ESIC Karnataka Recruitment 2022: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ(Employees State Insurance Corporation Karnataka)ದಲ್ಲಿ 53 ಸೀನಿಯರ್ ರೆಸಿಡೆಂಟ್(Senior Resident) ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಇದೇ ಡಿಸೆಂಬರ್ 29ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಲಬುರ್ಗಿ(Kalaburagi)ಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ |
ಹುದ್ದೆ | ಸೀನಿಯರ್ ರೆಸಿಡೆಂಟ್ |
ಒಟ್ಟು ಹುದ್ದೆ | 53 |
ವೇತನ | ಮಾಸಿಕ ₹ 1,23,485 |
ಉದ್ಯೋಗದ ಸ್ಥಳ | ಕಲಬುರ್ಗಿ |
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ, ಎಂಡಿ, ಎಂಎಸ್, ಡಿಎನ್ಬಿ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: KIMS Recruitment 2022: ಹುಬ್ಬಳ್ಳಿ ಕಿಮ್ಸ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ Apply ಮಾಡಿ
ವಯೋಮಿತಿ:
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 29, 2022ಕ್ಕೆ ಗರಿಷ್ಠ 44 ವರ್ಷ ಮೀರಿರಬಾರದು.
ವೇತನ:
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 1,23,485 ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 225 ರೂ.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್ (ಡಿಡಿ)
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ: JOB ALERT: ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾಸಿಕ ವೇತನ ₹ 48,000
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 03/12/2022
ಸಂದರ್ಶನ ನಡೆಯುವ ದಿನ: 29/12/2022
ಸಂದರ್ಶನ ನಡೆಯುವ ಸ್ಥಳ:
ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
ಕಲಬುರಗಿ
ಕರ್ನಾಟಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ