Chincholi Town Panchayat Recruitment 2023: ಚಿಂಚೋಳಿ ಪಟ್ಟಣ ಪಂಚಾಯತ್ನಲ್ಲಿ(Chincholi Town Panchayat) ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಲೋಡರ್ಸ್ ಮತ್ತು ಕ್ಲೀನರ್ಸ್(Cleaners) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತ ಅಭ್ಯರ್ಥಿಗಳು ಆಫ್ಲೈನ್ / ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಡ್ರೈವಿಂಗ್ ಕಲಿತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರ್ಗಿಯಲ್ಲಿ(Kalaburagi) ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಚಿಂಚೋಳಿ ಪಟ್ಟಣ ಪಂಚಾಯತ್ |
ಹುದ್ದೆ | ಲೋಡರ್ಸ್ ಮತ್ತು ಕ್ಲೀನರ್ಸ್ |
ಒಟ್ಟು ಹುದ್ದೆ | 10 |
ವಿದ್ಯಾರ್ಹತೆ | ಅಗತ್ಯ ಇಲ್ಲ |
ವೇತನ | ಮಾಸಿಕ 17,000-28,950 ರೂ. |
ಉದ್ಯೋಗದ ಸ್ಥಳ | ಕಲಬುರಗಿ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 12, 2023 |
ವಿದ್ಯಾರ್ಹತೆ:
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಕೇಳಿಲ್ಲ. ಆದರೆ ಅಭ್ಯರ್ಥಿಗಳು ಚಿಂಚೋಳಿ ಪುರಸಭೆಯಲ್ಲಿ ಲೋಡರ್ಗಳು ಮತ್ತು ಕ್ಲೀನರ್ಗಳಾಗಿ ಕಲ್ಯಾಣ ಅಭಿವೃದ್ಧಿ/ದೈನಂದಿನ ವೇತನ/ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಎರಡು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿರಬೇಕು. ವಿಶೇಷ ನೇಮಕಾತಿ ನಿಯಮಗಳು ಜಾರಿಗೆ ಬರುವ ದಿನಾಂಕದಂದು ನಿರಂತರವಾಗಿ ಕರ್ತವ್ಯದಲ್ಲಿರಬೇಕು.
ಇದನ್ನೂ ಓದಿ:IIIT ಧಾರವಾಡದಲ್ಲಿ ಕೆಲಸ ಖಾಲಿ ಇದೆ- ಈಗಲೇ ರೆಸ್ಯೂಮ್ ಕಳುಹಿಸಿ
ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಮಾತನಾಡಲು ಬರಬೇಕು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 13, 2023ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಮಾಸಿಕ 17,000-28,950 ರೂ.
ಉದ್ಯೋಗದ ಸ್ಥಳ:
ಕಲಬುರಗಿ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮುಖ್ಯ ಪುರಸಭೆ ಅಧಿಕಾರಿ ಚಿಂಚೋಳಿ
ಲೋಡರ್ಸ್ ಮತ್ತು ಕ್ಲೀನರ್ಗಳು ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿ
ಕಲಬುರಗಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 13, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ