• ಹೋಂ
  • »
  • ನ್ಯೂಸ್
  • »
  • Jobs
  • »
  • Job Mela: ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ ಬೃಹತ್ ಉದ್ಯೋಗ ಮೇಳ- ಆಸಕ್ತರು ಪಾಲ್ಗೊಳ್ಳಿ

Job Mela: ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ ಬೃಹತ್ ಉದ್ಯೋಗ ಮೇಳ- ಆಸಕ್ತರು ಪಾಲ್ಗೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಿಯುಸಿ ಕಾಲೇಜು ಆವರಣ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು- ಇಲ್ಲಿ ಜಾಬ್​ ಮೇಳ ನಡೆಯಲಿದೆ.

  • Share this:

ಕೆಲಸ ಹುಡುಕುತ್ತಿರುವವರಿಗೆ ಇಲ್ಲೊಂದು ಸೂಪರ್ ಗುಡ್​ನ್ಯೂಸ್(Good News) ಇದೆ. ಬೆಂಗಳೂರಿನಲ್ಲಿ ಸರ್ಕಾರದ(Government) ವತಿಯಿಂದ ನಾಳೆ ಅಂದರೆ ಫೆಬ್ರವರಿ 11, 2023ರಂದು ಬೃಹತ್ ಉದ್ಯೋಗ ಮೇಳ(Job Mela) ನಡೆಯಲಿದೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ(Bengaluru) ಉದ್ಯೋಗ ಮೇಳೆ ನಡೆಸುತ್ತಿದೆ. ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಾಳೆ ಉದ್ಯೋಗ ಮೇಳ ಎಲ್ಲಿ ನಡೆಯಲಿದೆ? ಯಾರ್ಯಾರು ಭಾಗವಹಿಸಬಹುದು? ಅಭ್ಯರ್ಥಿಗಳಿಗೆ ಅರ್ಹತೆ ಏನಿರಬೇಕು? ಎಂಬ ಮಾಹಿತಿ ಇಲ್ಲಿದೆ.


ಉದ್ಯೋಗ ಮೇಳ ಎಲ್ಲಿ? ಎಷ್ಟು ಗಂಟೆಗೆ


ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ- ಜಿಲ್ಲಾ ಕೌಶಲ್ಯ ಮಿಷನ್, ಬೆಂಗಳೂರು ಫೆಬ್ರವರಿ 11, 2023ರಂದು ಉದ್ಯೋಗ ಮೇಳವನ್ನು ಆಯೋಜಿಸಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಿಯುಸಿ ಕಾಲೇಜು ಆವರಣ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು- ಇಲ್ಲಿ ಜಾಬ್​ ಮೇಳ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ನಡೆಯುತ್ತದೆ.


ಇದನ್ನೂ ಓದಿ: University Jobs: ಬೆಳಗಾವಿಯ ರಾಣಿ ಚೆನ್ನಮ್ಮ ಯೂನಿವರ್ಸಿಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ಈಗಾಗಲೇ ಅಂದರೆ ಫೆಬ್ರವರಿ 9, 2023ರಂದು ಪ್ರಿ-ಇಂಟರ್​​ವ್ಯೂ ಓರಿಯಂಟೇಶನ್ ಪ್ರೋಗ್ರಾಮ್ ನಡೆದಿದೆ. ಈ ಕಾರ್ಯಕ್ರಮವು ರೋಟರಿ ಹಾಲ್, ಸರ್ಕಾರಿ ಹೈಸ್ಕೂಲ್ ಕಾಂಪೌಂಡ್, 13ನೇ ಕ್ರಾಸ್, ಮಲ್ಲೇಶ್ವರಂನಲ್ಲಿ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಪ್ರೋಗ್ರಾಂ ಜರುಗಿತು.ಯಾರ್ಯಾರು ಭಾಗವಹಿಸಬಹುದು?
ಸರ್ಕಾರದ ವತಿಯಿಂದ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಯಾವುದೇ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಭಾಗವಹಿಸಬಹುದು. ಅಂದರೆ ಎಸ್​ಎಸ್​ಎಲ್​ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿಇ, ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಈ ಜಾಬ್​ ಮೇಳದಲ್ಲಿ ಪಾಲ್ಗೊಳ್ಳಬಹುದು.


ಹಲವು ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ.


ಅಭ್ಯರ್ಥಿಗಳು ತರಬೇಕಾದ ದಾಖಲೆಗಳೇನು?
ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್​ ಪ್ರತಿ, ಪಾಸ್​​ಪೋರ್ಟ್​ ಫೋಟೋ, ಆಧಾರ್ ಕಾರ್ಡ್​ ಹಾಗೂ ರೆಸ್ಯೂಮ್​​​ ತರಬೇಕು. ಇಷ್ಟು ದಾಖಲೆಗಳ ಸಮೇತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.


ಇದನ್ನೂ ಓದಿ: Karnataka Jobs: ಆರೋಗ್ಯ ಇಲಾಖೆಯಲ್ಲಿ 23 ಹುದ್ದೆಗಳು ಖಾಲಿ- ಇವತ್ತೇ ಅರ್ಜಿ ಹಾಕಿ


ಅಭ್ಯರ್ಥಿಗಳು ಮೊದಲಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ರಿಜಿಸ್ಟರ್ ಆಗುವ ಲಿಂಕ್ ಇಲ್ಲಿದೆ- https://skillconnect.kaushalkar.com/candidatereg

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊಬೈಲ್​ ನಂಬರ್- 9964907444, 8105020115, 9108347465 ಗೆ ಕರೆ ಮಾಡಿ.

Published by:Latha CG
First published: