KSEDCL Recruitment 2023: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (Karnataka State Electronics Development Corporation Limited) ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 26 ಅಸಿಸ್ಟೆಂಟ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಮೇ 17 ರೊಳಗೆ ಅಂದರೆ ಇವತ್ತೇ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಹುದ್ದೆಗಳಿಗೆ ತಡಮಾಡದೇ ಈಗಲೇ ಅರ್ಜಿ ಹಾಕಿ.
ಸಂಸ್ಥೆ | ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ |
ಹುದ್ದೆ | ಅಸಿಸ್ಟೆಂಟ್, ಅಸಿಸ್ಟೆಂಟ್ ಮ್ಯಾನೇಜರ್ |
ಒಟ್ಟು ಹುದ್ದೆ | 26 |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 17, 2023 |
ವೇತನ | ಮಾಸಿಕ ₹ 52,650- 97,100 |
ಉದ್ಯೋಗದ ಸ್ಥಳ | ಬೆಂಗಳೂರು |
ವಿದ್ಯಾರ್ಹತೆ & ವಯೋಮಿತಿಯನ್ನು ತಿಳಿಯಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಬೇಕು.
ಇದನ್ನೂ ಓದಿ: Job Alert: ಇಂಡಿಯನ್ ಬ್ಯಾಂಕ್ನಲ್ಲಿ ಡಿಗ್ರಿ ಆದವರಿಗೆ ಉದ್ಯೋಗ- ಇವತ್ತೇ ಅರ್ಜಿ ಹಾಕಿ
ವೇತನ:
ಅಸಿಸ್ಟೆಂಟ್ ಮ್ಯಾನೇಜರ್ (ಟೆಕ್ನಿಕಲ್-ಗ್ರೂಪ್ ಬಿ)- ಮಾಸಿಕ ₹ 52,650- 97,100
ಅಸಿಸ್ಟೆಂಟ್ ಮ್ಯಾನೇಜರ್ (ನಾನ್- ಟೆಕ್ನಿಕಲ್, ಗ್ರೂಪ್-ಬಿ)- ಮಾಸಿಕ ₹ 52,650- 97,100
ಪ್ರೈವೇಟ್ ಸೆಕ್ರೆಟರಿ (ಗ್ರೂಪ್ ಸಿ)- ಮಾಸಿಕ ₹ 40,900-78,200
ಸೀನಿಯರ್ ಅಸಿಸ್ಟೆಂಟ್ (ಟೆಕ್ನಿಕಲ್- ಗ್ರೂಪ್ ಸಿ)- ಮಾಸಿಕ ₹ 33,450-62,600
ಸೀನಿಯರ್ ಅಸಿಸ್ಟೆಂಟ್ (ನಾನ್ ಟೆಕ್ನಿಕಲ್- ಗ್ರೂಪ್ ಸಿ)-ಮಾಸಿಕ ₹ 33,450-62,600
ಅಸಿಸ್ಟೆಂಟ್ (ಟೆಕ್ನಿಕಲ್- ಗ್ರೂಪ್ ಸಿ)- ಮಾಸಿಕ ₹ 30,350- 58,250
ಅಸಿಸ್ಟೆಂಟ್ (ನಾನ್- ಟೆಕ್ನಿಕಲ್, ಗ್ರೂಪ್ ಸಿ)- ಮಾಸಿಕ ₹ 30,350- 58,250
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 17, 2023
ಇ-ಪೋಸ್ಟ್ ಆಫೀಸ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮೇ 20, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ