DC Office Belagavi Recruitment 2023: ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ (DC Office Belagavi) ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಈ ಹುದ್ದೆಗಳಿಗೆ ಯಾವುದೇ ಶೈಕ್ಷಣಿಕ ಅರ್ಹತೆ ಕೇಳಿಲ್ಲ. ಕೇವಲ ಕನ್ನಡ ಮಾತನಾಡಲು ಬಂದರೆ ಸಾಕು. ಒಟ್ಟು 105 ಪೌರಕಾರ್ಮಿಕ(Pourakarmika) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ(Belagavi) ಪೋಸ್ಟಿಂಗ್ ನೀಡಲಾಗುತ್ತದೆ. ಮಾರ್ಚ್ 15, 2023 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಇದನ್ನೂ ಓದಿ: Banking Jobs: ಕರ್ನಾಟಕದಲ್ಲಿ ಬ್ಯಾಂಕ್ ಹುದ್ದೆ ಖಾಲಿ ಇದೆ- ಅರ್ಜಿ ಹಾಕಲು ಇವತ್ತೇ ಕೊನೆ ದಿನ
ಹುದ್ದೆಯ ಮಾಹಿತಿ:
ಅಥಣಿ ಮುನ್ಸಿಪಾಲಿಟಿ- 32
ಸಂಕೇಶ್ವರ್ ಮುನ್ಸಿಪಾಲಿಟಿ- 6
ಚೆನ್ನಮ್ಮನ- ಕಿತ್ತೂರ್ ಟೌನ್ ಪಂಚಾಯತ್- 6
ಐನಾಪುರ ಟೌನ್ ಪಂಚಾಯತ್- 17
ಪೀರನವಾಡಿ ಟೌನ್ ಪಂಚಾಯತ್- 29
ಅರಭಾವಿ ಟೌನ್ ಪಂಚಾಯತ್- 15
ವಿದ್ಯಾರ್ಹತೆ:
ಯಾವುದೇ ವಿದ್ಯಾರ್ಹತೆ ಕೇಳಿಲ್ಲ. ಕನ್ನಡ ಭಾಷೆ ಮಾತನಾಡಲು ಬಂದರೆ ಸಾಕು.
ವಯೋಮಿತಿ:
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: BMTC Jobs: ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅರ್ಜಿ ಹಾಕಿ
ವೇತನ:
ಮಾಸಿಕ ₹ 17,000- 28,950
ಉದ್ಯೋಗದ ಸ್ಥಳ:
ಬೆಳಗಾವಿ
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಅಥಣಿ ಮುನ್ಸಿಪಾಲಿಟಿ- ಮುಖ್ಯಾಧಿಕಾರಿಗಳು, ಪುರಸಭೆ, ಅಥಣಿ
ಸಂಕೇಶ್ವರ್ ಮುನ್ಸಿಪಾಲಿಟಿ- ಮುಖ್ಯಾಧಿಕಾರಿಗಳು, ಪುರಸಭೆ, ಸಂಕೇಶ್ವರ್
ಚೆನ್ನಮ್ಮನ- ಕಿತ್ತೂರ್ ಟೌನ್ ಪಂಚಾಯತ್- ಮುಖ್ಯಾಧಿಕಾರಿಗಳು, ಟೌನ್ ಪಂಚಾಯತ್, ಚೆನ್ನಮ್ಮನ- ಕಿತ್ತೂರ್
ಐನಾಪುರ ಟೌನ್ ಪಂಚಾಯತ್- ಮುಖ್ಯಾಧಿಕಾರಿಗಳು, ಟೌನ್ ಪಂಚಾಯತ್, ಐನಾಪುರ
ಪೀರನವಾಡಿ ಟೌನ್ ಪಂಚಾಯತ್- ಮುಖ್ಯಾಧಿಕಾರಿಗಳು, ಟೌನ್ ಪಂಚಾಯತ್, ಪೀರನವಾಡಿ
ಅರಭಾವಿ ಟೌನ್ ಪಂಚಾಯತ್- ಮುಖ್ಯಾಧಿಕಾರಿಗಳು, ಟೌನ್ ಪಂಚಾಯತ್, ಅರಭಾವಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 15, 2023 (ಇಂದು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ