• ಹೋಂ
 • »
 • ನ್ಯೂಸ್
 • »
 • Jobs
 • »
 • KMF ನೇರ ನೇಮಕಾತಿ- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- SSLC ಪಾಸಾದವರೂ ಅಪ್ಲೈ ಮಾಡಿ

KMF ನೇರ ನೇಮಕಾತಿ- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- SSLC ಪಾಸಾದವರೂ ಅಪ್ಲೈ ಮಾಡಿ

ಕೆಎಂಎಫ್​

ಕೆಎಂಎಫ್​

ಜನವರಿ 2023 ರ KMF RBKMUL ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಫೆಬ್ರವರಿ 15ರೊಳಗೆ ಅರ್ಜಿ ಸಲ್ಲಿಸಬೇಕು.

 • News18 Kannada
 • 2-MIN READ
 • Last Updated :
 • Karnataka, India
 • Share this:

KMF RBKMUL Recruitment 2023: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(KMF) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೆಎಂಎಫ್​ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಒಟ್ಟು 24 ಡೈರಿ ಮೇಲ್ವಿಚಾರಕರು(Dairy Supervisors), ಜೂನಿಯರ್ ತಂತ್ರಜ್ಞ(Junior Technician) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಜನವರಿ 2023 ರ KMF RBKMUL ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಫೆಬ್ರವರಿ 15ರೊಳಗೆ ಅರ್ಜಿ ಸಲ್ಲಿಸಬೇಕು. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೆಎಂಎಫ್
ಹುದ್ದೆಡೈರಿ ಮೇಲ್ವಿಚಾರಕರು, ಜೂನಿಯರ್ ತಂತ್ರಜ್ಞ
ಒಟ್ಟು ಹುದ್ದೆ24
ವಿದ್ಯಾರ್ಹತೆಬಿಇ, ಡಿಪ್ಲೊಮಾ, 10ನೇ ತರಗತಿ, ITI
ವೇತನಮಾಸಿಕ ₹ 21,400-78,200
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 15, 2023
ಉದ್ಯೋಗದ ಸ್ಥಳರಾಯಚೂರು, ಬಳ್ಳಾರಿ,  ಕೊಪ್ಪಳ, ವಿಜಯನಗರ

ಹುದ್ದೆಯ ಮಾಹಿತಿ:
ಡೈರಿ ಸೂಪರ್​ವೈಸರ್ಸ್​ (ಗ್ರೇಡ್-1)- 6
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್-3)- 6
ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್-3)- 2
ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್)-5
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ &​ ಮೆಕ್ಯಾನಿಕಲ್)- 2
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್)- 2
ಜೂನಿಯರ್ ಟೆಕ್ನಿಷಿಯನ್ (ರೆಫ್ರಿಜರೇಷನ್ & ಎ.ಸಿ)-1


ಇದನ್ನೂ ಓದಿ: KAPL: ಬಿ.ಕಾಂ ಆಗಿದ್ರೆ ಇಲ್ಲಿದೆ ರಾಜ್ಯ ಸರ್ಕಾರಿ ನೌಕರಿ- ತಿಂಗಳಿಗೆ 30 ಸಾವಿರ ಸಂಬಳ


ವಿದ್ಯಾರ್ಹತೆ:
ಡೈರಿ ಸೂಪರ್​ವೈಸರ್ಸ್​ (ಗ್ರೇಡ್-1)- ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್‌ನಲ್ಲಿ ಬಿ.ಇ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್-3)- ಪದವಿ, ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಡಿಪ್ಲೊಮಾ
ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್-3)- ಬಿ.ಕಾಂ, ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ಸ್
ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್)- 10 ನೇ ತರಗತಿ
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ &​ ಮೆಕ್ಯಾನಿಕಲ್)- SSLC, ITI
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್)- SSLC, ITI
ಜೂನಿಯರ್ ಟೆಕ್ನಿಷಿಯನ್ (ರೆಫ್ರಿಜರೇಷನ್ & ಎ.ಸಿ)-SSLC, ITI


ವಯೋಮಿತಿ:
ಕೆಎಂಎಫ್​ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 15, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ


ಅರ್ಜಿ ಶುಲ್ಕ:
SC/ST/ ಪ್ರವರ್ಗ-1 & PWD ಅಭ್ಯರ್ಥಿಗಳು-500 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು-1000 ರೂ.
ಪಾವತಿಸುವ ಬಗೆ- ಆನ್​ಲೈನ್​


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನವೇತನ:
ಡೈರಿ ಸೂಪರ್​ವೈಸರ್ಸ್​ (ಗ್ರೇಡ್-1)- ಮಾಸಿಕ ₹ 40,900-78,200
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್-3)- ಮಾಸಿಕ ₹ 21,400-42,000
ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್-3)- ಮಾಸಿಕ ₹ 21,400-42,000
ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್)- ಮಾಸಿಕ ₹ 21,400-42,000
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ &​ ಮೆಕ್ಯಾನಿಕಲ್)- ಮಾಸಿಕ ₹ 21,400-42,000
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್)- ಮಾಸಿಕ ₹ 21,400-42,000
ಜೂನಿಯರ್ ಟೆಕ್ನಿಷಿಯನ್ (ರೆಫ್ರಿಜರೇಷನ್ & ಎ.ಸಿ)- ಮಾಸಿಕ ₹ 21,400-42,000


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 15, 2023


ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9108538218 ಗೆ ಕರೆ ಮಾಡಿ

Published by:Latha CG
First published: