• Home
 • »
 • News
 • »
 • jobs
 • »
 • Govt Job: 10ನೇ ತರಗತಿ ಪಾಸಾಗಿದ್ರೆ ರಾಜ್ಯ ಸರ್ಕಾರದ ನೌಕರಿ- ಈಗಲೇ ನಿಮ್ಮ ರೆಸ್ಯೂಮ್ ಇ-ಮೇಲ್ ಮಾಡಿ

Govt Job: 10ನೇ ತರಗತಿ ಪಾಸಾಗಿದ್ರೆ ರಾಜ್ಯ ಸರ್ಕಾರದ ನೌಕರಿ- ಈಗಲೇ ನಿಮ್ಮ ರೆಸ್ಯೂಮ್ ಇ-ಮೇಲ್ ಮಾಡಿ

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ತಮ್ಮ ರೆಸ್ಯೂಮ್​ನೊಂದಿಗೆ ಇ-ಮೇಲ್ ಐಡಿ jobs@khpt.org ಗೆ ಡಿಸೆಂಬರ್ 5ರೊಳಗೆ ಕಳುಹಿಸಬೇಕು.

 • News18 Kannada
 • Last Updated :
 • Bangalore [Bangalore], India
 • Share this:

  KHPT Recruitment 2022: ರಾಜ್ಯ ಸರ್ಕಾರದ ನೌಕರಿ ಹುಡುಕುತ್ತಿದ್ದರೆ ಇಲ್ಲಿದೆ ಸುವರ್ಣಾವಕಾಶ. ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್(Karnataka Health Promotion Trust)ನಲ್ಲಿ 2 ಕಮ್ಯುನಿಟಿ ಹೆಲ್ತ್​ ವರ್ಕರ್(Community Health Worker)​ ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಿ. ಡಿಸೆಂಬರ್ 5, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ನಿಮ್ಮ ರೆಸ್ಯೂಮ್​ನ್ನು ಇ-ಮೇಲ್(E-Mail) ಮಾಡಿ.


  ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​
  ಹುದ್ದೆಯ ಹೆಸರುಕಮ್ಯುನಿಟಿ ಹೆಲ್ತ್​ ವರ್ಕರ್
  ಒಟ್ಟು ಹುದ್ದೆ2
  ಉದ್ಯೋಗದ ಸ್ಥಳಬೆಂಗಳೂರು
  ವೇತನನಿಯಮಾನುಸಾರ

  ಪ್ರಮುಖ ದಿನಾಂಕಗಳು:


  ನೋಟಿಫಿಕೇಶನ್ ಬಿಡುಗಡೆ ದಿನಾಂಕ: 24/11/2022
  ಇ-ಮೇಲ್ ಮಾಡಲು ಕೊನೆ ದಿನ: 05/12/2022


  ಅರ್ಹತಾ ಮಾನದಂಡಗಳೇನು?


  ಶೈಕ್ಷಣಿಕ ಅರ್ಹತೆ
  ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.


  ಇದನ್ನೂ ಓದಿ: Government Job: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್​​ನಲ್ಲಿ SSLC ಪಾಸಾದವರಿಗೆ ಉದ್ಯೋಗ, ಸಂಬಳ 47,000


  ಅನುಭವ ಎಷ್ಟಿರಬೇಕು?
  ಅಭ್ಯರ್ಥಿಗಳು ಕಮ್ಯುನಿಟಿ ವರ್ಕ್​ನಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.


  ಅರ್ಜಿ ಸಲ್ಲಿಸುವುದು ಹೇಗೆ?
  ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ತಮ್ಮ ರೆಸ್ಯೂಮ್​ನೊಂದಿಗೆ ಇ-ಮೇಲ್ ಐಡಿ jobs@khpt.org ಗೆ ಡಿಸೆಂಬರ್ 5ರೊಳಗೆ ಕಳುಹಿಸಬೇಕು.


  ಅರ್ಜಿ ಇಲ್ಲಿದೆ:


  02-Community-Health-Worker-Posts-Application-Form-KHPT


  ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?


  ಲಿಖಿತ ಪರೀಕ್ಷೆ
  ಸಂದರ್ಶನ

  Published by:Latha CG
  First published: