Koppal Zilla Panchayat Recruitment 2023: ನೀವು ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಕೊಪ್ಪಳ ಜಿಲ್ಲಾ ಪಂಚಾಯತ್ (Koppal Zilla Panchayat ) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಹೀಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನೂ ಸಹ ಆಹ್ವಾನಿಸಿದೆ. ಒಟ್ಟು 3 ಟೆಕ್ನಿಕಲ್ ಅಸಿಸ್ಟೆಂಟ್ (Technical Assistant), ಡೇಟಾ ಎಂಟ್ರಿ ಆಪರೇಟರ್ (DEO) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಫೆಬ್ರವರಿ 23, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆನ್ಲೈನ್ (Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೊಪ್ಪಳ ಜಿಲ್ಲಾ ಪಂಚಾಯತ್ |
ಹುದ್ದೆ | ಟೆಕ್ನಿಕಲ್ ಅಸಿಸ್ಟೆಂಟ್, ಡೇಟಾ ಎಂಟ್ರಿ ಆಪರೇಟರ್ |
ಒಟ್ಟು ಹುದ್ದೆ | 3 |
ವಿದ್ಯಾರ್ಹತೆ | ಡಿಪ್ಲೊಮಾ, ಪದವಿ, ಬಿಇ/ಬಿ.ಟೆಕ್, ಎಂ.ಟೆಕ್ |
ವೇತನ | ಮಾಸಿಕ ₹ 25,000 |
ಉದ್ಯೋಗದ ಸ್ಥಳ | ಕೊಪ್ಪಳ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 23, 2023 |
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಯಾವ್ಯಾವ ಹುದ್ದೆ ಎಷ್ಟು ಇವೆ?
ಟೆಕ್ನಿಕಲ್ ಅಸಿಸ್ಟೆಂಟ್- 1
ಡಿಸ್ಟ್ರಿಕ್ಟ್ ಅಕೌಂಟ್ಸ್ ಮ್ಯಾನೇಜರ್- 1
ಡೇಟಾ ಎಂಟ್ರಿ ಆಪರೇಟರ್ (DEO)- 1
ಇದನ್ನೂ ಓದಿ: ADA Recruitment 2023: ನೀವು ಡಿಪ್ಲೊಮಾ ಮಾಡಿದ್ರೆ ಬೆಂಗಳೂರಿನಲ್ಲಿದೆ ಉದ್ಯೋಗ- ಮಾಸಿಕ ವೇತನ 80,000
ವಿದ್ಯಾರ್ಹತೆ:
ಟೆಕ್ನಿಕಲ್ ಅಸಿಸ್ಟೆಂಟ್- ಡಿಪ್ಲೊಮಾ, ಪದವಿ, ಬಿಇ/ಬಿ.ಟೆಕ್, ಎಂ.ಟೆಕ್
ಡಿಸ್ಟ್ರಿಕ್ಟ್ ಅಕೌಂಟ್ಸ್ ಮ್ಯಾನೇಜರ್- ಬಿ.ಕಾಂ, ಎಂ.ಕಾಂ
ಡೇಟಾ ಎಂಟ್ರಿ ಆಪರೇಟರ್ (DEO)- ಪದವಿ
ವೇತನ:
ಟೆಕ್ನಿಕಲ್ ಅಸಿಸ್ಟೆಂಟ್- ಮಾಸಿಕ ₹ 25,000
ಡಿಸ್ಟ್ರಿಕ್ಟ್ ಅಕೌಂಟ್ಸ್ ಮ್ಯಾನೇಜರ್- ಮಾಸಿಕ ₹ 23,000
ಡೇಟಾ ಎಂಟ್ರಿ ಆಪರೇಟರ್ (DEO)- ನಿಗದಿಪಡಿಸಿಲ್ಲ.
ಆಯ್ಕೆ ಪ್ರಕ್ರಿಯೆ:
ಕೌಶಲ್ಯ ಸಾಮರ್ಥ್ಯ ಪರಿಶೀಲನಾ ಪರೀಕ್ಷೆ
ಸಂದರ್ಶನ
ಪರೀಕ್ಷೆ ನಡೆಯುವ ಸ್ಥಳ:
ಟೆಕ್ನಿಕಲ್ ಅಸಿಸ್ಟೆಂಟ್- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ತಾಲ್ಕಲ್, ಕುಕನೂರ್ ತಾಲೂಕ್ (ಮಾರ್ಚ್, 4 ರಂದು ಬೆಳಗ್ಗೆ 11 ಗಂಟೆಗೆ)
ಡಿಸ್ಟ್ರಿಕ್ಟ್ ಅಕೌಂಟ್ಸ್ ಮ್ಯಾನೇಜರ್- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ (ಮಾರ್ಚ್, 4 ರಂದು ಬೆಳಗ್ಗೆ 11 ಗಂಟೆಗೆ)
ಡೇಟಾ ಎಂಟ್ರಿ ಆಪರೇಟರ್ (DEO)- ನ್ಯಾಷನಲ್ ಇನ್ಫರ್ಮಾಟಿಕ್ಸ್ ಸೆಂಟರ್ (NIC), ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಕೊಪ್ಪಳ (ಮಾರ್ಚ್, 4 ರಂದು ಬೆಳಗ್ಗೆ 11 ಗಂಟೆಗೆ)
ಇದನ್ನೂ ಓದಿ: KSFC Recruitment 2023: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿ- ತಿಂಗಳಿಗೆ ₹ 97,000 ಸಂಬಳ
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 08539-220844, 9902374194, 8861337786 ಗೆ ಕರೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ