• ಹೋಂ
 • »
 • ನ್ಯೂಸ್
 • »
 • Jobs
 • »
 • KEA Jobs: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳು ಖಾಲಿ- ತಿಂಗಳಿಗೆ 1 ಲಕ್ಷ ಸಂಬಳ

KEA Jobs: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳು ಖಾಲಿ- ತಿಂಗಳಿಗೆ 1 ಲಕ್ಷ ಸಂಬಳ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ keaopportunities@gmail.com ಗೆ ಮಾರ್ಚ್ 12 ರೊಳಗೆ ಕಳುಹಿಸಬೇಕು.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(Karnataka Examinations Authority) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 3 ಸೀನಿಯರ್ ಪ್ರೋಗ್ರಾಮರ್ (Senior Programmer), ಡೇಟಾಬೇಸ್ ಅಟ್ಮಿನಿಸ್ಟ್ರೇಟರ್ (Database Administrator) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕ ಸರ್ಕಾರದ ಉದ್ಯೋಗ(Government Job) ಮಾಡಬಯಸುವವರಿಗೆ ಹಾಗೂ ಬೆಂಗಳೂರಿನಲ್ಲಿ ವೃತ್ತಿ ಜೀವನ ನಡೆಸಲು ಮುಂದಾಗಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್​ 12, 2023 ಕೊನೆಯ ದಿನ(Last Date)ವಾಗಿದ್ದು, ಅಭ್ಯರ್ಥಿಗಳು ಕೂಡಲೇ ಇ-ಮೇಲ್ ಮಾಡಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆಸೀನಿಯರ್ ಪ್ರೋಗ್ರಾಮರ್
ಒಟ್ಟು ಹುದ್ದೆ3
ವಿದ್ಯಾರ್ಹತೆಇ/ಬಿ.ಟೆಕ್, ಎಂಎಸ್ಸಿ, ಎಂಸಿಎ,
ವೇತನಮಾಸಿಕ ₹ 75,000-1,00,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 12, 2023

ಹುದ್ದೆಯ ಮಾಹಿತಿ:
ಸೀನಿಯರ್ ಪ್ರೋಗ್ರಾಮರ್- 2
ಡೇಟಾಬೇಸ್ ಅಸ್ಮಿನಿಸ್ಟ್ರೇಟರ್- 1


KEA- ನೋಟಿಫಿಕೇಶನ್


ವಿದ್ಯಾರ್ಹತೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಎಂಎಸ್ಸಿ, ಎಂಸಿಎ, CS/ITಯಲ್ಲಿ ಎಂ.ಟೆಕ್ ಪೂರ್ಣಗೊಳಿಸಿರಬೇಕು.


ಅನುಭವ:
ಸೀನಿಯರ್ ಪ್ರೋಗ್ರಾಮರ್- ಅಭ್ಯರ್ಥಿಗಳು ASP.NET, SSRS, SSIS, ವೆಬ್ ಅಪ್ಲಿಕೇಶನ್ ಸಿಸ್ಟಮ್‌ನಲ್ಲಿ 03 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರಬೇಕು.
ಡೇಟಾಬೇಸ್ ಅಸ್ಮಿನಿಸ್ಟ್ರೇಟರ್- ಅಭ್ಯರ್ಥಿಗಳು ವೆಬ್ಲಾಜಿಕ್ ಸರ್ವರ್‌ನಲ್ಲಿ ನಮೂನೆಗಳು ಮತ್ತು ವರದಿಗಳೊಂದಿಗೆ RDBMS, SQL ಸರ್ವರ್, Oracle 12 C ನಲ್ಲಿ 03 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರಬೇಕು.
ವೇತನ:
ಸೀನಿಯರ್ ಪ್ರೋಗ್ರಾಮರ್- ಮಾಸಿಕ ₹ 1,00,000
ಡೇಟಾಬೇಸ್ ಅಸ್ಮಿನಿಸ್ಟ್ರೇಟರ್- ಮಾಸಿಕ ₹ 75,000


ಇದನ್ನೂ ಓದಿ: RailTel Recruitment 2023: ರೈಲ್ವೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ- ಹುಬ್ಬಳ್ಳಿಯಲ್ಲಿ ಪೋಸ್ಟಿಂಗ್


ಆಯ್ಕೆ ಪ್ರಕ್ರಿಯೆ:
ಪ್ರಾಕ್ಟಿಕಲ್ ಟೆಸ್ಟ್​
ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ keaopportunities@gmail.com ಗೆ ಮಾರ್ಚ್ 12 ರೊಳಗೆ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 07/03/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಮಾರ್ಚ್ 12, 2023

Published by:Latha CG
First published: