• Home
  • »
  • News
  • »
  • jobs
  • »
  • Job Alert: ಬೆಳಗಾವಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗ, 10ನೇ ತರಗತಿ ಪಾಸಾಗಿದ್ರೆ ಸಾಕು

Job Alert: ಬೆಳಗಾವಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗ, 10ನೇ ತರಗತಿ ಪಾಸಾಗಿದ್ರೆ ಸಾಕು

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಎಸ್​ಎಸ್​ಎಲ್​ಸಿ/ 10ನೇ ತರಗತಿ ಪಾಸಾಗಿರಬೇಕು.

  • News18 Kannada
  • 3-MIN READ
  • Last Updated :
  • Belgaum, India
  • Share this:

    Belagavi Zilla Panchayath Recruitment 2022: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಗುಡ್​​ ನ್ಯೂಸ್​ ಇಲ್ಲಿದೆ. ಬೆಳಗಾವಿ ಜಿಲ್ಲಾ ಪಂಚಾಯತ್​​ನಲ್ಲಿ(Belagavi Zilla Panchayath) ಎಸ್​ಎಸ್​ಎಲ್​ಸಿ(SSLC) ಪಾಸಾದವರಿಗೆ ಬಂಪರ್ ಉದ್ಯೋಗ ಇದೆ. ಅರ್ಜಿ ಸಲ್ಲಿಸಲು ಇವತ್ತೇ ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. 1 ಮಲ್ಟಿಪರ್ಪಸ್ ಕ್ಲೀನರ್/ ಸೆಕ್ಯುರಿಟಿ(Multipurpose Cleaner/ Security) ಹುದ್ದೆಗಳು ಖಾಲಿ ಇದ್ದು, ಮಹಿಳಾ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಬೆಳಗಾವಿ(Belagavi)ಯ ಸ್ಥಳೀಯ ಅಭ್ಯರ್ಥಿಗಳು(Local Candidates) ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.


    ಹುದ್ದೆಯ ಕುರಿತಾದ ಮಾಹಿತಿ ಇಲ್ಲಿದೆ:

    ಸಂಸ್ಥೆಬೆಳಗಾವಿ ಜಿಲ್ಲಾ ಪಂಚಾಯತ್​​
    ಹುದ್ದೆಮಲ್ಟಿಪರ್ಪಸ್ ಕ್ಲೀನರ್/ ಸೆಕ್ಯುರಿಟಿ
    ವಿದ್ಯಾರ್ಹತೆ10ನೇ ತರಗತಿ
    ಉದ್ಯೋಗದ ಸ್ಥಳಬೆಳಗಾವಿ
    ವೇತನಮಾಸಿಕ ₹ 15,000


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/11/2022
    ಅರ್ಜಿ ಸಲ್ಲಿಸಲು ಕೊನೆ ದಿನ : 28/11/2022


    ಅರ್ಜಿ ಶುಲ್ಕ ಎಷ್ಟು?
    ಯಾವುದೇ ಅರ್ಜಿ ಶುಲ್ಕ ಇಲ್ಲ


    ಇದನ್ನೂ ಓದಿ: Job Alert: ಹಿಂದಿ ಟ್ರಾನ್ಸ್​ಲೇಟರ್ ಹುದ್ದೆಗೆ 75,000 ಸಂಬಳ- ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ


    ವಿದ್ಯಾರ್ಹತೆ ಏನಿರಬೇಕು?


    ಬೆಳಗಾವಿ ಜಿಲ್ಲಾ ಪಂಚಾಯತ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮಲ್ಟಿಪರ್ಪಸ್ ಕ್ಲೀನರ್/ ಸೆಕ್ಯುರಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಎಸ್​ಎಸ್​ಎಲ್​ಸಿ/ 10ನೇ ತರಗತಿ ಪಾಸಾಗಿರಬೇಕು.


    ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು?


    ಬೆಳಗಾವಿ ಜಿಲ್ಲಾ ಪಂಚಾಯತ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮಲ್ಟಿಪರ್ಪಸ್ ಕ್ಲೀನರ್/ ಸೆಕ್ಯುರಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.


    ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 28, 2022ರೊಳಗೆ ಕಳುಹಿಸಬೇಕು.


    ಡೆಪ್ಯುಟಿ ಡೈರೆಕ್ಟರ್ ಕಚೇರಿ
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
    ಶಿವಾಜಿನಗರ
    ಬೆಳಗಾವಿ


    ಇದನ್ನೂ ಓದಿ: Govt Job: ಚಿಕ್ಕಬಳ್ಳಾಪುರ ಡಿಸಿ ಆಫೀಸ್​​ನಲ್ಲಿದೆ ಬಂಪರ್ ಉದ್ಯೋಗ, ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ


    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0831-2407235 ಗೆ ಕರೆ ಮಾಡಬಹುದು.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು