• ಹೋಂ
 • »
 • ನ್ಯೂಸ್
 • »
 • Jobs
 • »
 • JOBS: ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ- ಯಾವುದೇ ವಿದ್ಯಾರ್ಹತೆ ಕೇಳಿಲ್ಲ, ತಿಂಗಳಿಗೆ 28,000 ಸಂಬಳ

JOBS: ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ- ಯಾವುದೇ ವಿದ್ಯಾರ್ಹತೆ ಕೇಳಿಲ್ಲ, ತಿಂಗಳಿಗೆ 28,000 ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರ್ಜಿದಾರರು ಆಫ್​ಲೈನ್​ / ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರ್ಗಿಯಲ್ಲಿ(Kalaburagi) ಪೋಸ್ಟಿಂಗ್ ನೀಡಲಾಗುತ್ತದೆ.

 • News18 Kannada
 • 2-MIN READ
 • Last Updated :
 • Gulbarga, India
 • Share this:

Chincholi Town Panchayat Recruitment 2023: ಚಿಂಚೋಳಿ ಪಟ್ಟಣ ಪಂಚಾಯತ್​ನಲ್ಲಿ(Chincholi Town Panchayat) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆ ಕೊನೆಯ ದಿನವಾಗಿದೆ. ಒಟ್ಟು 10 ಲೋಡರ್ಸ್​ ಮತ್ತು ಕ್ಲೀನರ್ಸ್(Cleaners)​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 13, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು(Last Date), ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಅರ್ಜಿದಾರರು ಆಫ್​ಲೈನ್​ / ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರ್ಗಿಯಲ್ಲಿ(Kalaburagi) ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಚಿಂಚೋಳಿ ಪಟ್ಟಣ ಪಂಚಾಯತ್
ಹುದ್ದೆಲೋಡರ್ಸ್​ ಮತ್ತು ಕ್ಲೀನರ್ಸ್
ಒಟ್ಟು ಹುದ್ದೆ10
ವಿದ್ಯಾರ್ಹತೆಕೇಳಿಲ್ಲ, ಕನ್ನಡ ಮಾತನಾಡಲು ಬರಬೇಕು
ವೇತನಮಾಸಿಕ 17,000-28,950 ರೂ.
ಉದ್ಯೋಗದ ಸ್ಥಳಕಲಬುರಗಿ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 13, 2023

ಹುದ್ದೆಯ ಮಾಹಿತಿ
ಲೋಡರ್ಸ್​- 8
ಕ್ಲೀನರ್ಸ್​- 2


ಇದನ್ನೂ ಓದಿ: HMT ಕಂಪನಿಯಲ್ಲಿ ಡಿಪ್ಲೊಮಾ ಪಾಸಾದವರಿಗೆ ಬಂಪರ್ ಉದ್ಯೋಗ- ಬೆಂಗಳೂರಿನಲ್ಲೇ ಪೋಸ್ಟಿಂಗ್


ವಿದ್ಯಾರ್ಹತೆ:
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಕೇಳಿಲ್ಲ. ಆದರೆ ಅಭ್ಯರ್ಥಿಗಳು ಚಿಂಚೋಳಿ ಪುರಸಭೆಯಲ್ಲಿ ಲೋಡರ್‌ಗಳು ಮತ್ತು ಕ್ಲೀನರ್‌ಗಳಾಗಿ ಕಲ್ಯಾಣ ಅಭಿವೃದ್ಧಿ/ದೈನಂದಿನ ವೇತನ/ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಎರಡು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿರಬೇಕು. ವಿಶೇಷ ನೇಮಕಾತಿ ನಿಯಮಗಳು ಜಾರಿಗೆ ಬರುವ ದಿನಾಂಕದಂದು ನಿರಂತರವಾಗಿ ಕರ್ತವ್ಯದಲ್ಲಿರಬೇಕು.


ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಮಾತನಾಡಲು ಬರಬೇಕು.


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 13, 2023ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಮಾಸಿಕ 17,000-28,950 ರೂ.


ಉದ್ಯೋಗದ ಸ್ಥಳ:
ಕಲಬುರಗಿ


ಇದನ್ನೂ ಓದಿ: Udupi Jobs: ತಿಂಗಳಿಗೆ 2 ಲಕ್ಷದವರೆಗೆ ಸಂಬಳ- ಅರ್ಜಿ ಹಾಕಲು ಇವತ್ತೇ ಕೊನೆಯ ದಿನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಮುಖ್ಯ ಪುರಸಭೆ ಅಧಿಕಾರಿ ಚಿಂಚೋಳಿ
ಲೋಡರ್ಸ್ ಮತ್ತು ಕ್ಲೀನರ್‌ಗಳು ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿ
ಕಲಬುರಗಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 13, 2023 (ನಾಳೆ)

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು