KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(Karnataka Examinations Authority) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರೋಗ್ರಾಮರ್(Programmer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕ ಸರ್ಕಾರದ ಉದ್ಯೋಗ(Government Job) ಮಾಡಬಯಸುವವರಿಗೆ ಹಾಗೂ ಬೆಂಗಳೂರಿನಲ್ಲಿ ವೃತ್ತಿ ಜೀವನ ನಡೆಸಲು ಮುಂದಾಗಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಜನವರಿ 14, 2023 ಕೊನೆಯ ದಿನ(Last Date)ವಾಗಿದ್ದು, ಅಭ್ಯರ್ಥಿಗಳು ಕೂಡಲೇ ಇ-ಮೇಲ್ ಮಾಡಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ |
ಹುದ್ದೆ | ಪ್ರೋಗ್ರಾಮರ್ |
ಒಟ್ಟು ಹುದ್ದೆ | 2 |
ವೇತನ | ಮಾಸಿಕ ₹ 25,000-50,000 |
ಉದ್ಯೋಗದ ಸ್ಥಳ | ಬೆಂಗಳೂರು |
ಹುದ್ದೆಯ ಮಾಹಿತಿ
ಪ್ರೋಗ್ರಾಮರ್ -1 ಹುದ್ದೆ
ಪ್ರೋಗ್ರಾಮರ್ (ಫ್ರೆಶರ್)- 1 ಹುದ್ದೆ
ವಿದ್ಯಾರ್ಹತೆ:
ಪ್ರೋಗ್ರಾಮರ್ -ಬಿಇ/ಬಿ.ಟೆಕ್, CSE/ITಯಲ್ಲಿ ಎಂಟೆಕ್, ಎಂಎಸ್ಸಿ, ಎಂಸಿಎ
ಪ್ರೋಗ್ರಾಮರ್ (ಫ್ರೆಶರ್)- ಬಿಸಿಎ
ಅನುಭವ:
ಅಭ್ಯರ್ಥಿಗಳು ವೆಬ್ಲಾಜಿಕ್ ಸರ್ವರ್ನಲ್ಲಿ ನಮೂನೆಗಳು ಮತ್ತು ವರದಿಗಳೊಂದಿಗೆ Oracle 12 C ನಲ್ಲಿ 02 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರಬೇಕು.
ವಯಸ್ಸು ಎಷ್ಟಿರಬೇಕು?
ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂಬುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿಲ್ಲ.
ವೇತನ:
ಪ್ರೋಗ್ರಾಮರ್ -ಮಾಸಿಕ ₹ 50,000
ಪ್ರೋಗ್ರಾಮರ್ (ಫ್ರೆಶರ್)- ಮಾಸಿಕ ₹ 25,000
ಇದನ್ನೂ ಓದಿ: ಕರ್ನಾಟಕದಲ್ಲಿ 2,500 ಪ್ರೌಢಶಾಲಾ ಶಿಕ್ಷಕರ ನೇಮಕ- ಆಸಕ್ತರು ಈಗಲೇ ಅಪ್ಲೈ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ keaopportunities@gmail.com ಗೆ ಜನವರಿ 14ರೊಳಗೆ ಕಳುಹಿಸಿ.
ಪ್ರಮುಖ ದಿನಾಂಕಗಳು
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 05/01/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: 14/01/2023
ಪ್ರಾಯೋಗಿಕ ಪರೀಕ್ಷೆ ನಡೆಯುವ ದಿನಾಂಕ: ಜನವರಿ 17, 2023
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಪ್ರಾಯೋಗಿಕ ಪರೀಕ್ಷೆಯ ಅವಧಿ- 3 ಗಂಟೆಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ