Karnataka City Corporation Recruitment 2023: ಕರ್ನಾಟಕ ಸಿಟಿ ಕಾರ್ಪೊರೇಷನ್(Karnataka City Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1214 ಗ್ರೂಪ್ ಡಿ(Group D) ಅಂದರೆ ಪೌರಕಾರ್ಮಿಕ(Pourakarmika) ಹುದ್ದೆಗಳು ಖಾಲಿ ಇವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಫೆಬ್ರವರಿ 14, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ಪೋಸ್ಟ್(Post) ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ಸಿಟಿ ಕಾರ್ಪೊರೇಷನ್ |
ಹುದ್ದೆ | ಗ್ರೂಪ್ ಡಿ (ಪೌರಕಾರ್ಮಿಕ) |
ಒಟ್ಟು ಹುದ್ದೆ | 1214 |
ವೇತನ | ಮಾಸಿಕ ₹ 17,000-28,950 |
ಅರ್ಜಿ ಸಲ್ಲಿಕೆ ಬಗೆ | ಆಫ್ಲೈನ್ |
ಇದನ್ನೂ ಓದಿ: Job Alert: ತುಮಕೂರಿನಲ್ಲಿ ರಾಜ್ಯ ಸರ್ಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ- ನಾಳೆಯೇ ಸಂದರ್ಶನ
ವಿದ್ಯಾರ್ಹತೆ & ಅನುಭವ:
ಯಾವುದೇ ಸಿಟಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ನೇರ ಪಾವತಿ/ ಕಲ್ಯಾಣ/ ದಿನಗೂಲಿ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಯಾವುದೇ ಶೈಕ್ಷಣಿಕ ಅರ್ಹತೆ ಇರಬೇಕು ಎಂದು ತಿಳಿಸಿಲ್ಲ.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಮಾಸಿಕ ₹ 17,000-28,950
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 14, 2023
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08352-278529 ಗೆ ಕರೆ ಮಾಡಬಹುದು.
ಇದನ್ನೂ ಓದಿ: LIC ನೇಮಕಾತಿ- 300 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾದವರು Apply ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಬಾಗಲಕೋಟೆ ಮಹಾನಗರ ಪಾಲಿಕೆ: ಅಧ್ಯಕ್ಷರು, ಜಿಲ್ಲಾ ಆಯ್ಕೆ ಮತ್ತು ನಾಗರಿಕ ಸೇವಾ ನೇರ ನೇಮಕಾತಿ (ವಿಶೇಷ) ಪ್ರಾಧಿಕಾರ ಮತ್ತು ಉಪ ಆಯುಕ್ತರು, ಬಾಗಲಕೋಟೆ.
ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ: ಅಧ್ಯಕ್ಷರು, ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ, ಚಿಕ್ಕಬಳ್ಳಾಪುರ.
ಹಾಸನ ಮಹಾನಗರ ಪಾಲಿಕೆ: ಪೌರಾಯುಕ್ತರು, ನಗರ ಸಭೆ, ಹಾಸನ
ವಿಜಯಪುರ ಮಹಾನಗರ ಪಾಲಿಕೆ: ಅಧ್ಯಕ್ಷರು, ನಾಗರಿಕ ಸೇವಾ ನೇರ ನೇಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರ ಮತ್ತು ಆಯುಕ್ತರು, ವಿಜಯಪುರ ನಗರ ನಿಗಮ
ದಾವಣಗೆರೆ ಮಹಾನಗರ ಪಾಲಿಕೆ: ದಾವಣಗೆರೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ರೈಲ್ವೆ ನಿಲ್ದಾಣದ ಎದುರು, ಪಿ.ಬಿ.ರಸ್ತೆ, ದಾವಣಗೆರೆ.
ಬಳ್ಳಾರಿ ಮಹಾನಗರ ಪಾಲಿಕೆ: ಅಧ್ಯಕ್ಷರು, ನಾಗರಿಕ ಸೇವಾ ಹುದ್ದೆಗಳ ನೇರ ನೇಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ.
ಚಿತ್ರದುರ್ಗ ಮಹಾನಗರ ಪಾಲಿಕೆ: ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ
ಅರ್ಜಿ ಸಲ್ಲಿಸಲು ಕೊನೆಯ ದಿನ:
ಚಿಕ್ಕಬಳ್ಳಾಪುರ ಸಿಟಿ ಕಾರ್ಪೊರೇಷನ್- ಫೆಬ್ರವರಿ 11, 2023
ಹಾಸನ ಸಿಟಿ ಕಾರ್ಪೊರೇಷನ್- ಫೆಬ್ರವರಿ 13, 2023
ಬಾಲಗಕೋಟೆ ಸಿಟಿ ಕಾರ್ಪೊರೇಷನ್-ಫೆಬ್ರವರಿ 13, 2023
ವಿಜಯಪುರ ಸಿಟಿ ಕಾರ್ಪೊರೇಷನ್- ಫೆಬ್ರವರಿ 14, 2023
ದಾವಣಗೆರೆ ಸಿಟಿ ಕಾರ್ಪೊರೇಷನ್- ಫೆಬ್ರವರಿ 14, 2023
ಬಳ್ಳಾರಿ ಸಿಟಿ ಕಾರ್ಪೊರೇಷನ್- ಫೆಬ್ರವರಿ 13, 2023
ಚಿತ್ರದುರ್ಗ ಸಿಟಿ ಕಾರ್ಪೊರೇಷನ್- ಫೆಬ್ರವರಿ 13, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ