CSG Karnataka Recruitment 2023: ಕರ್ನಾಟಕ ಸರ್ಕಾರದ ಸ್ಮಾರ್ಟ್ ಗವರ್ನೆನ್ಸ್ ಕೇಂದ್ರದಲ್ಲಿ (Center For Smart Governance) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 44 ಸಾಫ್ಟ್ವೇರ್ ಎಂಜಿನಿಯರ್(Software Engineer), ಬ್ಯುಸಿನೆಸ್ ಅನಾಲಿಸ್ಟ್(Business Analyst) ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಮಾರ್ಚ್ 19, 2023 ಅಂದರೆ ಇವತ್ತು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ (Online) ಮೂಲಕ ಅರ್ಜಿ ಹಾಕಬೇಕು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸ್ಮಾರ್ಟ್ ಗವರ್ನೆನ್ಸ್ ಕೇಂದ್ರ, ಕರ್ನಾಟಕ |
ಹುದ್ದೆ | ಸಾಫ್ಟ್ವೇರ್ ಎಂಜಿನಿಯರ್, ಬ್ಯುಸಿನೆಸ್ ಅನಾಲಿಸ್ಟ್ |
ಒಟ್ಟು ಹುದ್ದೆ | 44 |
ವಿದ್ಯಾರ್ಹತೆ | ಬಿಇ/ಬಿ.ಟೆಕ್, ಎಂಸಿಎ |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 19, 2023 (ಇಂದು) |
ವಿದ್ಯಾರ್ಹತೆ:
ಟೆಕ್ನಿಕಲ್ ಪ್ರಾಜೆಕ್ಟ್ ಮ್ಯಾನೇಜರ್- ಬಿಇ/ಬಿ.ಟೆಕ್, ಎಂಸಿಎ
ಪ್ರಾಜೆಕ್ಟ್ ಲೀಡ್- CSE/ITಯಲ್ಲಿ ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ
ಬ್ಯುಸಿನೆಸ್ ಅನಾಲಿಸ್ಟ್- CSE/ITಯಲ್ಲಿ ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ, ಎಂಬಿಎ
ಸೀನಿಯರ್ ಸಾಫ್ಟ್ವೇರ್ ಎಂಜಿನಿಯರ್- CSE/ITಯಲ್ಲಿ ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ
ಸಾಫ್ಟ್ವೇರ್ ಎಂಜಿನಿಯರ್- CSE/ITಯಲ್ಲಿ ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ
ಡೇಟಾಬೇಸ್ ಡಿಸೈನರ್- CSE/ITಯಲ್ಲಿ ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ
ಡೇಟಾಬೇಸ್ ಅಸ್ಮಿನಿಸ್ಟ್ರೇಟರ್- ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ
ಸಿಸ್ಟಂ ಅಡ್ಮಿನಿಸ್ಟ್ರೇಟರ್- ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ
ಕನ್ಸಲ್ಟೆಂಟ್- CSE/ITಯಲ್ಲಿ ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ, ಎಂಬಿಎ
ಅಸಿಸ್ಟೆಂಟ್ ಮ್ಯಾನೇಜರ್- ಎಂಬಿಎ
ಇದನ್ನೂ ಓದಿ: Banking Jobs: ತಿಂಗಳಿಗೆ 63 ಸಾವಿರ ಸಂಬಳ, ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ಕೆಲಸ- ಈಗಲೇ ಅರ್ಜಿ ಹಾಕಿ
ವೇತನ:
ನಿಗದಿಪಡಿಸಿಲ್ಲ.
ಉದ್ಯೋಗದ ಸ್ಥಳ:
ಬೆಂಗಳೂರು
ಅಭ್ಯರ್ಥಿಗಳು ವಯೋಮಿತಿ, ವೇತನ, ಸೇವಾ ಅವಧಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ csg.karnataka.gov.inಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ತಮ್ಮ ರೆಸ್ಯೂಮ್ನ್ನು ಇ-ಮೇಲ್ ಐಡಿ careerscsg@csgkarnataka.in ಗೆ ಇವತ್ತೇ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 19, 2023 (ಇಂದು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ