FPI Bangalore Recruitment 2023: ಬೆಂಗಳೂರಿನ ಹಣಕಾಸು ನೀತಿ ಸಂಸ್ಥೆ (Fiscal Policy Institute Bangalore)ಯಲ್ಲಿ ಖಾಲಿ ಇರುವ ಜೂನಿಯರ್ ಪ್ರೋಗ್ರಾಮರ್(Junior Programmer) ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆಯ ದಿನವಾಗಿದೆ(Last Date). ಹೀಗಾಗಿ ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕುವ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಹಣಕಾಸು ನೀತಿ ಸಂಸ್ಥೆ, ಬೆಂಗಳೂರು |
ಹುದ್ದೆ | ಜೂನಿಯರ್ ಪ್ರೋಗ್ರಾಮರ್ |
ವಿದ್ಯಾರ್ಹತೆ | ಬಿಇ/ ಬಿ.ಟೆಕ್ |
ವೇತನ | ಮಾಸಿಕ 50,000 ರೂ |
ವಯೋಮಿತಿ | 30 ವರ್ಷ |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಜನವರಿ 27, 2023 (ನಾಳೆ) |
ವಯೋಮಿತಿ:
ಹಣಕಾಸು ನೀತಿ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 12, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: KHPT: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ನಲ್ಲಿ ಖಾಲಿ ಇರುವ ಹುದ್ದೆಗೆ ನಾಳೆಯೊಳಗೆ ಅರ್ಜಿ ಹಾಕಿ
ವೇತನ:
ಹಣಕಾಸು ನೀತಿ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 50,000 ರೂ. ಸಂಬಳ ಕೊಡಲಾಗುತ್ತದೆ.
ಉದ್ಯೋಗದ ಸ್ಥಳ:
ಹಣಕಾಸು ನೀತಿ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು
ಹಣಕಾಸು ನೀತಿ ಸಂಸ್ಥೆ
ಬೆಂಗಳೂರು- ಮೈಸೂರು ರಸ್ತೆ
ಕೆಂಗೇರಿ
ಬೆಂಗಳೂರು-560060
ಇದನ್ನೂ ಓದಿ: Job Alert: 12 ಲಕ್ಷ ಸ್ಯಾಲರಿ ಪ್ಯಾಕೇಜ್- ಡಿಗ್ರಿ ಪಾಸಾದವರಿಗೆ ಬೆಂಗಳೂರಿನಲ್ಲಿ ಬಂಪರ್ ಉದ್ಯೋಗ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 27, 2023 (ನಾಳೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ