• ಹೋಂ
  • »
  • ನ್ಯೂಸ್
  • »
  • Jobs
  • »
  • Metro Jobs: ಬೆಂಗಳೂರು ಮೆಟ್ರೋದಲ್ಲಿ 16 ಹುದ್ದೆಗಳಿಗೆ ಅರ್ಜಿ ಆಹ್ವಾನ, 1 ಲಕ್ಷದವರೆಗೆ ಸಂಬಳ

Metro Jobs: ಬೆಂಗಳೂರು ಮೆಟ್ರೋದಲ್ಲಿ 16 ಹುದ್ದೆಗಳಿಗೆ ಅರ್ಜಿ ಆಹ್ವಾನ, 1 ಲಕ್ಷದವರೆಗೆ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರ್ಚ್​ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮತ್ತು ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

BMRCL Recruitment 2023: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(Bengaluru Metro Rail Corporation Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಡೆಪ್ಯುಟಿ ಚೀಫ್​ ಎಂಜಿನಿಯರ್, ಸೀನಿಯರ್ ಜಿಯಾಲಜಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಮಾರ್ಚ್​ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮತ್ತು ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
ಹುದ್ದೆಡೆಪ್ಯುಟಿ ಚೀಫ್​ ಎಂಜಿನಿಯರ್, ಸೀನಿಯರ್ ಜಿಯಾಲಜಿಸ್ಟ್
ಒಟ್ಟು ಹುದ್ದೆ16
ವಿದ್ಯಾರ್ಹತೆಡಿಪ್ಲೊಮಾ, ಬಿಇ/ಬಿ.ಟೆಕ್
ವೇತನಮಾಸಿಕ ₹ 40,000- ₹ 1,10,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 21, 2023

ಹುದ್ದೆಯ ಮಾಹಿತಿ:
ಡೆಪ್ಯುಟಿ ಚೀಫ್ ಎಂಜಿನಿಯರ್/ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ)- 7
ಎಕ್ಸಿಕ್ಯೂಟಿವ್ ಎಂಜಿನಿಯರ್/ ಮ್ಯಾನೇಜರ್- 3
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್/ ಅಸಿಸ್ಟೆಂಟ್ ಎಂಜಿನಿಯರ್- 4
ಸೀನಿಯರ್ ಜಿಯಾಲಜಿಸ್ಟ್​- 1
ಜಿಯಾಲಿಜಿಸ್ಟ್- 1


ಇದನ್ನೂ ಓದಿ: BBMPಯಲ್ಲಿ 49 ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾರ್ಚ್​ 3ಕ್ಕೆ ಸಂದರ್ಶನ


ವಿದ್ಯಾರ್ಹತೆ:
ಡೆಪ್ಯುಟಿ ಚೀಫ್ ಎಂಜಿನಿಯರ್/ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ)- ಡಿಪ್ಲೊಮಾ, ಬಿಇ/ಬಿ.ಟೆಕ್
ಎಕ್ಸಿಕ್ಯೂಟಿವ್ ಎಂಜಿನಿಯರ್/ ಮ್ಯಾನೇಜರ್- ಡಿಪ್ಲೊಮಾ, ಬಿಇ/ಬಿ.ಟೆಕ್
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್/ ಅಸಿಸ್ಟೆಂಟ್ ಎಂಜಿನಿಯರ್- ಡಿಪ್ಲೊಮಾ, ಬಿಇ/ಬಿ.ಟೆಕ್
ಸೀನಿಯರ್ ಜಿಯಾಲಜಿಸ್ಟ್​- ಎಂ.ಟೆಕ್, ಎಂಎಸ್ಸಿ
ಜಿಯಾಲಿಜಿಸ್ಟ್- ಎಂ.ಟೆಕ್, ಎಂಎಸ್ಸಿ


ವಯೋಮಿತಿ:
ಡೆಪ್ಯುಟಿ ಚೀಫ್ ಎಂಜಿನಿಯರ್/ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ)- 62 ವರ್ಷ
ಎಕ್ಸಿಕ್ಯೂಟಿವ್ ಎಂಜಿನಿಯರ್/ ಮ್ಯಾನೇಜರ್- 62 ವರ್ಷ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್/ ಅಸಿಸ್ಟೆಂಟ್ ಎಂಜಿನಿಯರ್- 62 ವರ್ಷ
ಸೀನಿಯರ್ ಜಿಯಾಲಜಿಸ್ಟ್​- 55 ವರ್ಷ
ಜಿಯಾಲಿಜಿಸ್ಟ್- 40 ವರ್ಷ


ಇದನ್ನೂ ಓದಿ: Job Alert: ತಿಂಗಳಿಗೆ 20 ಸಾವಿರ ಸಂಬಳ- ದಕ್ಷಿಣ ಕನ್ನಡದಲ್ಲಿ ಕೆಲಸಕ್ಕೆ ಅರ್ಜಿ ಹಾಕಿ


ವೇತನ:
ಡೆಪ್ಯುಟಿ ಚೀಫ್ ಎಂಜಿನಿಯರ್/ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ)- ಮಾಸಿಕ ₹ 1,10,000
ಎಕ್ಸಿಕ್ಯೂಟಿವ್ ಎಂಜಿನಿಯರ್/ ಮ್ಯಾನೇಜರ್- ಮಾಸಿಕ ₹ 75,000
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್/ ಅಸಿಸ್ಟೆಂಟ್ ಎಂಜಿನಿಯರ್-ಮಾಸಿಕ ₹ 60,000
ಸೀನಿಯರ್ ಜಿಯಾಲಜಿಸ್ಟ್​- ಮಾಸಿಕ ₹ 80,000
ಜಿಯಾಲಿಜಿಸ್ಟ್-ಮಾಸಿಕ ₹ 40,000




ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 21, 2023
ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 25, 2023


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್​ಗಳ ಮೇಲೆ ಕ್ಲಿಕ್ ಮಾಡಿ.


ಡಿಜಿಎಂ, ಎಕ್ಸಿಕ್ಯೂಟಿವ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಜಿಯಾಲಜಿಸ್ಟ್​, ಸೀನಿಯರ್ ಜಿಯಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆ ಕಂಡುಬಂದರೆ ಅಥವಾ ಗೊಂದಲ ಉಂಟಾದರೆ ಇ-ಮೇಲ್ ಐಡಿ helpdesk@bmrc.co.in ಗೆ ಸಂಪರ್ಕಿಸಿ.

Published by:Latha CG
First published: