Belagavi District Court Recruitment 2023: ಬೆಳಗಾವಿ ಜಿಲ್ಲಾ ಕೋರ್ಟ್ನಲ್ಲಿ(Belagavi District Court) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 68 ಪಿಯೋನ್, ಸ್ಟೆನೋಗ್ರಾಫರ್ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾ ಕೋರ್ಟ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿತ್ತು. ಮಾರ್ಚ್ 3, 2023 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನ(Last Date) ಎಂದು ನೋಟಿಫಿಕೇಶನ್ನಲ್ಲಿ(Notification) ತಿಳಿಸಲಾಗಿದೆ. ಹೋಗಾಗಿ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಬೆಳಗಾವಿಯಲ್ಲಿ ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬೆಳಗಾವಿ ಜಿಲ್ಲಾ ಕೋರ್ಟ್ |
ಹುದ್ದೆ | ಪಿಯೋನ್, ಸ್ಟೆನೋಗ್ರಾಫರ್ |
ಒಟ್ಟು ಹುದ್ದೆ | 68 |
ವಿದ್ಯಾರ್ಹತೆ | 10ನೇ ತರಗತಿ, ಪಿಯುಸಿ, ಡಿಪ್ಲೊಮಾ |
ವೇತನ | ಮಾಸಿಕ ₹ 27,650-52,650 |
ಉದ್ಯೋಗದ ಸ್ಥಳ | ಬೆಳಗಾವಿ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 3, 2023 |
ಇದನ್ನೂ ಓದಿ: KMF SHIMUL Recruitment 2023: ಕೆಎಂಎಫ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅರ್ಜಿ ಹಾಕಿ
ವಿದ್ಯಾರ್ಹತೆ:
ಸ್ಟೆನೋಗ್ರಾಫರ್ಸ್ (ಗ್ರೇಡ್-3)- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್ನಲ್ಲಿ ಡಿಪ್ಲೋಮಾ
ಪ್ರೊಸೆಸ್ ಸರ್ವರ್- 10ನೇ ತರಗತಿ
ಪಿಯೋನ್- 10ನೇ ತರಗತಿ
ವಯೋಮಿತಿ:
ಬೆಳಗಾವಿ ಜಿಲ್ಲಾ ಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 3, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು- 3 ವರ್ಷ
ಅರ್ಜಿ ಶುಲ್ಕ:
SC/ST/ಪ್ರವರ್ಗ-1 & PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು:
ಸ್ಟೆನೋಗ್ರಾಫರ್ಸ್ (ಗ್ರೇಡ್-3) ಹುದ್ದೆ- 300 ರೂ
ಪ್ರೊಸೆಸ್ ಸರ್ವರ್ ಹುದ್ದೆ- 250 ರೂ.
ಪಿಯೋನ್ ಹುದ್ದೆ- 200 ರೂ.
ಪಾವತಿಸುವ ಬಗೆ- ಆನ್ಲೈನ್ / ಚಲನ್
ಇದನ್ನೂ ಓದಿ: BBMP Recruitment 2023: ಬಿಬಿಎಂಪಿಯಲ್ಲಿ ಖಾಲಿ ಇರುವ 49 ಹುದ್ದೆಗಳಿಗೆ ನಾಳೆಯೇ ಸಂದರ್ಶನ
ವೇತನ:
ಸ್ಟೆನೋಗ್ರಾಫರ್ಸ್ (ಗ್ರೇಡ್-3)- ಮಾಸಿಕ ₹ 27,650-52,650
ಪ್ರೊಸೆಸ್ ಸರ್ವರ್- ಮಾಸಿಕ ₹19,950- 37,900
ಪಿಯೋನ್- ಮಾಸಿಕ ₹ 17,000- 28,950
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಟೈಪಿಂಗ್ ಟೆಸ್ಟ್
ಕಂಪ್ಯೂಟರ್ ಲಿಟ್ರಸಿ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 3, 2023 (ಇಂದು)
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮಾರ್ಚ್ 7, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ