ್ಪೆಕ್ಟರ್ಗಳ ನೇಮಕಾತಿಗಾಗಿ ಕರ್ನಾಟಕ ಪೊಲೀಸ್ ಇಲಾಖೆಯು ಲಿಖಿತ ಪರೀಕ್ಷೆಯ ದಿನಾಂಕವನ್ನು ತಿಳಿಸಿದೆ.
— DGP KARNATAKA (@DgpKarnataka) December 7, 2022
ಪತ್ರಿಕೆ-1 ಡಿಸೆಂಬರ್ 18, 2022 - ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ
ಪತ್ರಿಕೆ- 2 ಡಿಸೆಂಬರ್ 18, 2022- ಮಧ್ಯಾಹ್ನ 2 ಗಂಟೆಯಿಂದ 3.30ರ ವರೆಗೆ ನಡೆಯಲಿದೆ.
ಇದನ್ನೂ ಓದಿ: BOB Recruitment 2022: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ, ಸಂದರ್ಶನ ಮಾತ್ರ
ಬೆಂಗಳೂರು ನಗರದ 12 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಪ್ರವೇಶ ಪತ್ರ ಎಲ್ಲಿ ದೊರೆಯುತ್ತದೆ?
ಲಿಖಿತ ಪರೀಕ್ಷೆಗೆ ಅರ್ಹ ಇರುವ ಅಭ್ಯರ್ಥಿಗಳು ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ https://ksp-recruitment.in/ ಗೆ ಭೇಟಿ ನೀಡಿ ಅಲ್ಲಿ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗಳಿಗೆ ಹಾಜರಾಗಲು ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ