• ಹೋಂ
  • »
  • ನ್ಯೂಸ್
  • »
  • Jobs
  • »
  • Karnataka Jobs: ಕಂದಾಯ ಇಲಾಖೆಯಲ್ಲಿ 2 ಸಾವಿರ ಹುದ್ದೆಗಳ ನೇಮಕ- ಅರ್ಜಿ ಹಾಕಲು ಇವತ್ತೇ ಲಾಸ್ಟ್ ​ಡೇಟ್

Karnataka Jobs: ಕಂದಾಯ ಇಲಾಖೆಯಲ್ಲಿ 2 ಸಾವಿರ ಹುದ್ದೆಗಳ ನೇಮಕ- ಅರ್ಜಿ ಹಾಕಲು ಇವತ್ತೇ ಲಾಸ್ಟ್ ​ಡೇಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್- 080-22221038 ಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರೊಳಗೆ ಕರೆ ಮಾಡಿ.

  • Share this:

SSLR Recruitment 2023: ಸರ್ವೇ ಸೆಟಲ್​ಮೆಂಟ್​ & ಲ್ಯಾಂಡ್​ ರೆಕಾರ್ಡ್ಸ್​ ಕರ್ನಾಟಕದಲ್ಲಿ (Survey Settlement and Land Records Karnataka) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ (ಮಾರ್ಚ್​ 10) ಕೊನೆಯ ದಿನವಾಗಿದೆ. ಈ ಮೊದಲು ಫೆಬ್ರವರಿ 20, 2023 ಅರ್ಜಿ ಹಾಕಲು ಕೊನೆಯ ದಿನವಾಗಿತ್ತು. ಬಳಿಕ ಆ ದಿನಾಂಕವನ್ನು ಮಾರ್ಚ್​ 10ರವರೆಗೆ ವಿಸ್ತರಿಸಲಾಗಿತ್ತು. ಆ ಪ್ರಕಾರ, ಅಭ್ಯರ್ಥಿಗಳು ಇಂದು ಸಂಜೆಯೊಳಗೆ ಅರ್ಜಿ ಹಾಕಬೇಕು. ಒಟ್ಟು 2000 ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್​ (Licensed Landlords) ಹುದ್ದೆಗಳು ಖಾಲಿ ಇವೆ. ಪಿಯುಸಿ, ಡಿಪ್ಲೋಮಾ, ಬಿಇ, ಬಿ.ಟೆಕ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್​ಲೈನ್​ (Online)​ ಮೂಲಕ ಅರ್ಜಿ ಸಲ್ಲಿಸಬೇಕು. ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.


ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹುದ್ದೆಗಳಿವೆ?
ಉಡುಪಿ- 86
ಉತ್ತರ ಕನ್ನಡ- 75
ಕೊಡಗು- 25
ಕೋಲಾರ- 53
ಗದಗ- 54
ಚಿಕ್ಕಮಗಳೂರು- 83
ಚಿತ್ರದುರ್ಗ- 73
ಚಾಮರಾಜನಗರ- 35
ತುಮಕೂರು- 110
ದಕ್ಷಿಣ ಕನ್ನಡ- 36
ದಾವಣಗೆರೆ- 95
ಧಾರವಾಡ- 92
ಬೆಂಗಳೂರು ಗ್ರಾಮಾಂತರ- 66
ಬೆಂಗಳೂರು ಜಿಲ್ಲೆ- 125
ಬಿಜಾಪುರ- 32
ಬೆಳಗಾವಿ - 85
ಬಳ್ಳಾರಿ- 55
ವಿಜಯನಗರ- 47
ಬಾಗಲಕೋಟೆ- 47
ಬೀದರ್- 35
ಮಂಡ್ಯ- 71
ಮೈಸೂರು- 40
ಯಾದಗಿರಿ- 20
ರಾಮನಗರ - 100
ರಾಯಚೂರು- 40
ಶಿವಮೊಗ್ಗ- 125
ಹಾವೇರಿ- 152
ಹಾಸನ- 60
ಕೊಪ್ಪಳ- 28
ಕಲಬುರಗಿ- 10
ಚಿಕ್ಕಬಳ್ಳಾಪುರ- 45
ಒಟ್ಟು -2000 ಹುದ್ದೆಗಳು


ಶೈಕ್ಷಣಿಕ ಅರ್ಹತೆ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್​, ಐಟಿಐ ಪೂರ್ಣಗೊಳಿಸಿರಬೇಕು.




ವಯೋಮಿತಿ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 20, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 65 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಇದನ್ನೂ ಓದಿ:


ಅನುಭವ:
ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಲ್ಯಾಂಡ್ ಸರ್ವೇ ರೆವೆನ್ಯೂ ಸಿಸ್ಟಮ್​ನಲ್ಲಿ ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.


ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಪಾವತಿಸುವ ವಿಧಾನ- ಆನ್​ಲೈನ್


ಇತರೆ ಶುಲ್ಕ:
ಟ್ರೈನಿಂಗ್ ಶುಲ್ಕ- 5000 ರೂ. (ಡಿಮ್ಯಾಂಡ್ ಡ್ರಾಫ್ಟ್​)
ಲೈಸೆನ್ಸ್​ ಶುಲ್ಕ- 3000 ರೂ.


ಉದ್ಯೋಗದ ಸ್ಥಳ:
ಕರ್ನಾಟಕ


ಆಯ್ಕೆ ಪ್ರಕ್ರಿಯೆ:
ಆನ್​ಲೈನ್​ ಟೆಸ್ಟ್​
ಲಿಖಿತ ಪರೀಕ್ಷೆ


ವೇತನ:
ನಿಗದಿಪಡಿಸಿಲ್ಲ


ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 10, 2023 (ಇಂದು)


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್- 080-22221038 ಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರೊಳಗೆ ಕರೆ ಮಾಡಿ.

Published by:Latha CG
First published: