KPSC Recruitment 2023: ಕರ್ನಾಟಕ ಲೋಕ ಸೇವಾ ಆಯೋಗ(Karnataka Public Service Commission) ಹೊರಡಿಸಿರುವ ಅಧಿಸೂಚನೆ ಪ್ರಕಾರ, ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 11, ಅಂದರೆ ನಾಳೆಯೇ ಕೊನೆಯ ದಿನವಾಗಿದೆ. ಒಟ್ಟು 4 ಸೀನಿಯರ್ ಪ್ರೋಗ್ರಾಮರ್, ನೆಟ್ವರ್ಕ್ ಅಡ್ಮಿನ್ ಹುದ್ದೆಗಳು ಖಾಲಿ ಇದ್ದು, ಈಗಾಗಲೇ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಆಸಕ್ತರು ಆಫ್ಲೈನ್/ ಪೋಸ್ಟ್ ಮುಖಾಂತರ ಈಗಲೇ ಅರ್ಜಿ ಹಾಕಬೇಕು ಎಂದು ತಿಳಿಸಿತ್ತು. ಜನವರಿ 4 ರಿಂದಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕ ರಾಜ್ಯದ ಸರ್ಕಾರಿ ನೌಕರಿಯ(Government Job) ಹುಡುಕಾಟದಲ್ಲಿದ್ದರೆ ಈಗಲೇ ಅಪ್ಲೈ ಮಾಡಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ಲೋಕ ಸೇವಾ ಆಯೋಗ |
ಹುದ್ದೆ | ಸೀನಿಯರ್ ಪ್ರೋಗ್ರಾಮರ್, ನೆಟ್ವರ್ಕ್ ಅಡ್ಮಿನ್ |
ಒಟ್ಟು ಹುದ್ದೆ | 4 |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ಕರ್ನಾಟಕ |
ಕೆಪಿಎಸ್ಸಿ ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ, ಒಟ್ಟು 4 ಹುದ್ದೆಗಳು ಖಾಲಿ ಇವೆ.
ಸೀನಿಯರ್ ಪ್ರೋಗ್ರಾಮರ್-1
ಜೂನಿಯರ್ ಪ್ರೋಗ್ರಾಮರ್-1
ಡೇಟಾ ಬೇಸ್ ಅಡ್ಮಿನ್-1
ನೆಟ್ವರ್ಕ್ ಅಡ್ಮಿನ್-1
ವಿದ್ಯಾರ್ಹತೆ ಏನಿರಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ, ಕಂಪ್ಯೂಟರ್ ಸೈನ್ಸ್/ಐಟಿಯಲ್ಲಿ ಎಂಎಸ್ ಹಾಗೂ ಎಂಸಿಎ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: Bengaluru Metro: ಬೆಂಗಳೂರು ಮೆಟ್ರೋದಲ್ಲಿ ವಿವಿಧ ಹುದ್ದೆಗಳು ಖಾಲಿ-ತಿಂಗಳಿಗೆ 50,000-1.65 ಲಕ್ಷದವರೆಗೆ ಸಂಬಳ
ಅನುಭವ:
ಸೀನಿಯರ್ ಪ್ರೋಗ್ರಾಮರ್- ಅಭ್ಯರ್ಥಿಗಳು ಪ್ರತಿಷ್ಠಿತ ಕಂಪನಿಯಲ್ಲಿ ಪ್ರೋಗ್ರಾಮಿಂಗ್ (JAVA, ASP.net, PHP ಇತ್ಯಾದಿ) ಮತ್ತು ಡೇಟಾಬೇಸ್ (MS-SQL, Oracle) ನಲ್ಲಿ ಕನಿಷ್ಠ 05 ವರ್ಷಗಳ ಅನುಭವವನ್ನು ಹೊಂದಿರಬೇಕು.
ಜೂನಿಯರ್ ಪ್ರೋಗ್ರಾಮರ್- ಅಭ್ಯರ್ಥಿಗಳು ಪ್ರತಿಷ್ಠಿತ ಕಂಪನಿಯಲ್ಲಿ ಪ್ರೋಗ್ರಾಮಿಂಗ್ (JAVA, ASP.net, PHP ಇತ್ಯಾದಿ) ಮತ್ತು ಡೇಟಾಬೇಸ್ (MS-SQL, Oracle) ನಲ್ಲಿ ಕನಿಷ್ಠ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
ಡೇಟಾ ಬೇಸ್ ಅಡ್ಮಿನ್- ಅಭ್ಯರ್ಥಿಗಳು ಹೆಸರಾಂತ IT ಕಂಪನಿಯಲ್ಲಿ MS-SQL, Oracle ನಂತಹ ದೊಡ್ಡ ಡೇಟಾಬೇಸ್ಗಳನ್ನು ನಿರ್ವಹಿಸುವಲ್ಲಿ ಕನಿಷ್ಠ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
ನೆಟ್ವರ್ಕ್ ಅಡ್ಮಿನ್- ಅಭ್ಯರ್ಥಿಗಳು ಪ್ರತಿಷ್ಠಿತ ಕಂಪನಿಯಲ್ಲಿ ನೆಟ್ವರ್ಕಿಂಗ್ ಮತ್ತು ನೆಟ್ವರ್ಕ್ ಆಡಳಿತದಲ್ಲಿ ಕನಿಷ್ಠ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸನ್ನು ಕೆಪಿಎಸ್ಸಿ ನೋಟಿಫಿಕೇಶನ್ನಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲ. ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಸೂಚನೆ:
ಅಭ್ಯರ್ಥಿಗಳನ್ನು ಗುತ್ತಿಗೆ ಮುಖಾಂತರ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 3 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳಿಗೆ ವರ್ಕ್ ಫ್ರಂ ಹೋಮ್ ಮಾಡಲು ಅವಕಾಶವಿರುವುದಿಲ್ಲ. ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು.
ಇದನ್ನೂ ಓದಿ: NIMHANS: ನಿಮ್ಹಾನ್ಸ್ನಲ್ಲಿ ಗ್ರಾಫಿಕ್ ಡಿಸೈನರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು ಖಾಲಿ- ತಿಂಗಳಿಗೆ 60 ಸಾವಿರ ಸಂಬಳ
ಅರ್ಜಿ ಸಲ್ಲಿಸುವುದು ಹೇಗೆ?
ನಿಗದಿತ ವಿದ್ಯಾರ್ಹತೆ ಹಾಗೂ ಸೂಕ್ತ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಅಪ್ಲೈ ಮಾಡಲು ಮಾಡಬೇಕಿರೋದು ಇಷ್ಟೇ. ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವಿರಗಳನ್ನು ಒಳಗೊಂಡ ರೆಸ್ಯೂಮ್ನ್ನು ಅಗತ್ಯ ದಾಖಲಾತಿಗಳೊಂದಿಗೆ ಅಧಿಸೂಚನೆ ಪ್ರಕಟಣಾ ದಿನಾಂಕದಿಂದ 7 ದಿನಗಳ ಒಳಗಾಗಿ "To be opened by Secretary Only" ಎಂದು ನಮೂದಿಸಿದ ಮುಚ್ಚಿದ ಎನ್ವಲಪ್ನಲ್ಲಿ ಈ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ:
ವಿಳಾಸ- ಶ್ರೀ ಸುರಳ್ಕರ್ ವಿಕಾಸ್ ಕಿಶೋರ್, ಭಾ.ಆ.ಸೇ.,
ಕಾರ್ಯದರ್ಶಿಗಳು
ಕರ್ನಾಟಕ ಲೋಕ ಸೇವಾ ಆಯೋಗ
ಉದ್ಯೋಗ ಸೌಧ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ