Koppal Zilla Panchayat Recruitment 2023: ಕೊಪ್ಪಳ ಜಿಲ್ಲಾ ಪಂಚಾಯತ್ನಲ್ಲಿ(Koppal Zilla Panchayat) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 9 ಅಂದರೆ ನಾಳೆಯೇ ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಹಾಕಿ, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಒಟ್ಟು 13 ಟೆಕ್ನಿಕಲ್ ಅಸಿಸ್ಟೆಂಟ್(Technical Assistant) ಹುದ್ದೆಗಳು ಖಾಲಿ ಇದ್ದು, ನಾಳೆಯೊಳಗೆ ಅಪ್ಲೈ ಮಾಡಿಬಿಡಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಹುದ್ದೆಗಳು ಮಂಜೂರಾಗಿವೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ koppal.nic.in ಗೆ ಭೇಟಿ ನೀಡಿ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು ಹೀಗಿವೆ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 09/01/2023
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಹಾಜರಾಗಬೇಕಾದ ದಿನಾಂಕ: 12/01/2023
ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಣೆ ಮಾಡುವ ದಿನಾಂಕ: 17/01/2023
ತಾತ್ಕಾಲಿಕ ಮೆರಿಟ್ ಪಟ್ಟಿಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆ ಸಲ್ಲಿಸುವ ದಿನಾಂಕ: ಜನವರಿ 18-24, 2023 (ಬಳಿಕ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ)
ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ ಮಾಡುವ ದಿನಾಂಕ: ಜನವರಿ 30, 2023
ಸಂಸ್ಥೆ | ಕೊಪ್ಪಳ ಜಿಲ್ಲಾ ಪಂಚಾಯತ್ |
ಹುದ್ದೆ | ಟೆಕ್ನಿಕಲ್ ಅಸಿಸ್ಟೆಂಟ್ |
ಒಟ್ಟು ಹುದ್ದೆ | 13 |
ವಿದ್ಯಾರ್ಹತೆ | ಪದವಿ |
ವೇತನ | ಮಾಸಿಕ 26,000 ರೂ. |
ಉದ್ಯೋಗದ ಸ್ಥಳ | ಕೊಪ್ಪಳ |
ತಾಂತ್ರಿಕ ಸಹಾಯಕರು (ಕೃಷಿ)-5
ತಾಂತ್ರಿಕ ಸಹಾಯಕರು(ಅರಣ್ಯ)-7
ತಾಂತ್ರಿಕ ಸಹಾಯಕರು (ರೇಷ್ಮೆ)-1
ಇದನ್ನೂ ಓದಿ: KSRLPS ನೇಮಕಾತಿ 2023: ಮಂಡ್ಯ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶೈಕ್ಷಣಿಕ ಅರ್ಹತೆ ಏನಿರಬೇಕು?
ತಾಂತ್ರಿಕ ಸಹಾಯಕರು (ಕೃಷಿ)- ಕೃಷಿ ವಿಭಾಗದಲ್ಲಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನ
ತಾಂತ್ರಿಕ ಸಹಾಯಕರು(ಅರಣ್ಯ)-ಅರಣ್ಯ ವಿಭಾಗದಲ್ಲಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನ
ತಾಂತ್ರಿಕ ಸಹಾಯಕರು (ರೇಷ್ಮೆ)-ರೇಷ್ಮೆ ವಿಭಾಗದಲ್ಲಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನ
ಅನುಭವ:
ತಾಂತ್ರಿಕ ಸಹಾಯಕರು (ಕೃಷಿ)- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ
ತಾಂತ್ರಿಕ ಸಹಾಯಕರು(ಅರಣ್ಯ)-ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ
ತಾಂತ್ರಿಕ ಸಹಾಯಕರು (ರೇಷ್ಮೆ)-ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ
ವಯೋಮಿತಿ:
ತಾಂತ್ರಿಕ ಸಹಾಯಕರು (ಕೃಷಿ)-21 ರಿಂದ 40 ವರ್ಷ
ತಾಂತ್ರಿಕ ಸಹಾಯಕರು(ಅರಣ್ಯ)- 21 ರಿಂದ 40 ವರ್ಷ
ತಾಂತ್ರಿಕ ಸಹಾಯಕರು (ರೇಷ್ಮೆ)- 21 ರಿಂದ 40 ವರ್ಷ
ವೇತನ ಎಷ್ಟು?
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 24,000 ರೂ. ಸಂಬಳ ನೀಡಲಾಗುತ್ತದೆ. ಜೊತೆಗೆ 2,000 ಪ್ರಯಾಣ ಭತ್ಯೆಯನ್ನು ಕೊಡಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರು ಯೂನಿವರ್ಸಿಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- 36,000 ಸಂಬಳ
ಆಯ್ಕೆ ವಿಧಾನ
ಮೆರಿಟ್ ಲಿಸ್ಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಯಾವುದೇ ಸಂದರ್ಶನ ಇರುವುದಿಲ್ಲ.
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ