KFCSC Recruitment 2023: ಕೆಲಸ ಹುಡುಕುತ್ತಿರುವ ನಿರುದ್ಯೋಗಿ ಯುವಕರಿಗೆ ಕರ್ನಾಟಕ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರವು ತನ್ನ ಸಂಸ್ಥೆಯಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ (Karnataka Food and Civil Supplies Corporation Limited) ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ನೇರ ನೇಮಕಾತಿ ಇದಾಗಿದ್ದು, ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಒಟ್ಟು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ ಒಟ್ಟು 386 ಜೂನಿಯರ್ ಅಸಿಸ್ಟೆಂಟ್ (Junior Assistant), ಸೀನಿಯರ್ ಅಸಿಸ್ಟೆಂಟ್ (Senior Assistant) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ತಡಮಾಡದೇ ಅರ್ಜಿ ಹಾಕಿ.
ಇದನ್ನೂ ಓದಿ: HSBC is Hiring: ಸೀನಿಯರ್ ಸಾಫ್ಟ್ವೇರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಹಾಕಿ- 9 ಲಕ್ಷ ಸಂಬಳ
ಸಂಸ್ಥೆ | ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ |
ಹುದ್ದೆ | ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್ |
ಒಟ್ಟು ಹುದ್ದೆ | 386 |
ವೇತನ | ಮಾಸಿಕ ₹ 22,800- 43,200 |
ಉದ್ಯೋಗದ ಸ್ಥಳ | ಕರ್ನಾಟಕ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 17, 2023 |
ವಿದ್ಯಾರ್ಹತೆ & ವಯೋಮಿತಿ:
ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಿ.
ವಯೋಮಿತಿ ಸಡಿಲಿಕೆ:
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: IRCTC Recruitment 2023: ರೈಲ್ವೆ ಇಲಾಖೆ ಕೆಲಸ ಮಿಸ್ ಮಾಡ್ಕೋಬೇಡಿ- ನಾಳೆಯೊಳಗೆ ಅರ್ಜಿ ಹಾಕಿ
ಉದ್ಯೋಗದ ಸ್ಥಳ:
ಕರ್ನಾಟಕ
ವೇತನ:
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 22,800- 43,200
ಸೀನಿಯರ್ ಅಸಿಸ್ಟೆಂಟ್- ಮಾಸಿಕ ₹ 14,550-26,700
ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್)- ಮಾಸಿಕ ₹ 14,550-26,700
ಕ್ವಾಲಿಟಿ ಇನ್ಸ್ಪೆಕ್ಟರ್- ಮಾಸಿಕ ₹ 14,550-26,700
ಜೂನಿಯರ್ ಅಸಿಸ್ಟೆಂಟ್- ಮಾಸಿಕ ₹ 11,600-21,000
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 17, 2023
ಇ-ಪೋಸ್ಟ್ ಆಫೀಸ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮೇ 20, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ