Government Job: ಲಾರಿ ಚಾಲಕರಿಗೆ ಸರ್ಕಾರಿ ಹುದ್ದೆಗಳು ಲಭ್ಯ ಇವೆ. ಹೌದು, ನೀವು ಲಾರಿ ಅಥವಾ ಟ್ರಕ್ ಚಾಲಕರಾಗಿದ್ದರೆ ಗದಗ ಜಿಲ್ಲಾಧಿಕಾರಿಗಳ ಕಚೇರಿ(Gadag DC Office)ಯಲ್ಲಿ ಲೋಡರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ನಾಳೆಯೇ ಕೊನೆ ದಿನ. ಒಟ್ಟು 58 ಲೋಡರ್(Loader) ಮತ್ತು ಕ್ಲೀನರ್(Cleaner) ಹುದ್ದೆಗಳು ಇದ್ದು, ಡ್ರೈವರ್ಗಳು ಈ ಕೂಡಲೇ ಅರ್ಜಿ ಹಾಕಿ.
ಹುದ್ದೆಯ ಕುರಿತಾದ ಮಾಹಿತಿ ಇಲ್ಲಿದೆ:
ಸಂಸ್ಥೆ | ಗದಗ ಜಿಲ್ಲಾಧಿಕಾರಿಗಳ ಕಚೇರಿ |
ಹುದ್ದೆ | ಲೋಡರ್, ಕ್ಲೀನರ್ |
ಒಟ್ಟು ಹುದ್ದೆ | 58 |
ಸ್ಥಳ | ಗದಗ |
ಅರ್ಜಿ ಸಲ್ಲಿಕೆ ಬಗೆ | ಆಫ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ ದಿನಾಂಕ: 10/11/2022
ಅರ್ಜಿ ಸಲ್ಲಿಸಲು ಕೊನೆ ದಿನ : 28/11/2022
ಅನುಭವ ಇದ್ದರೆ ಮಾತ್ರ ಕೆಲಸಕ್ಕೆ ಆಯ್ಕೆ:
ಲೋಡರ್ & ಕ್ಲೀನರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಮುನ್ಸಿಪಾಲಿಟಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಗದಗ-ಬೆಟಗೇರಿ ಮುನ್ಸಿಪಾಲಿಟಿ, ಗಜೇಂದ್ರಗಡ ಮುನ್ಸಿಪಾಲಿಟಿ, ಲಕ್ಷ್ಮೇಶ್ವರ್ ಮುನ್ಸಿಪಾಲಿಟಿ, ಮುಂಡರಗಿ ಮುನ್ಸಿಪಾಲಿಟಿ, ನರಗುಂದ ಮುನ್ಸಿಪಾಲಿಟಿ, ರೋಣ ಮುನ್ಸಿಪಾಲಿಟಿ, ಮುಳಗುಂದ ಟೌನ್ ಮುನ್ಸಿಪಾಲಿಟಿ, ನರೆಗಲ್ಲ ಟೌನ್ ಮುನ್ಸಿಪಾಲಿಟಿ ಮತ್ತು ಶಿರಹಟ್ಟಿ ಟೌನ್ ಪಂಚಾಯತ್-ಇಲ್ಲಿ ಡ್ರೈವರ್, ಕ್ಲೀನರ್ ಆಗಿ ಕೆಲಸ ಮಾಡಿದ ಅನುಭವ ಇರಬೇಕು.
ಇದನ್ನೂ ಓದಿ: Typist Job: ಟೈಪಿಸ್ಟ್ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಅವಕಾಶ- ತಿಂಗಳಿಗೆ 42,000 ಸಂಬಳ
ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು?
ಗದಗ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 55 ವರ್ಷ ಇರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನಾಳೆಯೊಳಗೆ(ನ.28) ಕಳುಹಿಸಬೇಕು.
ಕೊಠಡಿ ಸಂಖ್ಯೆ-123
ಮೊದಲನೇ ಮಹಡಿ
ಜಿಲ್ಲಾ ನಗರಾಭಿವೃದ್ಧಿ ಘಟಕ
ಜಿಲ್ಲಾಧಿಕಾರಿಗಳ ಕಚೇರಿ
ಗದಗ
ಅರ್ಜಿಯು ಇದೇ ವಿಳಾಸದಲ್ಲಿ ದೊರೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ