• Home
  • »
  • News
  • »
  • jobs
  • »
  • ಅಕ್ಕಮಹಾದೇವಿ ಯೂನಿವರ್ಸಿಟಿಯಲ್ಲಿ ಬೋಧಕ & ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಕ್ಕಮಹಾದೇವಿ ಯೂನಿವರ್ಸಿಟಿಯಲ್ಲಿ ಬೋಧಕ & ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

ಒಟ್ಟು 3 ರಿಸರ್ಚ್​ ಅಸಿಸ್ಟೆಂಟ್, ಪ್ರೊಫೆಶನಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಜನವರಿ 13, 2023 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

KSAWU Recruitment 2023: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು(Karnataka State Akkamahadevi Women’s University) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ರಿಸರ್ಚ್​ ಅಸಿಸ್ಟೆಂಟ್, ಪ್ರೊಫೆಶನಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಜನವರಿ 13, 2023 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.


ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಇಂಟರ್​​ವ್ಯೂಗೆ ಹಾಜರಾಗಿ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ kswu.ac.in ಗೆ ಭೇಟಿ ನೀಡಬಹುದು.


ಪ್ರಮುಖ ದಿನಾಂಕಗಳು:


ನೋಟಿಫಿಕೇಶನ್ ಬಿಡುಗಡೆ ದಿನಾಂಕ: 04/01/2023
ಸಂದರ್ಶನ ನಡೆಯುವ ದಿನ: 13/01/2023 ಬೆಳಗ್ಗೆ 11 ಗಂಟೆಗೆ


ಸಂದರ್ಶನ ಎಲ್ಲಿ ನಡೆಯುತ್ತದೆ?


ಸಿಂಡಿಕೇಟ್ ಹಾಲ್​
ಜ್ಞಾನ ಶಕ್ತಿ ಕ್ಯಾಂಪಸ್ (ತೊರವಿ)
ಅಥಣಿ ರಸ್ತೆ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ವಿಜಯಪುರ-586108

ಸಂಸ್ಥೆಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಹುದ್ದೆರಿಸರ್ಚ್​ ಅಸಿಸ್ಟೆಂಟ್, ಪ್ರೊಫೆಶನಲ್ ಅಸಿಸ್ಟೆಂಟ್
ಒಟ್ಟು ಹುದ್ದೆ3
ವೇತನಮಾಸಿಕ 25,000-38,800
ಉದ್ಯೋಗದ ಸ್ಥಳವಿಜಯಪುರ

ಎಷ್ಟೆಷ್ಟು ಹುದ್ದೆಗಳಿವೆ?


ರಿಸರ್ಚ್​ ಅಸೋಸಿಯೇಟ್-1
ರಿಸರ್ಚ್​ ಅಸಿಸ್ಟೆಂಟ್-1
ಪ್ರೊಫೆಶನಲ್ ಅಸಿಸ್ಟೆಂಟ್-1


ಇದನ್ನೂ ಓದಿ: Government Jobs: ನಬಾರ್ಡ್​​ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ-ಈಗಲೇ ಅಪ್ಲೈ ಮಾಡಿ


ಹುದ್ದೆಯ ವಿಧ:


ರಿಸರ್ಚ್​ ಅಸೋಸಿಯೇಟ್- ಬೋಧಕ ಹುದ್ದೆ
ರಿಸರ್ಚ್​ ಅಸಿಸ್ಟೆಂಟ್- ಬೋಧಕೇತರ ಹುದ್ದೆ
ಪ್ರೊಫೆಶನಲ್ ಅಸಿಸ್ಟೆಂಟ್- ಬೋಧಕೇತರ ಹುದ್ದೆ


ವಿದ್ಯಾರ್ಹತೆ:


ರಿಸರ್ಚ್​ ಅಸೋಸಿಯೇಟ್-ಮಹಿಳಾ ಅಧ್ಯಯನದಲ್ಲಿ ಎಂಎ, ಪಿಎಚ್​ಡಿ & NET/KSET ಪಾಸಾಗಿರಬೇಕು.
ರಿಸರ್ಚ್​ ಅಸಿಸ್ಟೆಂಟ್- ಶೇ. 55 ರಷ್ಟು ಅಂಕಗಳೊಂದಿಗೆ ಮಹಿಳಾ ಅಧ್ಯಯನದಲ್ಲಿ ಎಂಎ ಪೂರ್ಣಗೊಳಿಸಿರಬೇಕು.
ಪ್ರೊಫೆಶನಲ್ ಅಸಿಸ್ಟೆಂಟ್-ಶೇ. 55 ರಷ್ಟು ಅಂಕಗಳೊಂದಿಗೆ ಮಹಿಳಾ ಅಧ್ಯಯನದಲ್ಲಿ ಎಂಎ ಪೂರ್ಣಗೊಳಿಸಿರಬೇಕು.


ಅನುಭವ:


ರಿಸರ್ಚ್​ ಅಸೋಸಿಯೇಟ್-5 ವರ್ಷ ಬೋಧಕ ಮತ್ತು ಸಂಶೋಧನಾ ಅನುಭವ
ರಿಸರ್ಚ್​ ಅಸಿಸ್ಟೆಂಟ್-3 ವರ್ಷ ಫೀಲ್ಡ್​ ಅನುಭವ
ಪ್ರೊಫೆಶನಲ್ ಅಸಿಸ್ಟೆಂಟ್-3 ವರ್ಷ ಫೀಲ್ಡ್​ ಅನುಭವ


ವೇತನ:


ರಿಸರ್ಚ್​ ಅಸೋಸಿಯೇಟ್-ಮಾಸಿಕ ₹38,800
ರಿಸರ್ಚ್​ ಅಸಿಸ್ಟೆಂಟ್-ಮಾಸಿಕ ₹ 25,000
ಪ್ರೊಫೆಶನಲ್ ಅಸಿಸ್ಟೆಂಟ್- ಮಾಸಿಕ ₹ 25,000


ಇದನ್ನೂ ಓದಿ: JOB ALERT: ಕಾಫಿ ಬೋರ್ಡ್​​ನಲ್ಲಿ ಪದವೀಧರರಿಗೆ ಬಂಪರ್ ಉದ್ಯೋಗ- 50 ಸಾವಿರ ಸಂಬಳ


ಗಮನಿಸಿ:


ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿರುತ್ತವೆ.
ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ಎಲ್ಲಾ ಮೂಲ ದಾಖಲಾತಿಗಳು ಹಾಗೂ ಒಂದು ಸೆಟ್​ ಜೆರಾಕ್ಸ್​ ಪ್ರತಿಯನ್ನು ತಂದಿರಬೇಕು. ಜೊತೆಗೆ ರೆಸ್ಯೂಮ್​ನ್ನು ಸಂದರ್ಶನದ ಸಮಯದಲ್ಲಿ ನೀಡಬೇಕು.

Published by:Latha CG
First published: