DSU Bangalore Urban Recruitment 2023: ಜಿಲ್ಲಾ ಸರ್ವೇಕ್ಷಣಾ ಘಟಕ ಬೆಂಗಳೂರು ನಗರ(District Survey Unit Bangalore Urban) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಸ್ಪೆಷಲಿಸ್ಟ್ ಡಾಕ್ಟರ್ಸ್, ನರ್ಸ್, ಪ್ರೈವೇಟ್ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಜನವರಿ 30ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ರಾಜ್ಯ ಸರ್ಕಾರದ ಹುದ್ದೆ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಜಿಲ್ಲಾ ಸರ್ವೇಕ್ಷಣಾ ಘಟಕ ಬೆಂಗಳೂರು ನಗರ |
ಹುದ್ದೆ | ಸ್ಪೆಷಲಿಸ್ಟ್ ಡಾಕ್ಟರ್ಸ್, ನರ್ಸ್, ಪ್ರೈವೇಟ್ ಕನ್ಸಲ್ಟೆಂಟ್ |
ಒಟ್ಟು ಹುದ್ದೆ | 13 |
ವಿದ್ಯಾರ್ಹತೆ | ಪದವಿ, ಡಿಪ್ಲೋಮಾ, ಎಂಬಿಬಿಎಸ್ |
ವೇತನ | ಮಾಸಿಕ ₹ 14,000- 1,10,000 |
ಉದ್ಯೋಗದ ಸ್ಥಳ | ಬೆಂಗಳೂರು |
ಸಂದರ್ಶನ ನಡೆಯುವ ದಿನಾಂಕ | ಜನವರಿ 30, 2023 |
ವಿದ್ಯಾರ್ಹತೆ:
ಸ್ಪೆಷಲಿಸ್ಟ್ ಡಾಕ್ಟರ್ಸ್- ಎಂಬಿಬಿಎಸ್, ಡಿಪ್ಲೋಮಾ, ರೇಡಿಯೋಥೆರಪಿಯಲ್ಲಿ ಪದವಿ
ನರ್ಸ್ - ಜಿಎನ್ಎಂ
ಪ್ರೈವೇಟ್ ಕನ್ಸಲ್ಟೆಂಟ್ಸ್- ಸೈನ್ಸ್ನಲ್ಲಿ ಪದವಿ, ಕೌನ್ಸೆಲಿಂಗ್/ ಹೆಲ್ತ್ ಎಜುಕೇಷನ್/ ಸಮೂಹ ಮಾಧ್ಯಮ, ಡಿಪ್ಲೊಮಾ
ಇದನ್ನೂ ಓದಿ: Banking Jobs: ಸೆಂಟ್ರಲ್ ಬ್ಯಾಂಕ್ನಲ್ಲಿ ಪದವೀಧರರಿಗೆ ಬಂಪರ್ ಉದ್ಯೋಗ- ಈಗಲೇ ಅರ್ಜಿ ಹಾಕಿ
ಅನುಭವ:
ಸ್ಪೆಷಲಿಸ್ಟ್ ಡಾಕ್ಟರ್ಸ್- ಅಭ್ಯರ್ಥಿಗಳು ಆಸ್ಪತ್ರೆಯಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.
ನರ್ಸ್ - ಅಭ್ಯರ್ಥಿಗಳು ಕನಿಷ್ಠ 1 ವರ್ಷ ಅನುಭವ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಪ್ರೈವೇಟ್ ಕನ್ಸಲ್ಟೆಂಟ್ಸ್- ಅಭ್ಯರ್ಥಿಗಳು ಹೆಲ್ತ್ ಕೇರ್ ಫೆಸಿಲಿಟಿಯಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ವೇತನ:
ಸ್ಪೆಷಲಿಸ್ಟ್ ಡಾಕ್ಟರ್ಸ್-ಮಾಸಿಕ ₹ 1,10,000
ನರ್ಸ್ - ಮಾಸಿಕ ₹ 14,000
ಪ್ರೈವೇಟ್ ಕನ್ಸಲ್ಟೆಂಟ್ಸ್- ಮಾಸಿಕ ₹ 15,939
ಸಂದರ್ಶನ ನಡೆಯುವ ಸ್ಥಳ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆವರಣ
ಹಳೆಯ T.B ಆಸ್ಪತ್ರೆ
ಹಳೆಯ ಮದ್ರಾಸ್ ರಸ್ತೆ
ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ
ಇಂದಿರಾನಗರ
ಬೆಂಗಳೂರು - 38
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: ಜನವರಿ 21, 2023
ಸಂದರ್ಶನ ನಡೆಯುವ ದಿನ: ಜನವರಿ 30, 2023 ಬೆಳಗ್ಗೆ 11 ಗಂಟೆಗೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ