• Home
  • »
  • News
  • »
  • jobs
  • »
  • DHFWS ವಿಜಯಪುರ ನೇಮಕಾತಿ- 40 ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ

DHFWS ವಿಜಯಪುರ ನೇಮಕಾತಿ- 40 ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ

ಹುದ್ದೆ ಖಾಲಿ ಇದೆ

ಹುದ್ದೆ ಖಾಲಿ ಇದೆ

Job Alert: ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  • News18 Kannada
  • 5-MIN READ
  • Last Updated :
  • Vijayapura, India
  • Share this:

DHFWS Vijayapura Recruitment 2023: ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Vijayapura) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಮೆಡಿಕಲ್ ಆಫೀಸರ್(Medical Officer), ಕನ್ಸಲ್ಟೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 24, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ ಪೋಸ್ಟ್​ ಮುಖಾಂತರ ಅರ್ಜ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.


ಹುದ್ದೆಯ ಮಾಹಿತಿ:
ಆಯುಷ್ ಮತ್ತು RBSK ವೈದ್ಯಕೀಯ ಅಧಿಕಾರಿಗಳು-6
ಮನಶ್ಶಾಸ್ತ್ರಜ್ಞ/ಖಾಸಗಿ ಸಲಹೆಗಾರರು- 1
ಭೌತಚಿಕಿತ್ಸಕ-1
ಮನಶ್ಶಾಸ್ತ್ರಜ್ಞ- 1
ಶ್ರವಣಶಾಸ್ತ್ರಜ್ಞ/ಸ್ಪೀಚ್ ಥೆರಪಿಸ್ಟ್ -1
ಮಲೇರಿಯಾ/VBD ಮೇಲ್ವಿಚಾರಕರು (M.T.S) -1
ಖಾಸಗಿ ಸಲಹೆಗಾರರು, ರಕ್ತ ಶೇಖರಣಾ ಘಟಕ -1
ದಂತ ನೈರ್ಮಲ್ಯ ತಜ್ಞರು- 1
ಆಡಿಯೊಮೆಟ್ರಿಕ್ ಸಹಾಯಕ- 1
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕ- 1
ಖಾಸಗಿ ಸಲಹೆಗಾರರು, RMNCH -1
ನರ್ಸಿಂಗ್ ಅಧಿಕಾರಿ- 16
ಪ್ರಾಥಮಿಕ ಆರೋಗ್ಯಾಧಿಕಾರಿ- 5
ಆರೋಗ್ಯ ನಿರೀಕ್ಷಕರು- 2
ಬ್ಲಾಕ್ ಸಮುದಾಯ ಮೊಬಿಲೈಸರ್/ತಾಲೂಕು ಆಶಾ ಮೇಲ್ವಿಚಾರಕರು -1


ಇದನ್ನೂ ಓದಿ: ಕೋಸ್ಟ್​ ಗಾರ್ಡ್​ನಲ್ಲಿ 10th, PU ಪಾಸಾದವರಿಗೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ


ವಿದ್ಯಾರ್ಹತೆ:
ಆಯುಷ್ ಮತ್ತು RBSK ವೈದ್ಯಕೀಯ ಅಧಿಕಾರಿಗಳು- BAMS
ಮನಶ್ಶಾಸ್ತ್ರಜ್ಞ/ಖಾಸಗಿ ಸಲಹೆಗಾರರು- MSW, ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ
ಭೌತಚಿಕಿತ್ಸಕ-ಪಿಜಿಯೋಥೆರಪಿಯಲ್ಲಿ ಪದವಿ
ಮನಶ್ಶಾಸ್ತ್ರಜ್ಞ- ಚೈಲ್ಡ್​ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ
ಶ್ರವಣಶಾಸ್ತ್ರಜ್ಞ/ಸ್ಪೀಚ್ ಥೆರಪಿಸ್ಟ್ -ಸ್ಪೀಚ್​ & ಲಾಂಗ್ವೇಜ್ ಪ್ಯಾಥಾಲಜಿಯಲ್ಲಿ ಪದವಿ
ಮಲೇರಿಯಾ/VBD ಮೇಲ್ವಿಚಾರಕರು (M.T.S) -ಬಯಾಲಜಿಯಲ್ಲಿ ಪದವಿ
ಖಾಸಗಿ ಸಲಹೆಗಾರರು, ರಕ್ತ ಶೇಖರಣಾ ಘಟಕ -MSW, ಸೈಕಾಲಜಿಯಲ್ಲಿ ಎಂಎ
ದಂತ ನೈರ್ಮಲ್ಯ ತಜ್ಞರು- ಪಿಯುಸಿ, ಡೆಂಟಲ್ ಹೈಜೀನಿಸ್ಟ್​ನಲ್ಲಿ ಡಿಪ್ಲೋಮಾ
ಆಡಿಯೊಮೆಟ್ರಿಕ್ ಸಹಾಯಕ- DHLS ನಲ್ಲಿ ಡಿಪ್ಲೋಮಾ
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕ- DTYDHH ನಲ್ಲಿ ಡಿಪ್ಲೋಮಾ
ಖಾಸಗಿ ಸಲಹೆಗಾರರು, RMNCH -ನರ್ಸಿಂಗ್​ನಲ್ಲಿ ಬಿಎಸ್ಸಿ
ನರ್ಸಿಂಗ್ ಅಧಿಕಾರಿ- ಡಿಪ್ಲೋಮಾ, ನರ್ಸಿಂಗ್​ನಲ್ಲಿ ಬಿಎಸ್ಸಿ
ಪ್ರಾಥಮಿಕ ಆರೋಗ್ಯಾಧಿಕಾರಿ- ಪ್ರಾಥಮಿಕ ಆರೋಗ್ಯ ಅಧಿಕಾರಿಯಾಗಿ ತರಬೇತಿ ಪಡೆದಿರಬೇಕು.
ಆರೋಗ್ಯ ನಿರೀಕ್ಷಕರು- SSLC, ಡಿಪ್ಲೋಮಾ, ಪಿಯುಸಿ
ಬ್ಲಾಕ್ ಸಮುದಾಯ ಮೊಬಿಲೈಸರ್/ತಾಲೂಕು ಆಶಾ ಮೇಲ್ವಿಚಾರಕರು -ಬಿಎಸ್ಸಿ ನರ್ಸಿಂಗ್, GNM, ANM




ವಯೋಮಿತಿ:
40-45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ:
ಮೆರಿಟ್​ ಲಿಸ್ಟ್​
ಲಿಖಿತ ಪರೀಕ್ಷೆ
ಸಂದರ್ಶನ


ವೇತನ: ಮಾಸಿಕ ₹ 12,075-25,000


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಜನವರಿ 24ರೊಳಗೆ ಅಂದರೆ ನಾಳೆಯೊಳಗೆ ಕಳುಹಿಸಬೇಕು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ
ವಿಜಯಪುರ
ಕರ್ನಾಟಕ


ಇದನ್ನೂ ಓದಿ: ಜೆಇಇ ಪರೀಕ್ಷೆ ನೋಂದಣಿಯಲ್ಲಿ ಈ ಬಾರಿ ಮಹಿಳೆಯರದ್ದೇ ಮೇಲುಗೈ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 24, 2023 (ನಾಳೆ)

Published by:Latha CG
First published: