KIMS Hubli Recruitment 2022: ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹುಬ್ಬಳ್ಳಿ(Karnataka Institute of Medical Sciences Hubli) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 12 ಕಾಸಲ್ಟಿ ಮೆಡಿಕಲ್ ಆಫೀಸರ್, ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ ಉದ್ಯೋಗ(Government Job) ಅರಸುತ್ತಿರುವವರು ಈಗಲೇ ಅರ್ಜಿ ಹಾಕಿ. ಇದೇ ಡಿಸೆಂಬರ್ 12, 2022ರಂದು ಬೆಳಗ್ಗೆ 10.30 ಕ್ಕೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕಿಮ್ಸ್- ಹುಬ್ಬಳ್ಳಿ |
ಹುದ್ದೆ | ಅಸಿಸ್ಟೆಂಟ್ ಪ್ರೊಫೆಸರ್, ಜೂನಿಯರ್ ರಿಸರ್ಚ್ ಫೆಲೋ |
ಒಟ್ಟು ಹುದ್ದೆ | 12 |
ಉದ್ಯೋಗದ ಸ್ಥಳ | ಹುಬ್ಬಳ್ಳಿ |
ವೇತನ | ಮಾಸಿಕ ₹ 30,000-1,00,000 |
ವಿದ್ಯಾರ್ಹತೆ:
ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಕಾಸಲ್ಟಿ ಮೆಡಿಕಲ್ ಆಫೀಸರ್/ GDMO- ಕಿಮ್ಸ್ ನಿಯಮಾನುಸಾರ
ಸ್ಪೀಚ್ ಲಾಂಗ್ವೇಜ್ ಪ್ಯಾಥಾಲಜಿಸ್ಟ್, ಆಡಿಯೊಲಾಜಿಸ್ಟ್- ಎಂಎಸ್ಸಿ
ಜೂನಿಯರ್ ರಿಸರ್ಚ್ ಫೆಲೋ-ಬಿಎಸ್ಸಿ, ಎಂಎಸ್ಸಿ, ಸ್ನಾತಕೋತ್ತರ ಪದವಿ, ಬ್ಯಾಚುಲರ್ ಆಫ್ ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿ
ಇದನ್ನೂ ಓದಿ: KVS Recruitment 2022: ಕೇಂದ್ರೀಯ ವಿದ್ಯಾಲಯ ಸಂಘಟನೆ ನೇಮಕಾತಿ-13,404 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ವೇತನ:
ಪ್ರೊಫೆಸರ್ - ಮಾಸಿಕ ₹ 1,00,000
ಅಸೋಸಿಯೇಟ್ ಪ್ರೊಫೆಸರ್- ಮಾಸಿಕ ₹ 70,000
ಅಸಿಸ್ಟೆಂಟ್ ಪ್ರೊಫೆಸರ್- ಮಾಸಿಕ ₹ 60,000
ಕಾಸಲ್ಟಿ ಮೆಡಿಕಲ್ ಆಫೀಸರ್/ GDMO- ಮಾಸಿಕ ₹ 50,000
ಸ್ಪೀಚ್ ಲಾಂಗ್ವೇಜ್ ಪ್ಯಾಥಾಲಜಿಸ್ಟ್- ಮಾಸಿಕ ₹ 30,000
ಆಡಿಯೊಲಾಜಿಸ್ಟ್-ಮಾಸಿಕ ₹ 30,000
ಜೂನಿಯರ್ ರಿಸರ್ಚ್ ಫೆಲೋ-ಮಾಸಿಕ ₹ 31,000
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 1/12/2022
ಸಂದರ್ಶನ ನಡೆಯುವ ದಿನಾಂಕ: 12/12/2022 ಬೆಳಗ್ಗೆ 10.30ಕ್ಕೆ
JRF ಹುದ್ದೆಗೆ ಇಮೇಲ್ ಐಡಿ ಮೂಲಕ ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ: 10/12/2022
JRF ಹುದ್ದೆಗೆ ಅರ್ಜಿಯ ಹಾರ್ಡ್ ಪ್ರತಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 11/12/2022
ಅರ್ಜಿ ಶುಲ್ಕ ಎಷ್ಟು?
GDMO, ಅಸಿಸ್ಟೆಂಟ್ ಪ್ರೊಫೆಸರ್, ಆಡಿಯೊಲಾಜಿಸ್ಟ್ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಕಟ್ಟಬೇಕು.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್(ಡಿಡಿ)
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
GDMO, ಸಹಾಯಕ ಪ್ರಾಧ್ಯಾಪಕ, ಆಡಿಯೊಲಾಜಿಸ್ಟ್ ಹುದ್ದೆಗಳಿಗೆ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ(ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಡಿಸೆಂಬರ್ 12ರಂದು ಬೆಳಗ್ಗೆ 10.30ಕ್ಕೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ನಿರ್ದೇಶಕರ ಕಚೇರಿ
ಆಡಳಿತಾತ್ಮಕ ಬ್ಲಾಕ್
ಕಿಮ್ಸ್ ಹುಬ್ಬಳ್ಳಿ
ಹುಬ್ಬಳ್ಳಿ - 580022
ಕರ್ನಾಟಕ
ಇದನ್ನೂ ಓದಿ:ISRO Recruitment 2022: ಬಿಇ/ಬಿ.ಟೆಕ್ ಆಗಿದ್ರೆ ಇಸ್ರೋದಲ್ಲಿದೆ ಬಂಪರ್ ಉದ್ಯೋಗ, ತಿಂಗಳಿಗೆ ₹ 56,000 ಸಂಬಳ
ಜೂನಿಯರ್ ರಿಸರ್ಚ್ ಫೆಲೋ (ಜೆಆರ್ಎಫ್) ಹುದ್ದೆಗಳಿಗೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, drmanjud@gmail.com ಗೆ ಡಿಸೆಂಬರ್ 10, 2022ಕ್ಕೆ ಮುಂಚೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು. ಅಥವಾ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ
ಡಾ. ಮಂಜುನಾಥ್ ಡಿ
ಕೊಠಡಿ 60-ಹೊರರೋಗಿ ವಿಭಾಗ
ಇಎನ್ಟಿ ವಿಭಾಗ
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ
ಹುಬ್ಬಳ್ಳಿ - 580021
ಕರ್ನಾಟಕ
ಇವರಿಗೆ ಡಿಸೆಂಬರ್ 11ಕ್ಕೆ ಮುನ್ನ ಕಳುಹಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ