Bagalkot Zilla Panchayat Recruitment 2022: ಬಾಗಲಕೋಟೆ ಜಿಲ್ಲಾ ಪಂಚಾಯತ್(Bagalkot Zilla Panchayat )ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆಯ ದಿನವಾಗಿದೆ. ಒಟ್ಟು 54 ಬಿಲ್ ಕಲೆಕ್ಟರ್(Bill Collector), ಕ್ಲರ್ಕ್(Clerk), ಅಟೆಂಡರ್(Attender) ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಶುಲ್ಕ:
PWD ಅಭ್ಯರ್ಥಿಗಳು-100 ರೂ.
ಎಸ್ಸಿ/ಎಸ್ಟಿ/ ಪ್ರವರ್ಗ-1/ ಮಾಜಿ ಸೈನಿಕ ಅಭ್ಯರ್ಥಿಗಳು- 200 ರೂ.
ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 300 ರೂ.
ಸಾಮಾನ್ಯ ಅಭ್ಯರ್ಥಿಗಳು-500 ರೂ.
ಅರ್ಜಿ ಶುಲ್ಕ ಪಾವತಿಸುವ ಬಗೆ-ಆನ್ಲೈನ್ (ಬಾಗಲಕೋಟೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಗಲಕೋಟೆ)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 23/12/2022
ಸಂಸ್ಥೆ | ಬಾಗಲಕೋಟೆ ಜಿಲ್ಲಾ ಪಂಚಾಯತ್ |
ಹುದ್ದೆ | ಬಿಲ್ ಕಲೆಕ್ಟರ್, ಕ್ಲರ್ಕ್, ಅಟೆಂಡರ್ |
ಒಟ್ಟು ಹುದ್ದೆ | 54 |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ಬಾಗಲಕೋಟೆ |
ಹುದ್ದೆಯ ಮಾಹಿತಿ:
ಬಿಲ್ ಕಲೆಕ್ಟರ್- 10 ಹುದ್ದೆ
ಕ್ಲರ್ಕ್ & ಡೇಟಾ ಎಂಟ್ರಿ ಆಪರೇಟರ್(DEO)- 12 ಹುದ್ದೆ
ಅಟೆಂಡರ್ (ಪ್ಯೂನ್)- 32 ಹುದ್ದೆ
ವಯೋಮಿತಿ:
ಬಾಗಲಕೋಟೆ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 23, 2022ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಎಸ್ಸಿ/ಎಸ್ಟಿ/ ಪ್ರವರ್ಗ-1 ಅಭ್ಯರ್ಥಿಗಳು-5 ವರ್ಷ
ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
PWD/ ವಿಧವಾ ಅಭ್ಯರ್ಥಿಗಳು- 10 ವರ್ಷ
ಇದನ್ನೂ ಓದಿ: Government Job: ಬಿ.ಎಡ್ ಅಭ್ಯರ್ಥಿಗಳಿಗೆ ಸರ್ಕಾರಿ ನೌಕರಿ- 50 ವರ್ಷದವರೂ ಅಪ್ಲೈ ಮಾಡಬಹುದು
ವಿದ್ಯಾರ್ಹತೆ:
ಬಿಲ್ ಕಲೆಕ್ಟರ್- ಪಿಯುಸಿ
ಕ್ಲರ್ಕ್ & ಡೇಟಾ ಎಂಟ್ರಿ ಆಪರೇಟರ್(DEO)- ಪಿಯುಸಿ
ಅಟೆಂಡರ್ (ಪ್ಯೂನ್)- 10ನೇ ತರಗತಿ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 08354-235576 ಗೆ ಕರೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ