DHFWS Belagavi Recruitment 2023: ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Belagavi) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 37 ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್(General Duty Medical Officer), ಮಕ್ಕಳ ತಜ್ಞ ವೈದ್ಯ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 23, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಅಂದು ಸಂದರ್ಶನ(Interview) ನಡೆಯಲಿದ್ದು, ಅಭ್ಯರ್ಥಿಗಳು ಪಾಲ್ಗೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ |
ಹುದ್ದೆ | ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್, ಮಕ್ಕಳ ತಜ್ಞ ವೈದ್ಯ |
ಒಟ್ಟು ಹುದ್ದೆ | 37 |
ವಿದ್ಯಾರ್ಹತೆ | ಎಂಬಿಬಿಎಸ್, ಡಿಎನ್ಬಿ |
ವೇತನ | ಮಾಸಿಕ ₹ 60,000 |
ಉದ್ಯೋಗದ ಸ್ಥಳ | ಬೆಳಗಾವಿ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಜನವರಿ 23, 2023 |
ವಿದ್ಯಾರ್ಹತೆ:
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO)- ಎಂಬಿಬಿಎಸ್
ಅರವಳಿಕೆ ತಜ್ಞ ಡಾಕ್ಟರ್- ಡಿಎ, ಡಿಎನ್ಬಿ, ಎಂಡಿ (ಅನಸ್ತೇಶಿಯಾ)
ಸ್ತ್ರೀ ರೋಗ ತಜ್ಞ- ಡಿಜಿಒ, ಡಿಎನ್ಬಿ, ಎಂಡಿ (ಒಬಿಜಿ)
ಮಕ್ಕಳ ತಜ್ಞ ವೈದ್ಯರು- ಡಿಸಿಎಚ್, ಡಿಎನ್ಬಿ, ಎಂಡಿ (ಪೀಡಿಯಾಟ್ರಿಶನ್)
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಗರಿಷ್ಠ 42 ವರ್ಷ ಮೀರಿರಬಾರದು.
ಇದನ್ನೂ ಓದಿ: Sports Authority of Indiaದಲ್ಲಿ ನೇಮಕಾತಿ ಆರಂಭವಾಗಿದೆ, ನೀವೂ ಅಪ್ಲೈ ಮಾಡ್ಬಹುದು
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಒಬಿಸಿ ಅಭ್ಯರ್ಥಿಗಳು- 3 ವರ್ಷ
ವೇತನ:
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO)- ತಿಂಗಳಿಗೆ 60,000 ರೂ.
ಅರವಳಿಕೆ ತಜ್ಞ ಡಾಕ್ಟರ್- ನಿಗದಿ ಪಡಿಸಿಲ್ಲ.
ಸ್ತ್ರೀ ರೋಗ ತಜ್ಞ- ನಿಗದಿ ಪಡಿಸಿಲ್ಲ
ಮಕ್ಕಳ ತಜ್ಞ ವೈದ್ಯರು- ನಿಗದಿ ಪಡಿಸಿಲ್ಲ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ
ಲಸಿಕಾ ಸಂಸ್ಥೆ ಆವರಣ
ರೈಲ್ವೆ 2ನೇ ಗೇಟ್
ಟಿಳಕವಾಡಿ
ಬೆಳಗಾವಿ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 17/01/2023
ಸಂದರ್ಶನ ನಡೆಯುವ ದಿನಾಂಕ: ಜನವರಿ 23, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ