• ಹೋಂ
 • »
 • ನ್ಯೂಸ್
 • »
 • Jobs
 • »
 • Bengaluru ಮೆಟ್ರೋದಲ್ಲಿ 17 ಮ್ಯಾನೇಜರ್ ಹುದ್ದೆಗಳು ಖಾಲಿ- ನಾಳೆಯೊಳಗೆ ಅರ್ಜಿ ಹಾಕಿ

Bengaluru ಮೆಟ್ರೋದಲ್ಲಿ 17 ಮ್ಯಾನೇಜರ್ ಹುದ್ದೆಗಳು ಖಾಲಿ- ನಾಳೆಯೊಳಗೆ ಅರ್ಜಿ ಹಾಕಿ

ನಮ್ಮ ಮೆಟ್ರೋ

ನಮ್ಮ ಮೆಟ್ರೋ

ಅಭ್ಯರ್ಥಿಗಳು ಆನ್​​​ಲೈನ್​(Online) ಅಥವಾ ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 7, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.

 • News18 Kannada
 • 4-MIN READ
 • Last Updated :
 • Bangalore, India
 • Share this:

BMRCL Recruitment 2023: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್​​ನಲ್ಲಿ(Bengaluru Metro Rail Corporation Limited)​ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆಯ ದಿನವಾಗಿದೆ. ಹೀಗಾಗಿ ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ. ಒಟ್ಟು 17 ಮ್ಯಾನೇಜರ್(Manager), ಅಸಿಸ್ಟೆಂಟ್ ಮ್ಯಾನೇಜರ್(Assistant Manager)​ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿತ್ತು. ಜನವರಿ 7, 2023 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆನ್​​​ಲೈನ್​(Online) ಅಥವಾ ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 7, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್​ಸೈಟ್​bmrc.co.inಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್​​
ಹುದ್ದೆಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್
ಒಟ್ಟು ಹುದ್ದೆ17
ವಿದ್ಯಾರ್ಹತೆಎಂಜಿನಿಯರಿಂಗ್
ವೇತನತಿಂಗಳಿಗೆ ₹ 1,65,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 7, 2023

ಹುದ್ದೆಯ ಮಾಹಿತಿ:
ಜನರಲ್​ ಮ್ಯಾನೇಜರ್ (F&A)-1
ಅಡಿಶನಲ್ ಜನರಲ್ ಮ್ಯಾನೇಜರ್(F&A)-2
ಡೆಪ್ಯುಟಿ ಜನರಲ್ ಮ್ಯಾನೇಜರ್(F&A)-1
ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)-3
ಮ್ಯಾನೇಜರ್(F&A)-2
ಅಸಿಸ್ಟೆಂಟ್ ಮ್ಯಾನೇಜರ್(F&A)-5
ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)-1
ಮ್ಯಾನೇಜರ್ (ಕಾಂಟ್ರ್ಯಾಕ್ಟ್​)-1
ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)-1


ವಯೋಮಿತಿ:
ಜನರಲ್​ ಮ್ಯಾನೇಜರ್ (F&A)- 55 ವರ್ಷ
ಅಡಿಶನಲ್ ಜನರಲ್ ಮ್ಯಾನೇಜರ್(F&A)- 50 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- 45 ವರ್ಷ
ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- 40 ವರ್ಷ
ಮ್ಯಾನೇಜರ್(F&A)- 40 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್(F&A)- 35 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)-45 ವರ್ಷ
ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 40 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 35 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವಿದ್ಯಾರ್ಹತೆ ಏನಿರಬೇಕು?
ಜನರಲ್​ ಮ್ಯಾನೇಜರ್ (F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
ಅಡಿಶನಲ್ ಜನರಲ್ ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
ಅಸಿಸ್ಟೆಂಟ್ ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
ಮ್ಯಾನೇಜರ್ (ಕಾಂಟ್ರ್ಯಾಕ್ಟ್​)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್


ಇದನ್ನೂ ಓದಿ: ESIC ಕರ್ನಾಟಕದಲ್ಲಿ Part-Time ಟೀಚರ್ ಹುದ್ದೆಗಳು ಖಾಲಿ- ಫೆ. 17ರೊಳಗೆ ಅಪ್ಲೈ ಮಾಡಿ


ಸಂಬಳ ಎಷ್ಟು?
ಜನರಲ್​ ಮ್ಯಾನೇಜರ್ (F&A)- ತಿಂಗಳಿಗೆ ₹ 1,65,000
ಅಡಿಶನಲ್ ಜನರಲ್ ಮ್ಯಾನೇಜರ್(F&A)- ತಿಂಗಳಿಗೆ ₹ 1,50,000
ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- ತಿಂಗಳಿಗೆ ₹ 1,40,000
ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- ತಿಂಗಳಿಗೆ ₹ 85,000
ಮ್ಯಾನೇಜರ್(F&A)- ತಿಂಗಳಿಗೆ ₹ 75,000
ಅಸಿಸ್ಟೆಂಟ್ ಮ್ಯಾನೇಜರ್(F&A)- ತಿಂಗಳಿಗೆ ₹ 50,000
ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)- ತಿಂಗಳಿಗೆ ₹ 1,40,000
ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- ತಿಂಗಳಿಗೆ ₹ 75,000
ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- ತಿಂಗಳಿಗೆ ₹ 50,000


ಈ ಹುದ್ದೆಗಳಿಗೆ ಆನ್​ಲೈನ್​/ ಆಫ್​ಲೈನ್​(ಪೋಸ್ಟ್​) ಮುಖಾಂತರ ಅರ್ಜಿ ಹಾಕಬಹುದು.


ಆನ್​ಲೈನ್​ನಲ್ಲಿ ಅರ್ಜಿ ಹಾಕುವ ಲಿಂಕ್ಸ್ ಇಲ್ಲಿವೆ:
ಅಡಿಶನಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್(F&A) ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಈ ಹುದ್ದೆಗಳಿಗೆ ಫೆಬ್ರವರಿ 7, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ.


ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್(ಕಾಂಟ್ಯ್ರಾಕ್ಟ್​​) ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಈ ಹುದ್ದೆಗಳಿಗೆ ಅರ್ಜಿ ಹಾಕಲು ಕೊನೆಯ ದಿನ ಫೆಬ್ರವರಿ 4, 2023


ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವಾಗ ಯಾವುದೇ ತೊಂದರೆ ಕಂಡುಬಂದರೆ ಇ-ಮೇಲ್ ಐಡಿ helpdesk@bmrc.co.in ಗೆ ತಿಳಿಸಿ.


ಅಭ್ಯರ್ಥಿಗಳು ಪೋಸ್ಟ್​/ ಆಫ್​ಲೈನ್ ಮೂಲಕವೂ ಅರ್ಜಿ ಹಾಕಬಹುದು. ಅದಕ್ಕೆ ಅಭ್ಯರ್ಥಿಗಳು ಮಾಡಬೇಕಿರೋದು ಇಷ್ಟೇ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
3ನೇ ಮಹಡಿ
BMTC ಕಾಂಪ್ಲೆಕ್ಸ್
K.H. ರಸ್ತೆ
ಶಾಂತಿನಗರ
ಬೆಂಗಳೂರು - 560027


ಇದನ್ನೂ ಓದಿ: Karwar: ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಡಿಗ್ರಿ ಪಾಸಾದವರಿಗೆ ಕೆಲಸ- ತಡಮಾಡದೇ ಅರ್ಜಿ ಹಾಕಿ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 7, 2023
ಅಡಿಶನಲ್ ಮ್ಯಾನೇಜರ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಯ ಹಾರ್ಡ್​ ಕಾಪಿ ಕಳುಹಿಸಲು ಕೊನೆಯ ದಿನ- ಫೆಬ್ರವರಿ 17, 2023

Published by:Latha CG
First published: