Belagavi District Court Recruitment 2023: ಬೆಳಗಾವಿ ಜಿಲ್ಲಾ ಕೋರ್ಟ್(Belagavi District Court) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 68 ಪಿಯೋನ್, ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಮಾರ್ಚ್ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಬೆಳಗಾವಿಯಲ್ಲಿ ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬೆಳಗಾವಿ ಜಿಲ್ಲಾ ಕೋರ್ಟ್ |
ಹುದ್ದೆ | ಪಿಯೋನ್, ಸ್ಟೆನೋಗ್ರಾಫರ್ |
ಒಟ್ಟು ಹುದ್ದೆ | 68 |
ವಿದ್ಯಾರ್ಹತೆ | ಪಿಯುಸಿ, 10ನೇ ತರಗತಿ |
ವೇತನ | ಮಾಸಿಕ ₹ 27,650-52,650 |
ಉದ್ಯೋಗದ ಸ್ಥಳ | ಬೆಳಗಾವಿ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 3, 2023 |
ವಿದ್ಯಾರ್ಹತೆ:
ಸ್ಟೆನೋಗ್ರಾಫರ್ಸ್ (ಗ್ರೇಡ್-3)- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್ನಲ್ಲಿ ಡಿಪ್ಲೋಮಾ
ಪ್ರೊಸೆಸ್ ಸರ್ವರ್- 10ನೇ ತರಗತಿ
ಪಿಯೋನ್- 10ನೇ ತರಗತಿ
ಇದನ್ನೂ ಓದಿ: ISEC Recruitment 2023: ಎಂ.ಎಸ್ಸಿ ಆಗಿದ್ರೆ 50 ಸಾವಿರ ಸಂಬಳ- ಈಗಲೇ ರೆಸ್ಯೂಮ್ ಕಳುಹಿಸಿ
ವಯೋಮಿತಿ:
ಬೆಳಗಾವಿ ಜಿಲ್ಲಾ ಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 3, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು- 3 ವರ್ಷ
ಅರ್ಜಿ ಶುಲ್ಕ:
SC/ST/ಪ್ರವರ್ಗ-1 & PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು:
ಸ್ಟೆನೋಗ್ರಾಫರ್ಸ್ (ಗ್ರೇಡ್-3) ಹುದ್ದೆ- 300 ರೂ
ಪ್ರೊಸೆಸ್ ಸರ್ವರ್ ಹುದ್ದೆ- 250 ರೂ.
ಪಿಯೋನ್ ಹುದ್ದೆ- 200 ರೂ.
ಪಾವತಿಸುವ ಬಗೆ- ಆನ್ಲೈನ್ / ಚಲನ್
ಇದನ್ನೂ ಓದಿ: UIDAI Recruitment 2023: ಪ್ರೈವೇಟ್ ಸೆಕ್ರೆಟರಿ ಹುದ್ದೆ ಖಾಲಿ ಇದೆ- ಬೆಂಗಳೂರಿನಲ್ಲಿ ಕೆಲಸ
ವೇತನ:
ಸ್ಟೆನೋಗ್ರಾಫರ್ಸ್ (ಗ್ರೇಡ್-3)- ಮಾಸಿಕ ₹ 27,650-52,650
ಪ್ರೊಸೆಸ್ ಸರ್ವರ್- ಮಾಸಿಕ ₹19,950- 37,900
ಪಿಯೋನ್- ಮಾಸಿಕ ₹ 17,000- 28,950
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಟೈಪಿಂಗ್ ಟೆಸ್ಟ್
ಕಂಪ್ಯೂಟರ್ ಲಿಟ್ರಸಿ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 3, 2023
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮಾರ್ಚ್ 7, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ