• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಬೆಂಗಳೂರು ನಗರ ಜಿಲ್ಲಾ ಪಂಚಾಯತ್​​ನಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ ₹ 50,000 ಸಂಬಳ

Job Alert: ಬೆಂಗಳೂರು ನಗರ ಜಿಲ್ಲಾ ಪಂಚಾಯತ್​​ನಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ ₹ 50,000 ಸಂಬಳ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಫೆಬ್ರವರಿ 24, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ಪೋಸ್ಟ್​ ಮುಖಾಂತರ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

Bengaluru Urban Zilla Panchayat Recruitment 2023: ರಾಜ್ಯ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್(Bengaluru Urban Zilla Panchayat)​​ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 1 ಜಲ ಸಂಜೀವಿನಿ ಜಿಲ್ಲಾ ಸಂಯೋಜಕ ಹುದ್ದೆ ಖಾಲಿ ಇದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಈ ಹುದ್ದೆಗೆ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಫೆಬ್ರವರಿ 24, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆಫ್​ಲೈನ್​/ಪೋಸ್ಟ್  (Offline)​ ಮುಖಾಂತರ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೆಂಗಳೂರು ನಗರ ಜಿಲ್ಲಾ ಪಂಚಾಯತ್​​
ಹುದ್ದೆಜಲ ಸಂಜೀವಿನಿ ಜಿಲ್ಲಾ ಸಂಯೋಜಕ
ಒಟ್ಟು ಹುದ್ದೆ1
ವಿದ್ಯಾರ್ಹತೆಬಿ.ಎಸ್ಸಿ, ಬಿ.ಟೆಕ್
ವೇತನಮಾಸಿಕ ₹ 50,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 24, 2023

ವಿದ್ಯಾರ್ಹತೆ ಏನಿರಬೇಕು?
ಬೆಂಗಳೂರು ನಗರ ಜಿಲ್ಲಾ ಪಂಚಾಯತ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಎಸ್ಸಿ (ಅಗ್ರಿಕಲ್ಚರ್), ಬಿ.ಟೆಕ್ (ಅಗ್ರಿಕಲ್ಚರ್​ ಎಂಜಿನಿಯರಿಂಗ್) ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: JOBS: ಬೆಳಗಾವಿ ಸ್ಮಾರ್ಟ್​ ಸಿಟಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿ- ಫೆ.16 ಲಾಸ್ಟ್​ ಡೇಟ್


ಜಲ ಸಂಜೀವಿನಿ ಜಿಲ್ಲಾ ಸಂಯೋಜಕ ಹುದ್ದೆಗೆ ಅಭ್ಯರ್ಥಿಯನ್ನು 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುತ್ತದೆ.


ಅರ್ಹತೆಗಳು:
ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಹಾಕಬೇಕು.
ಅಭ್ಯರ್ಥಿಗಳು ಕೃಷಿ/ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕನಿಷ್ಠ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಕನಿಷ್ಠ ಸಹಾಯಕ ಕೃಷಿ ನಿರ್ದೇಶಕ ಹುದ್ದೆಯಲ್ಲಿ ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದು.
ಜಿಲ್ಲಾ ಪಂಚಾಯತ್ & ಇತರೆ ಅನುಷ್ಠಾನ ಇಲಾಖೆಗಳೊಡನೆ ಸಮನ್ವಯ ಸಾಧಿಸುವ ಸಾಮರ್ಥ್ಯ ಹೊಂದಿರಬೇಕು.
ಸತತವಾಗಿ ಕ್ಷೇತ್ರ ಭೇಟಿ ಮಾಡುವ ಹಾಗೂ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿರಬೇಕು.


ವಯೋಮಿತಿ:
ಬೆಂಗಳೂರು ನಗರ ಜಿಲ್ಲಾ ಪಂಚಾಯತ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 65 ವರ್ಷ ಮೀರಿರಬಾರದು.


ಇದನ್ನೂ ಓದಿ: Bengaluru Jobs: ತಿಂಗಳಿಗೆ ₹ 35,000 ಸಂಬಳ- ಡಿಗ್ರಿ ಪಾಸಾದವರು ನಾಳೆಯೊಳಗೆ ಅರ್ಜಿ ಹಾಕಿ


ವೇತನ:
ಬೆಂಗಳೂರು ನಗರ ಜಿಲ್ಲಾ ಪಂಚಾಯತ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಜಲ ಸಂಜೀವಿನಿ ಜಿಲ್ಲಾ ಸಂಯೋಜಕ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 50,000 ವೇತನ ಹಾಗೂ ಪ್ರಯಾಣ ಭತ್ಯೆ & ಇತರೆ ಭತ್ಯೆ 5,000 ರೂ, ಕೊಡಲಾಗುತ್ತದೆ.




ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಫೆ.24, 2023 ಸಂಜೆ 5.30ರೊಳಗೆ ಕಳುಹಿಸಬೇಕು.


ಅರ್ಜಿಯ ಪ್ರತಿ


ಬೆಂಗಳೂರು ನಗರ ಜಿಲ್ಲಾ ಪಂಚಾಯತ್​
ಬನಶಂಕರಿ ದೇವಸ್ಥಾನದ ಹತ್ತಿರ
ಎಸ್​​.ಕರಿಯಪ್ಪ ರಸ್ತೆ
ಬನಶಂಕರಿ
ಬೆಂಗಳೂರು


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 24, 2023

Published by:Latha CG
First published: