• ಹೋಂ
  • »
  • ನ್ಯೂಸ್
  • »
  • Jobs
  • »
  • Karnataka Jobs: ತಿಂಗಳಿಗೆ 50,000 ಸಂಬಳ- ಆರೋಗ್ಯ ಸೌಧದಲ್ಲಿ ಫೆ.15ಕ್ಕೆ ಸಂದರ್ಶನ

Karnataka Jobs: ತಿಂಗಳಿಗೆ 50,000 ಸಂಬಳ- ಆರೋಗ್ಯ ಸೌಧದಲ್ಲಿ ಫೆ.15ಕ್ಕೆ ಸಂದರ್ಶನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಫೆಬ್ರವರಿ 15, 2023 ರಂದು ಸಂದರ್ಶನ ನಡೆಯಲಿದೆ. ಆಸಕ್ತರು ಸಂದರ್ಶನದಲ್ಲಿ(Interview) ಪಾಲ್ಗೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

DHFWS Bangalore Recruitment 2023: ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Bangalore) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಟೆಕ್ನಿಕಲ್ ಅಸಿಸ್ಟೆಂಟ್ (Technical Assistant)​ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 15, 2023 ರಂದು ಸಂದರ್ಶನ ನಡೆಯಲಿದೆ. ಆಸಕ್ತರು ಸಂದರ್ಶನದಲ್ಲಿ(Interview) ಪಾಲ್ಗೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

 ಸಂಸ್ಥೆ ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ
 ಹುದ್ದೆ ಟೆಕ್ನಿಕಲ್ ಅಸಿಸ್ಟೆಂಟ್
 ಒಟ್ಟು ಹುದ್ದೆ 1
 ವಿದ್ಯಾರ್ಹತೆ ಬಿಇ/ಬಿ.ಟೆಕ್
 ವೇತನ ಮಾಸಿಕ 50,000
 ಉದ್ಯೋಗದ ಸ್ಥಳ ಬೆಂಗಳೂರು
 ಸಂದರ್ಶನ ನಡೆಯುವ ದಿನ ಫೆಬ್ರವರಿ 15, 2023

ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕಂಪ್ಯೂಟರ್ ಸೈನ್ಸ್​/ ಐಟಿ ವಿಭಾಗದಲ್ಲಿ ಬಿಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರಬೇಕು.


ಅನುಭವ:
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.


ಇದನ್ನೂ ಓದಿ: Job Alert: ಕರ್ನಾಟಕ ಹೈ ಕೋರ್ಟ್​ನಲ್ಲಿ ಕ್ಲರ್ಕ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ


ಇತರೆ ಕೌಶಲ್ಯ:
ಅಭ್ಯರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಉತ್ತಮ ಟೈಪಿಂಗ್ ಜ್ಞಾನ ಇರಬೇಕು.
ಬಹು ಭಾಷೆಗಳಲ್ಲಿ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.


ವಯೋಮಿತಿ:
ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ 50,000 ಸಂಬಳ ಕೊಡಲಾಗುತ್ತದೆ.


ಉದ್ಯೋಗದ ಸ್ಥಳ:
ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ಕೊಡಲಾಗುತ್ತದೆ.


ಇದನ್ನೂ ಓದಿ: KSRTCಯಲ್ಲಿ ಖಾಲಿ ಇರುವ SDA, FDA ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ


ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.




ಆಸಕ್ತ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲಾತಿಗಳು ಹಾಗೂ ಅದರ ಜೆರಾಕ್ಸ್​ ಪ್ರತಿಗಳೊಂದಿಗೆ ಹಾಜರಿರಬೇಕು. ಸಂದರ್ಶನವು ಫೆಬ್ರವರಿ 15 ರಂದು ಮಧ್ಯಾಹ್ನ 2ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುತ್ತದೆ.


ಸಂದರ್ಶನ ನಡೆಯುವ ಸ್ಥಳ:
ನಿರ್ದೇಶಕರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ
ಆರೋಗ್ಯ ಸೌಧ
6 ನೇ ಮಹಡಿ
1 ನೇ ಅಡ್ಡ ರಸ್ತೆ
ಮಾಗಡಿ ರಸ್ತೆ
ಬೆಂಗಳೂರು - 23


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 03/02/2023
ಸಂದರ್ಶನ ನಡೆಯುವ ದಿನಾಂಕ: ಫೆಬ್ರವರಿ 15, 2023

Published by:Latha CG
First published: