• ಹೋಂ
  • »
  • ನ್ಯೂಸ್
  • »
  • Jobs
  • »
  • KAPL Recruitment 2023: ಅಗ್ರೋವೆಟ್ ಸೇವಾ ಪ್ರತಿನಿಧಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

KAPL Recruitment 2023: ಅಗ್ರೋವೆಟ್ ಸೇವಾ ಪ್ರತಿನಿಧಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರ್ಹ ಅಭ್ಯರ್ಥಿಗಳು KAPLನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜೂನ್ 15, 2023ರೊಳಗೆ ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

  • News18 Kannada
  • 2-MIN READ
  • Last Updated :
  • Karnataka, India
  • Share this:

KAPL Recruitment 2023: ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​(Karnataka Antibiotics and Pharmaceuticals Limited) ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 10 ಅಗ್ರೋವೆಟ್ ಸೇವಾ ಪ್ರತಿನಿಧಿ ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು KAPLನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜೂನ್ 15, 2023ರೊಳಗೆ ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
ಹುದ್ದೆಅಗ್ರೋವೆಟ್ ಸೇವಾ ಪ್ರತಿನಿಧಿ
ಒಟ್ಟು ಹುದ್ದೆ10
ವಿದ್ಯಾರ್ಹತೆಪದವಿ
ವೇತನಮಾಸಿಕ ₹ 26,000
ಉದ್ಯೋಗದ ಸ್ಥಳಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್ 15, 2023

ಹುದ್ದೆಯ ಮಾಹಿತಿ
ಆಂಧ್ರಪ್ರದೇಶ-2
ಬಿಹಾರ-1
ಹರಿಯಾಣ-1
ಕರ್ನಾಟಕ-2
ತಮಿಳುನಾಡು-1
ತೆಲಂಗಾಣ-1
ಉತ್ತರ ಪ್ರದೇಶ-1
ಪಶ್ಚಿಮ ಬಂಗಾಳ-1




ವಿದ್ಯಾರ್ಹತೆ:
ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಫಾರ್ಮಸಿ/ ಸೈನ್ಸ್​/ ಕಾಮರ್ಸ್​/ ಆರ್ಟ್ಸ್​ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: Banking Jobs: ಸೆಂಟ್ರಲ್ ಬ್ಯಾಂಕ್​​ನಲ್ಲಿ 25 ಹುದ್ದೆಗಳು ಖಾಲಿ ಇವೆ- ಆಸಕ್ತರು ಅರ್ಜಿ ಹಾಕಿ


ವಯೋಮಿತಿ:
ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ


ವೇತನ:
ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 26,000 ಸಂಬಳ ಕೊಡಲಾಗುತ್ತದೆ.


ಇದನ್ನೂ ಓದಿ: NIMHANS Recruitment 2023: ನಿಮ್ಹಾನ್ಸ್​ನಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 26 ಸಾವಿರ ಸಂಬಳ


ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಡೆಪ್ಯುಟಿ ಜನರಲ್ ಮ್ಯಾನೇಜರ್ [HRD]
KAPL ಹೌಸ್
ಪ್ಲಾಟ್ ನಂ 37
ARKA ದಿ ಬಿಸಿನೆಸ್ ಸೆಂಟರ್
2 ನೇ ಹಂತ
ಪೀಣ್ಯ ಕೈಗಾರಿಕಾ ಪ್ರದೇಶ
ಬೆಂಗಳೂರು - 58


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 15, 2023

First published: