BBMP Recruitment 2023: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhath Bengaluru Mahanagara Palike) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 49 ಪ್ಯಾರಾ ಮೆಡಿಕಲ್ ವರ್ಕರ್, ಸೈಕಿಯಾಟ್ರಿಕ್ ನರ್ಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 3, 2023 ಅಂದರೆ ನಾಳೆ ಸಂದರ್ಶನ(Walk-In-Interview) ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ.
ಸಂದರ್ಶನದಲ್ಲಿ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ |
ಹುದ್ದೆ | ಪ್ಯಾರಾ ಮೆಡಿಕಲ್ ವರ್ಕರ್, ಸೈಕಿಯಾಟ್ರಿಕ್ ನರ್ಸ್ |
ಒಟ್ಟು ಹುದ್ದೆ | 49 |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ |
ವೇತನ | ಮಾಸಿಕ ₹ 63,000 |
ಉದ್ಯೋಗದ ಸ್ಥಳ | ಬೆಂಗಳೂರು |
ಸಂದರ್ಶನ ನಡೆಯುವ ದಿನ | ಮಾರ್ಚ್ 3, 2023 |
ಇದನ್ನೂ ಓದಿ: Kanara College Society Kumta Recruitment 2023: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಇವತ್ತೇ ಅರ್ಜಿ ಹಾಕಿ
ವಿದ್ಯಾರ್ಹತೆ:
ಪ್ಯಾರಾ ಮೆಡಿಕಲ್ ವರ್ಕರ್- 10th, ಬಿ.ಎಸ್ಸಿ, MSW
ಸೀನಿಯರ್ ಟ್ಯೂಬರ್ಕುಲೋಸಿಸ್ ಲ್ಯಾಬೋರೇಟರಿ ಸೂಪರ್ವೈಸರ್- ಬಿ.ಎಸ್ಸಿ, ಡಿಎಂಎಲ್ಟಿ
ಸೈಕಿಯಾಟ್ರಿಕ್ ನರ್ಸ್- ಪದವಿ, ಬಿಎಸ್ಸಿ
ಕಮ್ಯುನಿಟಿ ನರ್ಸ್- ಪದವಿ, ಬಿಎಸ್ಸಿ
ಮೆಡಿಕಲ್ ಆಫೀಸರ್- ಎಂಬಿಬಿಎಸ್
ಕಮ್ಯುನಿಟಿ ಮೊಬಿಲೈಜರ್- ಸ್ನಾತಕೋತ್ತರ ಪದವಿ
ಝೋನಲ್ ಅಕೌಂಟ್ಸ್ ಮ್ಯಾನೇಜರ್- ಎಂ.ಕಾಂ
ಡೆಂಟಿಸ್ಟ್- ಬಿಡಿಎಸ್, ಎಂಡಿಎಸ್
ಆಶಾ ಮೆಂಟರ್- ಬಿ.ಎಸ್ಸಿ, ANM, GNM
ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್- BDS, ಸ್ನಾತಕೋತ್ತರ ಪದವಿ, ಎಂಬಿಬಿಎಸ್
ಸೈಕಲಾಜಿಸ್ಟ್/ ಕೌನ್ಸೆಲರ್- ಪದವಿ, ಸ್ನಾತಕೋತ್ತರ ಪದವಿ, MSW
ಡಿಸ್ಟ್ರಿಕ್ಟ್ ಕಮ್ಯುನಿಟಿ ಮೊಬಿಲೈಜರ್- ಬಿ.ಎಸ್ಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ
RBSK ಮೆಡಿಕಲ್ ಆಫೀಸರ್- BAMS
ವೇತನ:
ಪ್ಯಾರಾ ಮೆಡಿಕಲ್ ವರ್ಕರ್- ಮಾಸಿಕ ₹ 16,800
ಸೀನಿಯರ್ ಟ್ಯೂಬರ್ಕುಲೋಸಿಸ್ ಲ್ಯಾಬೋರೇಟರಿ ಸೂಪರ್ವೈಸರ್- ಮಾಸಿಕ ₹ 21,000
ಸೈಕಿಯಾಟ್ರಿಕ್ ನರ್ಸ್- ಮಾಸಿಕ ₹14,000
ಕಮ್ಯುನಿಟಿ ನರ್ಸ್- ಮಾಸಿಕ ₹14,000
ಮೆಡಿಕಲ್ ಆಫೀಸರ್- ಮಾಸಿಕ ₹ 47,250
ಕಮ್ಯುನಿಟಿ ಮೊಬಿಲೈಜರ್- ಮಾಸಿಕ ₹ 50,000
ಝೋನಲ್ ಅಕೌಂಟ್ಸ್ ಮ್ಯಾನೇಜರ್- ಮಾಸಿಕ ₹ 17,000
ಡೆಂಟಿಸ್ಟ್- ಮಾಸಿಕ ₹ 63,000
ಆಶಾ ಮೆಂಟರ್- ಮಾಸಿಕ ₹ 15,600
ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್- ಮಾಸಿಕ ₹ 40,000
ಸೈಕಲಾಜಿಸ್ಟ್/ ಕೌನ್ಸೆಲರ್- ಮಾಸಿಕ ₹ 25,000
ಡಿಸ್ಟ್ರಿಕ್ಟ್ ಕಮ್ಯುನಿಟಿ ಮೊಬಿಲೈಜರ್- ಮಾಸಿಕ ₹ 13,135
RBSK ಮೆಡಿಕಲ್ ಆಫೀಸರ್- ಮಾಸಿಕ ₹ 25,000
ವಯೋಮಿತಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ:Ambika Vidyalaya Recruitment 2023: ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂದರ್ಶನ ನಡೆಯುವ ಸ್ಥಳ:
ಡಾ.ರಾಜ್ ಕುಮಾರ್ ಗಾಜಿನ ಮನೆ
ಬಿಬಿಎಂಪಿ ಕೇಂದ್ರ ಕಚೇರಿ
ಎನ್.ಆರ್. ಚೌಕ
ಬೆಂಗಳೂರು-560002
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 21/02/2023
ಸಂದರ್ಶನ ನಡೆಯುವ ದಿನಾಂಕ: ಮಾರ್ಚ್ 1 ರಿಂದ 3, 2023 (ನಾಳೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ