• Home
  • »
  • News
  • »
  • jobs
  • »
  • KHPT Recruitment 2022: ಕೆಲಸ ಹುಡುಕ್ತಿದ್ರೆ ಇಲ್ಲಿದೆ ಸರ್ಕಾರಿ ನೌಕರಿ-ಜಸ್ಟ್ ರೆಸ್ಯೂಮ್ ಕಳುಹಿಸಿ ಸಾಕು!

KHPT Recruitment 2022: ಕೆಲಸ ಹುಡುಕ್ತಿದ್ರೆ ಇಲ್ಲಿದೆ ಸರ್ಕಾರಿ ನೌಕರಿ-ಜಸ್ಟ್ ರೆಸ್ಯೂಮ್ ಕಳುಹಿಸಿ ಸಾಕು!

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ಇ-ಮೇಲ್ ಮಾಡುವ ಮೂಲಕ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ.

  • Share this:

    KHPT Recruitment 2022: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್(Karnataka Health Promotion Trust) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 1 ಸೀನಿಯರ್ M & E ಸ್ಪೆಷಲಿಸ್ಟ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಿ. ಡಿಸೆಂಬರ್ 14, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last date)ವಾಗಿದೆ. ಇ-ಮೇಲ್ ಮಾಡುವ ಮೂಲಕ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್
    ಹುದ್ದೆಸೀನಿಯರ್ M & E ಸ್ಪೆಷಲಿಸ್ಟ್
    ಒಟ್ಟು ಹುದ್ದೆ1
    ವೇತನನಿಯಮಾನುಸಾರ
    ಉದ್ಯೋಗದ ಸ್ಥಳಬೆಂಗಳೂರು


    ವಿದ್ಯಾರ್ಹತೆ:
    ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಸೀನಿಯರ್ M & E ಸ್ಪೆಷಲಿಸ್ಟ್ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ, ಪಿಎಚ್​.ಡಿ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆಯಲ್ಲಿ ಡಿಸ್ಟ್ರಿಕ್ಟ್​ ಲೀಡ್ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳ ವಯಸ್ಸನ್ನು ನಿಗದಿಪಡಿಸಿಲ್ಲ.


    ಇದನ್ನೂ ಓದಿ: IISc Recruitment 2022: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ-ಈಗಲೇ ಅಪ್ಲೈ ಮಾಡಿ


    ವಯೋಮಿತಿ ಸಡಿಲಿಕೆ:
    ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಡಿಸ್ಟ್ರಿಕ್ಟ್​ ಲೀಡ್ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್​ ಐಡಿ jobs@khpt.org ಗೆ ಕಳುಹಿಸಬೇಕು.


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 01/12/2022
    ಇ-ಮೇಲ್ ಕಳುಹಿಸಲು ಕೊನೆ ದಿನ: 14/12/2022

    Published by:Latha CG
    First published: