• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಕರ್ನಾಟಕ ಸಿಟಿ ಕಾರ್ಪೊರೇಷನ್​​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇವತ್ತೇ ಅರ್ಜಿ ಹಾಕಿ

Job Alert: ಕರ್ನಾಟಕ ಸಿಟಿ ಕಾರ್ಪೊರೇಷನ್​​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇವತ್ತೇ ಅರ್ಜಿ ಹಾಕಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

Karnataka City Corporation Recruitment 2023: ಕರ್ನಾಟಕ ಸಿಟಿ ಕಾರ್ಪೊರೇಷನ್(Karnataka City Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1214 ಗ್ರೂಪ್​ ಡಿ(Group D) ಅಂದರೆ ಪೌರಕಾರ್ಮಿಕ(Pourakarmika) ಹುದ್ದೆಗಳು ಖಾಲಿ ಇವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಫೆಬ್ರವರಿ 14, 2023 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ಪೋಸ್ಟ್​(Post) ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕರ್ನಾಟಕ ಸಿಟಿ ಕಾರ್ಪೊರೇಷನ್
ಹುದ್ದೆಪೌರಕಾರ್ಮಿಕ
ಒಟ್ಟು ಹುದ್ದೆ1214
ವಿದ್ಯಾರ್ಹತೆಅಗತ್ಯ ಇಲ್ಲ
ವೇತನಮಾಸಿಕ ₹ 17,000-28,950
ಉದ್ಯೋಗದ ಸ್ಥಳಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 14, 2023 (ಇಂದು)

ಹುದ್ದೆಯ ಮಾಹಿತಿ:
ಚಿಕ್ಕಬಳ್ಳಾಪುರ ಸಿಟಿ ಕಾರ್ಪೊರೇಷನ್- 102
ಹಾಸನ ಸಿಟಿ ಕಾರ್ಪೊರೇಷನ್- 60
ಬಾಲಗಕೋಟೆ ಸಿಟಿ ಕಾರ್ಪೊರೇಷನ್- 438
ವಿಜಯಪುರ ಸಿಟಿ ಕಾರ್ಪೊರೇಷನ್- 151
ದಾವಣಗೆರೆ ಸಿಟಿ ಕಾರ್ಪೊರೇಷನ್- 114
ಬಳ್ಳಾರಿ ಸಿಟಿ ಕಾರ್ಪೊರೇಷನ್- 229
ಚಿತ್ರದುರ್ಗ ಸಿಟಿ ಕಾರ್ಪೊರೇಷನ್- 120


ಇದನ್ನೂ ಓದಿ: ESIC Karnataka: ಬೆಂಗಳೂರಿನಲ್ಲಿ ಪ್ರೊಫೆಸರ್ & ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವಿದ್ಯಾರ್ಹತೆ & ಅನುಭವ:
ಯಾವುದೇ ಸಿಟಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ನೇರ ಪಾವತಿ/ ಕಲ್ಯಾಣ/ ದಿನಗೂಲಿ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಯಾವುದೇ ಶೈಕ್ಷಣಿಕ ಅರ್ಹತೆ ಇರಬೇಕು ಎಂದು ತಿಳಿಸಿಲ್ಲ.


ವೇತನ:
ಮಾಸಿಕ ₹ 17,000-28,950


ಅರ್ಜಿ ಸಲ್ಲಿಸುವುದು ಹೇಗೆ?


ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಬಾಗಲಕೋಟೆ ಮಹಾನಗರ ಪಾಲಿಕೆ: ಅಧ್ಯಕ್ಷರು, ಜಿಲ್ಲಾ ಆಯ್ಕೆ ಮತ್ತು ನಾಗರಿಕ ಸೇವಾ ನೇರ ನೇಮಕಾತಿ (ವಿಶೇಷ) ಪ್ರಾಧಿಕಾರ ಮತ್ತು ಉಪ ಆಯುಕ್ತರು, ಬಾಗಲಕೋಟೆ.


ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ: ಅಧ್ಯಕ್ಷರು, ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ, ಚಿಕ್ಕಬಳ್ಳಾಪುರ.


ಹಾಸನ ಮಹಾನಗರ ಪಾಲಿಕೆ: ಪೌರಾಯುಕ್ತರು, ನಗರ ಸಭೆ, ಹಾಸನ


ವಿಜಯಪುರ ಮಹಾನಗರ ಪಾಲಿಕೆ: ಅಧ್ಯಕ್ಷರು, ನಾಗರಿಕ ಸೇವಾ ನೇರ ನೇಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರ ಮತ್ತು ಆಯುಕ್ತರು, ವಿಜಯಪುರ ನಗರ ನಿಗಮ


ದಾವಣಗೆರೆ ಮಹಾನಗರ ಪಾಲಿಕೆ: ದಾವಣಗೆರೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ರೈಲ್ವೆ ನಿಲ್ದಾಣದ ಎದುರು, ಪಿ.ಬಿ.ರಸ್ತೆ, ದಾವಣಗೆರೆ.


ಬಳ್ಳಾರಿ ಮಹಾನಗರ ಪಾಲಿಕೆ: ಅಧ್ಯಕ್ಷರು, ನಾಗರಿಕ ಸೇವಾ ಹುದ್ದೆಗಳ ನೇರ ನೇಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ.


ಚಿತ್ರದುರ್ಗ ಮಹಾನಗರ ಪಾಲಿಕೆ: ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ


ಇದನ್ನೂ ಓದಿ: JOBS: ಕೇಂದ್ರ ಜಲ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಆಸಕ್ತರು Apply ಮಾಡಿ


ಅರ್ಜಿ ಸಲ್ಲಿಸಲು ಕೊನೆಯ ದಿನ:


ಚಿಕ್ಕಬಳ್ಳಾಪುರ ಸಿಟಿ ಕಾರ್ಪೊರೇಷನ್- ಫೆಬ್ರವರಿ 11, 2023
ಹಾಸನ ಸಿಟಿ ಕಾರ್ಪೊರೇಷನ್- ಫೆಬ್ರವರಿ 13, 2023
ಬಾಲಗಕೋಟೆ ಸಿಟಿ ಕಾರ್ಪೊರೇಷನ್-ಫೆಬ್ರವರಿ 13, 2023
ವಿಜಯಪುರ ಸಿಟಿ ಕಾರ್ಪೊರೇಷನ್- ಫೆಬ್ರವರಿ 14, 2023
ದಾವಣಗೆರೆ ಸಿಟಿ ಕಾರ್ಪೊರೇಷನ್- ಫೆಬ್ರವರಿ 14, 2023
ಬಳ್ಳಾರಿ ಸಿಟಿ ಕಾರ್ಪೊರೇಷನ್- ಫೆಬ್ರವರಿ 13, 2023
ಚಿತ್ರದುರ್ಗ ಸಿಟಿ ಕಾರ್ಪೊರೇಷನ್- ಫೆಬ್ರವರಿ 13, 2023




ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 14, 2023


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08352-278529 ಗೆ ಕರೆ ಮಾಡಬಹುದು.

Published by:Latha CG
First published: