Karnataka Revenue Department Recruitment 2022: ಕರ್ನಾಟಕ ಕಂದಾಯ ಇಲಾಖೆಯಲ್ಲಿ(Karnataka Revenue Department) ಖಾಲಿ ಇರುವ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ರಾಜ್ಯ ಸರ್ಕಾರದ ನೌಕರಿ ಹುಡುಕುತ್ತಿರುವವರು ಈಗಲೇ ಅರ್ಜಿ ಹಾಕಿ. ಅಟಲ್ ಜೀ ಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ ಇರುವ 1 ಸಾಫ್ಟ್ವೇರ್ ಡೆವಲಪರ್(Software Developer) ಮತ್ತು 1 ಆ್ಯಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್(Android Application Developer) ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಡಿಸೆಂಬರ್ 23, 2022, ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ(Last Date). ಸರ್ಕಾರಿ ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಈಗಲೇ ರೆಸ್ಯೂಮ್ ಇ-ಮೇಲ್ ಮಾಡಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ಕಂದಾಯ ಇಲಾಖೆ |
ಹುದ್ದೆ | ಸಾಫ್ಟ್ವೇರ್ ಡೆವಲಪರ್, ಆ್ಯಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್ |
ಒಟ್ಟು ಹುದ್ದೆ | 2 |
ವೇತನ | ಮಾಸಿಕ ₹ 40,000-80,000 |
ಉದ್ಯೋಗದ ಸ್ಥಳ | ಕರ್ನಾಟಕ |
ವಿದ್ಯಾರ್ಹತೆ ಏನಿರಬೇಕು?
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕಂಪ್ಯೂಟರ್ ಸೈನ್ಸ್/ECE/IT/ಇನ್ಫರ್ಮೇಶನ್ ಸೈನ್ಸ್ ವಿಭಾಗದಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು. ಅಥವಾ MCA ಉತ್ತೀರ್ಣರಾಗಿರಬೇಕು.
ಇದನ್ನೂ ಓದಿ: UPSC CDS Recruitment 2023: ವಾಯುಪಡೆ, ನೌಕಾಪಡೆ & ಸೇನೆಯಲ್ಲಿ ಅಧಿಕಾರಿಯಾಗಲು ಇಲ್ಲಿದೆ ಸುವರ್ಣಾವಕಾಶ
ಅನುಭವ ಎಷ್ಟು ವರ್ಷ?
ಸಾಫ್ಟ್ವೇರ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು NET ಡೆವಲಪ್ಮೆಂಟ್ನಲ್ಲಿ ಕನಿಷ್ಠ 3-5 ವರ್ಷ ಕೆಲಸ ಮಾಡಿದ ಅನುಭವ, MS SQL ನಲ್ಲಿ MVC ಆರ್ಕಿಟೆಕ್ಚರ್ (C# ಪೂರ್ಣ ಸ್ಟಾಕ್) ಡೆವಲಪ್ಮೆಂಟ್ ಮತ್ತು ಡೆವಲಪ್ಮೆಂಟ್ನಲ್ಲಿ ಕನಿಷ್ಠ 2 ವರ್ಷಗಳ ಅನುಭವವನ್ನು ಹೊಂದಿರಬೇಕು.
ಆ್ಯಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪ್ಮೆಂಟ್ನಲ್ಲಿ ಕನಿಷ್ಠ 3ರಿಂದ 5 ವರ್ಷ ಕೆಲಸ ಮಾಡಿದ ಅನುಭವ, ಜೊತೆಗೆ ಜಾವಾ ಲಾಂಗ್ವೇಜ್, Retrofit API ಇಂಟಿಗ್ರೇಷನ್, Sqlite ಡೇಟಾಬೇಸ್ನಲ್ಲಿ ಕೆಲಸ ಮಾಡಿದ ಅನುಭವ ಹಾಗೂ UI/UX ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.
ವೇತನ ಎಷ್ಟು ನೀಡಲಾಗುತ್ತೆ?
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಸಾಫ್ಟ್ವೇರ್ ಡೆವಲಪರ್ ಹಾಗೂ ಆಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 40,000-80,000 ವೇತನ ನೀಡಲಾಗುತ್ತದೆ.
ಇದನ್ನೂ ಓದಿ: Government Job: ಬಿ.ಎಡ್ ಅಭ್ಯರ್ಥಿಗಳಿಗೆ ಸರ್ಕಾರಿ ನೌಕರಿ- 50 ವರ್ಷದವರೂ ಅಪ್ಲೈ ಮಾಡಬಹುದು
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ದಿನಾಂಕ 23/12/2022ರೊಳಗೆ ಇ-ಮೇಲ್ ಐಡಿ ajskcareers@gmail.com ಗೆ ಕಳುಹಿಸಬೇಕು.
ಡಿಸೆಂಬರ್ 14ರಂದು ಹುದ್ದೆಯ ಕುರಿತಾಗಿ ನೋಟಿಫಿಕೇಶನ್ ಬಿಡುಗಡೆಯಾಗಿದೆ. ಅರ್ಜಿ ಹಾಕಲು ಡಿಸೆಂಬರ್ 23, 2022 ಅಂದರೆ ನಾಳೆಯೇ ಕೊನೆಯ ದಿನವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ