• Home
  • »
  • News
  • »
  • jobs
  • »
  • ಕೊಡಗು ಜಿ.ಪಂ.ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಯಾವುದೇ ಪರೀಕ್ಷೆ, ಸಂದರ್ಶನ ಇಲ್ಲ

ಕೊಡಗು ಜಿ.ಪಂ.ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಯಾವುದೇ ಪರೀಕ್ಷೆ, ಸಂದರ್ಶನ ಇಲ್ಲ

ಕೊಡಗು ಜಿಲ್ಲಾ ಪಂಚಾಯತ್

ಕೊಡಗು ಜಿಲ್ಲಾ ಪಂಚಾಯತ್

ಕೊಡಗು ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಅಭ್ಯರ್ಥಿಗಳಿಗೆ ಮೀಸಲಾತಿ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

  • News18 Kannada
  • 5-MIN READ
  • Last Updated :
  • Kodagu, India
  • Share this:

Kodagu Zilla Panchayat Recruitment 2023: ಕೊಡಗಿನಲ್ಲಿ(Kodagu) ಸರ್ಕಾರಿ ಕೆಲಸ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಕೊಡಗು ಜಿಲ್ಲಾ ಪಂಚಾಯತ್(Kodagu Zilla Panchayat)​ ಅನೇಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಟೆಕ್ನಿಕಲ್ ಅಸಿಸ್ಟೆಂಟ್(Technical Assistant), ತಾಲೂಕು IEC ಕೋ-ಆರ್ಡಿನೇಟರ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಜನವರಿ 23, 2023ರೊಳಗೆ ಅರ್ಜಿ ಸಲ್ಲಿಸಿ. ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ. ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೊಡಗು ಜಿಲ್ಲಾ ಪಂಚಾಯತ್
ಹುದ್ದೆಟೆಕ್ನಿಕಲ್ ಅಸಿಸ್ಟೆಂಟ್, ತಾಲೂಕು IEC ಕೋ-ಆರ್ಡಿನೇಟರ್
ಒಟ್ಟು ಹುದ್ದೆ5
ವೇತನಮಾಸಿಕ ₹ 24,000
ಉದ್ಯೋಗದ ಸ್ಥಳಕೊಡಗು


ಹುದ್ದೆಯ ಮಾಹಿತಿ:
ತಾಲೂಕ್​ IEC ಕೋ-ಆರ್ಡಿನೇಟರ್- 1
ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ರಿಕಲ್ಚರ್)-2
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)-2


ಇದನ್ನೂ ಓದಿ:KPSC ನೇಮಕಾತಿ- ಈ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ


ವಿದ್ಯಾರ್ಹತೆ:
ತಾಲೂಕ್​ IEC ಕೋ-ಆರ್ಡಿನೇಟರ್- ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ
ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- ಬಿಎಸ್ಸಿ, ಎಂಎಸ್ಸಿ (ಅಗ್ರಿಕಲ್ಚರ್)
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)- ಬಿಎಸ್ಸಿ, ಎಂಎಸ್ಸಿ (ಹಾರ್ಟಿಕಲ್ಚರ್)


ವಯೋಮಿತಿ:
ಕೊಡಗು ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಅಭ್ಯರ್ಥಿಗಳಿಗೆ ಮೀಸಲಾತಿ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಕೊಡಗು ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 24,000 ರೂ. ವೇತನ ಕೊಡಲಾಗುತ್ತದೆ.


ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.


ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್​ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


ಅರ್ಜಿ ಹಾಕುವುದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/01/2023
ಅರ್ಜಿ ಸಲ್ಲಿಸಲು ಕೊನೆ ದಿನ: ಜನವರಿ 23, 2023


ಇದನ್ನೂ ಓದಿ: Bengaluru Metro: ಬೆಂಗಳೂರು ಮೆಟ್ರೋದಲ್ಲಿ ವಿವಿಧ ಹುದ್ದೆಗಳು ಖಾಲಿ-ತಿಂಗಳಿಗೆ 50,000-1.65 ಲಕ್ಷದವರೆಗೆ ಸಂಬಳ


ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ.

Published by:Latha CG
First published: