• ಹೋಂ
  • »
  • ನ್ಯೂಸ್
  • »
  • Jobs
  • »
  • Metro Jobs: ಬೆಂಗಳೂರು ಮೆಟ್ರೋ ನೇಮಕಾತಿ- ಅರ್ಜಿ ಹಾಕಲು ಇವತ್ತೇ ಕೊನೆ ದಿನ

Metro Jobs: ಬೆಂಗಳೂರು ಮೆಟ್ರೋ ನೇಮಕಾತಿ- ಅರ್ಜಿ ಹಾಕಲು ಇವತ್ತೇ ಕೊನೆ ದಿನ

ಮೆಟ್ರೋ

ಮೆಟ್ರೋ

ಒಟ್ಟು 4 ಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಚೀಫ್ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಬಿಎಂಆರ್​ಸಿಎಲ್​ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿತ್ತು.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

BMRCL Recruitment 2023: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್​​ನಲ್ಲಿ(Bengaluru Metro Rail Corporation Limited)​ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 4 ಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಚೀಫ್ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಬಿಎಂಆರ್​ಸಿಎಲ್​ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿತ್ತು. ಜನವರಿ 7, 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 6, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್​ಸೈಟ್ ​bmrc.co.inಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುಲರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೆಂಗಳೂರು ಮೆಟ್ರೋ
ಹುದ್ದೆಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಚೀಫ್ ಎಂಜಿನಿಯರ್
ಒಟ್ಟು ಹುದ್ದೆ4
ವಿದ್ಯಾರ್ಹತೆಎಂಜಿನಿಯರಿಂಗ್, ಎಂಬಿಎ
ವೇತನಮಾಸಿಕ ₹ 37,400- 67,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 6, 2023


ಹುದ್ದೆಯ ಮಾಹಿತಿ:
ಚೀಫ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್/ ಚೀಫ್ ಎಂಜಿನಿಯರ್-2 ಹುದ್ದೆ
ಚೀಫ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್ (HR)- 2 ಹುದ್ದೆ


ಇದನ್ನೂ ಓದಿ: Teacher Jobs: ಕೋಲಾರದಲ್ಲಿ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ- ಫೆ. 9ರಂದು ಸಂದರ್ಶನ


ವಿದ್ಯಾರ್ಹತೆ:
ಚೀಫ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್/ ಚೀಫ್ ಎಂಜಿನಿಯರ್- ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಬಿ.ಇ/ ಬಿ.ಟೆಕ್
ಚೀಫ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್ (HR)- ಎಂಬಿಎ, HR ನಲ್ಲಿ ಸ್ನಾತಕೋತ್ತರ ಪದವಿ


ವಯೋಮಿತಿ:
ನಿಗದಿ ಪಡಿಸಿಲ್ಲ.


ವೇತನ:
ಮಾಸಿಕ ₹ 37,400- 67,000


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ



ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
3ನೇ ಮಹಡಿ
BMTC ಕಾಂಪ್ಲೆಕ್ಸ್
K.H. ರಸ್ತೆ
ಶಾಂತಿನಗರ
ಬೆಂಗಳೂರು - 560027


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 6, 2023 (ಇಂದು) .

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು