ECHS Recruitment 2023: ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ(Ex-Servicemen Contributory Health Scheme) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಒಟ್ಟು 4 ಕ್ಲರ್ಕ್, ಸಫಾಯಿವಾಲಾ, ಚೌಕಿದಾರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆಯ ದಿನವಾಗಿದೆ. ಏಪ್ರಿಲ್ 21, 2023 ಅರ್ಜಿ ಸಲ್ಲಿಸಲು ಲಾಸ್ಟ್ ಡೇಟ್ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು (Bengaluru) ಮತ್ತು ತುಮಕೂರಿನಲ್ಲಿ (Tumkur) ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ |
ಹುದ್ದೆ | ಕ್ಲರ್ಕ್, ಸಫಾಯಿವಾಲಾ, ಚೌಕಿದಾರ್ |
ಒಟ್ಟು ಹುದ್ದೆ | 4 |
ವಿದ್ಯಾರ್ಹತೆ | 8ನೇ ತರಗತಿ, ಪದವಿ |
ವೇತನ | ಮಾಸಿಕ ₹ 75,000 |
ಉದ್ಯೋಗದ ಸ್ಥಳ | ಬೆಂಗಳೂರು, ತುಮಕೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 21, 2023 (ನಾಳೆ) |
ಇದನ್ನೂ ಓದಿ:Southern Railway Recruitment 2023: PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ ಕೆಲಸ- ಉತ್ತಮ ಸಂಬಳ
ವಿದ್ಯಾರ್ಹತೆ:
ಡೆಂಟಿಸ್ಟ್- ಬಿಡಿಎಸ್
ಕ್ಲರ್ಕ್- ಪದವಿ
ಸಫಾಯಿವಾಲಾ- ಲಿಟರಸಿ
ಚೌಕಿದಾರ್- 8ನೇ ತರಗತಿ
ವೇತನ:
ಡೆಂಟಿಸ್ಟ್- ಮಾಸಿಕ ₹ 75,000
ಕ್ಲರ್ಕ್- ಮಾಸಿಕ ₹ 16,800
ಸಫಾಯಿವಾಲಾ- ಮಾಸಿಕ ₹ 16,800
ಚೌಕಿದಾರ್- ಮಾಸಿಕ ₹ 16,800
ಅನುಭವ:
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ: Federal Bank Recruitment 2023: ಫೆಡರಲ್ ಬ್ಯಾಂಕ್ನಲ್ಲಿ ಬಂಪರ್ ಉದ್ಯೋಗಾವಕಾಶ- ಡಿಗ್ರಿ ಆಗಿದ್ರೆ ಅರ್ಜಿ ಹಾಕಿ
ಸಂದರ್ಶನ ನಡೆಯುವ ಸ್ಥಳ:
ಸ್ಟೇಷನ್ HQ ECHS ಸೆಲ್
ಜಾಲಹಳ್ಳಿ (ಪೂರ್ವ)
ಬೆಂಗಳೂರು
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
OIC ಸ್ಟೇಷನ್ HQ ECHS ಸೆಲ್
C/o ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿ
ಬೆಂಗಳೂರು (KA)-560013
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 21, 2023
ಸಂದರ್ಶನ ನಡೆಯುವ ದಿನ: ಏಪ್ರಿಲ್ 26, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ