BMRCL Recruitment 2023: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(Bengaluru Metro Rail Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 17 ಮ್ಯಾನೇಜರ್(Manager), ಅಸಿಸ್ಟೆಂಟ್ ಮ್ಯಾನೇಜರ್(Assistant Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಜನವರಿ 7, 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಅಥವಾ ಆಫ್ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್ಸೈಟ್ bmrc.co.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ |
ಹುದ್ದೆ | ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ |
ಒಟ್ಟು ಹುದ್ದೆ | 17 |
ವೇತನ | ಮಾಸಿಕ ₹ 50,000-1.65 ಲಕ್ಷ |
ಉದ್ಯೋಗದ ಸ್ಥಳ | ಬೆಂಗಳೂರು |
ಜನರಲ್ ಮ್ಯಾನೇಜರ್ (F&A)-1
ಅಡಿಶನಲ್ ಜನರಲ್ ಮ್ಯಾನೇಜರ್(F&A)-2
ಡೆಪ್ಯುಟಿ ಜನರಲ್ ಮ್ಯಾನೇಜರ್(F&A)-1
ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)-3
ಮ್ಯಾನೇಜರ್(F&A)-2
ಅಸಿಸ್ಟೆಂಟ್ ಮ್ಯಾನೇಜರ್(F&A)-5
ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್)-1
ಮ್ಯಾನೇಜರ್ (ಕಾಂಟ್ರ್ಯಾಕ್ಟ್)-1
ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್)-1
ಇದನ್ನೂ ಓದಿ: JOBS: ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಹಾಕಿ- ತಿಂಗಳಿಗೆ ₹ 60,000 ಸಂಬಳ
ವಿದ್ಯಾರ್ಹತೆ ಏನಿರಬೇಕು?
ಜನರಲ್ ಮ್ಯಾನೇಜರ್ (F&A)- CA, ಕಾಸ್ಟ್ ಅಕೌಂಟೆಂಟ್, ಪದವಿ
ಅಡಿಶನಲ್ ಜನರಲ್ ಮ್ಯಾನೇಜರ್(F&A)- CA, ಕಾಸ್ಟ್ ಅಕೌಂಟೆಂಟ್, ಪದವಿ
ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- CA, ಕಾಸ್ಟ್ ಅಕೌಂಟೆಂಟ್, ಪದವಿ
ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- CA, ಕಾಸ್ಟ್ ಅಕೌಂಟೆಂಟ್, ಪದವಿ
ಮ್ಯಾನೇಜರ್(F&A)- CA, ಕಾಸ್ಟ್ ಅಕೌಂಟೆಂಟ್, ಪದವಿ
ಅಸಿಸ್ಟೆಂಟ್ ಮ್ಯಾನೇಜರ್(F&A)- CA, ಕಾಸ್ಟ್ ಅಕೌಂಟೆಂಟ್, ಪದವಿ
ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿ.ಇ ಅಥವಾ ಬಿ.ಟೆಕ್
ಮ್ಯಾನೇಜರ್ (ಕಾಂಟ್ರ್ಯಾಕ್ಟ್)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿ.ಇ ಅಥವಾ ಬಿ.ಟೆಕ್
ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿ.ಇ ಅಥವಾ ಬಿ.ಟೆಕ್
ವಯೋಮಿತಿ:
ಜನರಲ್ ಮ್ಯಾನೇಜರ್ (F&A)- 55 ವರ್ಷ
ಅಡಿಶನಲ್ ಜನರಲ್ ಮ್ಯಾನೇಜರ್(F&A)- 50 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- 45 ವರ್ಷ
ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- 40 ವರ್ಷ
ಮ್ಯಾನೇಜರ್(F&A)- 40 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್(F&A)- 35 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್)-45 ವರ್ಷ
ಮ್ಯಾನೇಜರ್ (ಕಾಂಟ್ರ್ಯಾಕ್ಟ್)- 40 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್)- 35 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಸಂಬಳ ಎಷ್ಟು?
ಜನರಲ್ ಮ್ಯಾನೇಜರ್ (F&A)- ತಿಂಗಳಿಗೆ ₹ 1,65,000
ಅಡಿಶನಲ್ ಜನರಲ್ ಮ್ಯಾನೇಜರ್(F&A)- ತಿಂಗಳಿಗೆ ₹ 1,50,000
ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- ತಿಂಗಳಿಗೆ ₹ 1,40,000
ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- ತಿಂಗಳಿಗೆ ₹ 85,000
ಮ್ಯಾನೇಜರ್(F&A)- ತಿಂಗಳಿಗೆ ₹ 75,000
ಅಸಿಸ್ಟೆಂಟ್ ಮ್ಯಾನೇಜರ್(F&A)- ತಿಂಗಳಿಗೆ ₹ 50,000
ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್)- ತಿಂಗಳಿಗೆ ₹ 1,40,000
ಮ್ಯಾನೇಜರ್ (ಕಾಂಟ್ರ್ಯಾಕ್ಟ್)- ತಿಂಗಳಿಗೆ ₹ 75,000
ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್)- ತಿಂಗಳಿಗೆ ₹ 50,000
ಇದನ್ನೂ ಓದಿ: ECIL Recruitment 2023: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ನಲ್ಲಿ 200 ಹುದ್ದೆಗಳಿಗೆ ಅರ್ಜಿ ಆಹ್ವಾನ- ಜ.11ಕ್ಕೆ ಸಂದರ್ಶನ
ಈ ಹುದ್ದೆಗಳಿಗೆ ಆನ್ಲೈನ್/ ಆಫ್ಲೈನ್(ಪೋಸ್ಟ್) ಮುಖಾಂತರ ಅರ್ಜಿ ಹಾಕಬಹುದು.
ಆನ್ಲೈನ್ನಲ್ಲಿ ಅರ್ಜಿ ಹಾಕುವ ಲಿಂಕ್ಸ್ ಇಲ್ಲಿವೆ:
ಅಡಿಶನಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್(F&A) ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಈ ಹುದ್ದೆಗಳಿಗೆ ಫೆಬ್ರವರಿ 7, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ.
ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್(ಕಾಂಟ್ಯ್ರಾಕ್ಟ್) ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಈ ಹುದ್ದೆಗಳಿಗೆ ಅರ್ಜಿ ಹಾಕಲು ಕೊನೆಯ ದಿನ ಫೆಬ್ರವರಿ 4, 2023
ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವಾಗ ಯಾವುದೇ ತೊಂದರೆ ಕಂಡುಬಂದರೆ ಇ-ಮೇಲ್ ಐಡಿ helpdesk@bmrc.co.in ಗೆ ತಿಳಿಸಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 7, 2023
ಅಡಿಶನಲ್ ಮ್ಯಾನೇಜರ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಯ ಹಾರ್ಡ್ ಕಾಪಿ ಕಳುಹಿಸಲು ಕೊನೆಯ ದಿನ- ಫೆಬ್ರವರಿ 17, 2023
ಅಭ್ಯರ್ಥಿಗಳು ಪೋಸ್ಟ್/ ಆಫ್ಲೈನ್ ಮೂಲಕವೂ ಅರ್ಜಿ ಹಾಕಬಹುದು. ಅದಕ್ಕೆ ಅಭ್ಯರ್ಥಿಗಳು ಮಾಡಬೇಕಿರೋದು ಇಷ್ಟೇ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
3ನೇ ಮಹಡಿ
BMTC ಕಾಂಪ್ಲೆಕ್ಸ್
K.H. ರಸ್ತೆ
ಶಾಂತಿನಗರ
ಬೆಂಗಳೂರು - 560027
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ