DC Office Belagavi Recruitment 2023: ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ (DC Office Belagavi) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 105 ಪೌರಕಾರ್ಮಿಕ(Pourakarmika) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ(Belagavi) ಪೋಸ್ಟಿಂಗ್ ನೀಡಲಾಗುತ್ತದೆ. ಮಾರ್ಚ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ |
ಹುದ್ದೆ | ಪೌರಕಾರ್ಮಿಕ |
ಒಟ್ಟು ಹುದ್ದೆ | 105 |
ವಿದ್ಯಾರ್ಹತೆ | ಕೇಳಿಲ್ಲ |
ವೇತನ | ಮಾಸಿಕ ₹ 17,000- 28,950 |
ಉದ್ಯೋಗದ ಸ್ಥಳ | ಬೆಳಗಾವಿ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 15, 2023 |
ಇದನ್ನೂ ಓದಿ: KSP Recruitment 2023: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ರಾಜ್ಯ ಪೊಲೀಸ್- ಈಗಲೇ Apply ಮಾಡಿ
ವಿದ್ಯಾರ್ಹತೆ:
ಯಾವುದೇ ವಿದ್ಯಾರ್ಹತೆ ಕೇಳಿಲ್ಲ. ಕನ್ನಡ ಭಾಷೆ ಮಾತನಾಡಲು ಬಂದರೆ ಸಾಕು.
ವಯೋಮಿತಿ:
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಮಾಸಿಕ ₹ 17,000- 28,950
ಉದ್ಯೋಗದ ಸ್ಥಳ:
ಬೆಳಗಾವಿ
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ಇದನ್ನೂ ಓದಿ: Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- 8th ಪಾಸಾಗಿದ್ರೆ ಸಾಕು, 20 ಸಾವಿರ ಸಂಬಳ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಅಥಣಿ ಮುನ್ಸಿಪಾಲಿಟಿ- ಮುಖ್ಯಾಧಿಕಾರಿಗಳು, ಪುರಸಭೆ, ಅಥಣಿ
ಸಂಕೇಶ್ವರ್ ಮುನ್ಸಿಪಾಲಿಟಿ- ಮುಖ್ಯಾಧಿಕಾರಿಗಳು, ಪುರಸಭೆ, ಸಂಕೇಶ್ವರ್
ಚೆನ್ನಮ್ಮನ- ಕಿತ್ತೂರ್ ಟೌನ್ ಪಂಚಾಯತ್- ಮುಖ್ಯಾಧಿಕಾರಿಗಳು, ಟೌನ್ ಪಂಚಾಯತ್, ಚೆನ್ನಮ್ಮನ- ಕಿತ್ತೂರ್
ಐನಾಪುರ ಟೌನ್ ಪಂಚಾಯತ್- ಮುಖ್ಯಾಧಿಕಾರಿಗಳು, ಟೌನ್ ಪಂಚಾಯತ್, ಐನಾಪುರ
ಪೀರನವಾಡಿ ಟೌನ್ ಪಂಚಾಯತ್- ಮುಖ್ಯಾಧಿಕಾರಿಗಳು, ಟೌನ್ ಪಂಚಾಯತ್, ಪೀರನವಾಡಿ
ಅರಭಾವಿ ಟೌನ್ ಪಂಚಾಯತ್- ಮುಖ್ಯಾಧಿಕಾರಿಗಳು, ಟೌನ್ ಪಂಚಾಯತ್, ಅರಭಾವಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 15, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ