• ಹೋಂ
  • »
  • ನ್ಯೂಸ್
  • »
  • Jobs
  • »
  • BBMPಯಲ್ಲಿ 49 ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾರ್ಚ್​ 3ಕ್ಕೆ ಸಂದರ್ಶನ

BBMPಯಲ್ಲಿ 49 ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾರ್ಚ್​ 3ಕ್ಕೆ ಸಂದರ್ಶನ

ಬಿಬಿಎಂಪಿ

ಬಿಬಿಎಂಪಿ

ಮಾರ್ಚ್​ 3, 2023 ರಂದು ಸಂದರ್ಶನ(Walk-In-Interview) ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

BBMP Recruitment 2023: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(Bruhath Bengaluru Mahanagara Palike) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 49 ಪ್ಯಾರಾ ಮೆಡಿಕಲ್ ವರ್ಕರ್, ಸೈಕಿಯಾಟ್ರಿಕ್ ನರ್ಸ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್​ 3, 2023 ರಂದು ಸಂದರ್ಶನ(Walk-In-Interview) ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಹುದ್ದೆಪ್ಯಾರಾ ಮೆಡಿಕಲ್ ವರ್ಕರ್, ಸೈಕಿಯಾಟ್ರಿಕ್ ನರ್ಸ್​
ಒಟ್ಟು ಹುದ್ದೆ49
ವಿದ್ಯಾರ್ಹತೆಪದವಿ, ಬಿಎಸ್ಸಿ, ಸ್ನಾತಕೋತ್ತರ ಪದವಿ
ವೇತನಮಾಸಿಕ ₹ 16,800- ₹ 63,000
ಉದ್ಯೋಗದ ಸ್ಥಳಬೆಂಗಳೂರು
ಸಂದರ್ಶನ ನಡೆಯುವ ದಿನಾಂಕಮಾರ್ಚ್ 1 ರಿಂದ​ 3, 2023

ಹುದ್ದೆಯ ಮಾಹಿತಿ:
ಪ್ಯಾರಾ ಮೆಡಿಕಲ್ ವರ್ಕರ್- 2
ಸೀನಿಯರ್ ಟ್ಯೂಬರ್​​ಕುಲೋಸಿಸ್ ಲ್ಯಾಬೋರೇಟರಿ ಸೂಪರ್​ವೈಸರ್- 2
ಸೈಕಿಯಾಟ್ರಿಕ್ ನರ್ಸ್​- 1
ಕಮ್ಯುನಿಟಿ ನರ್ಸ್​- 1
ಮೆಡಿಕಲ್ ಆಫೀಸರ್- 29
ಕಮ್ಯುನಿಟಿ ಮೊಬಿಲೈಜರ್- 1
ಝೋನಲ್ ಅಕೌಂಟ್ಸ್​ ಮ್ಯಾನೇಜರ್- 2
ಡೆಂಟಿಸ್ಟ್- 4
ಆಶಾ ಮೆಂಟರ್- 3
ಡಿಸ್ಟ್ರಿಕ್ಟ್​ ಕನ್ಸಲ್ಟೆಂಟ್- 1
ಸೈಕಲಾಜಿಸ್ಟ್​/ ಕೌನ್ಸೆಲರ್- 1
ಡಿಸ್ಟ್ರಿಕ್ಟ್ ಕಮ್ಯುನಿಟಿ ಮೊಬಿಲೈಜರ್- 1
RBSK ಮೆಡಿಕಲ್ ಆಫೀಸರ್- 1


ಇದನ್ನೂ ಓದಿ: NABFINS: ನಬಾರ್ಡ್​ನಲ್ಲಿ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್​​ ಹುದ್ದೆ ಖಾಲಿ ಇದೆ- ಈಗಲೇ ಅಪ್ಲೈ ಮಾಡಿ


ವಿದ್ಯಾರ್ಹತೆ:
ಪ್ಯಾರಾ ಮೆಡಿಕಲ್ ವರ್ಕರ್- 10th, ಬಿ.ಎಸ್ಸಿ, MSW
ಸೀನಿಯರ್ ಟ್ಯೂಬರ್​​ಕುಲೋಸಿಸ್ ಲ್ಯಾಬೋರೇಟರಿ ಸೂಪರ್​ವೈಸರ್- ಬಿ.ಎಸ್ಸಿ, ಡಿಎಂಎಲ್​ಟಿ
ಸೈಕಿಯಾಟ್ರಿಕ್ ನರ್ಸ್​- ಪದವಿ, ಬಿಎಸ್ಸಿ
ಕಮ್ಯುನಿಟಿ ನರ್ಸ್​- ಪದವಿ, ಬಿಎಸ್ಸಿ
ಮೆಡಿಕಲ್ ಆಫೀಸರ್- ಎಂಬಿಬಿಎಸ್
ಕಮ್ಯುನಿಟಿ ಮೊಬಿಲೈಜರ್- ಸ್ನಾತಕೋತ್ತರ ಪದವಿ
ಝೋನಲ್ ಅಕೌಂಟ್ಸ್​ ಮ್ಯಾನೇಜರ್- ಎಂ.ಕಾಂ
ಡೆಂಟಿಸ್ಟ್- ಬಿಡಿಎಸ್, ಎಂಡಿಎಸ್
ಆಶಾ ಮೆಂಟರ್- ಬಿ.ಎಸ್ಸಿ, ANM, GNM
ಡಿಸ್ಟ್ರಿಕ್ಟ್​ ಕನ್ಸಲ್ಟೆಂಟ್- BDS, ಸ್ನಾತಕೋತ್ತರ ಪದವಿ, ಎಂಬಿಬಿಎಸ್
ಸೈಕಲಾಜಿಸ್ಟ್​/ ಕೌನ್ಸೆಲರ್- ಪದವಿ, ಸ್ನಾತಕೋತ್ತರ ಪದವಿ, MSW
ಡಿಸ್ಟ್ರಿಕ್ಟ್ ಕಮ್ಯುನಿಟಿ ಮೊಬಿಲೈಜರ್- ಬಿ.ಎಸ್ಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ
RBSK ಮೆಡಿಕಲ್ ಆಫೀಸರ್- BAMS


ವಯೋಮಿತಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ


ವೇತನ:
ಪ್ಯಾರಾ ಮೆಡಿಕಲ್ ವರ್ಕರ್- ಮಾಸಿಕ ₹ 16,800
ಸೀನಿಯರ್ ಟ್ಯೂಬರ್​​ಕುಲೋಸಿಸ್ ಲ್ಯಾಬೋರೇಟರಿ ಸೂಪರ್​ವೈಸರ್- ಮಾಸಿಕ ₹ 21,000
ಸೈಕಿಯಾಟ್ರಿಕ್ ನರ್ಸ್​- ಮಾಸಿಕ ₹14,000
ಕಮ್ಯುನಿಟಿ ನರ್ಸ್​- ಮಾಸಿಕ ₹14,000
ಮೆಡಿಕಲ್ ಆಫೀಸರ್- ಮಾಸಿಕ ₹ 47,250
ಕಮ್ಯುನಿಟಿ ಮೊಬಿಲೈಜರ್- ಮಾಸಿಕ ₹ 50,000
ಝೋನಲ್ ಅಕೌಂಟ್ಸ್​ ಮ್ಯಾನೇಜರ್- ಮಾಸಿಕ ₹ 17,000
ಡೆಂಟಿಸ್ಟ್- ಮಾಸಿಕ ₹ 63,000
ಆಶಾ ಮೆಂಟರ್- ಮಾಸಿಕ ₹ 15,600
ಡಿಸ್ಟ್ರಿಕ್ಟ್​ ಕನ್ಸಲ್ಟೆಂಟ್- ಮಾಸಿಕ ₹ 40,000
ಸೈಕಲಾಜಿಸ್ಟ್​/ ಕೌನ್ಸೆಲರ್- ಮಾಸಿಕ ₹ 25,000
ಡಿಸ್ಟ್ರಿಕ್ಟ್ ಕಮ್ಯುನಿಟಿ ಮೊಬಿಲೈಜರ್- ಮಾಸಿಕ ₹ 13,135
RBSK ಮೆಡಿಕಲ್ ಆಫೀಸರ್- ಮಾಸಿಕ ₹ 25,000


ಇದನ್ನೂ ಓದಿ: Teaching Jobs: ಜಾಲಹಳ್ಳಿ ಏರ್​ ಫೋರ್ಸ್​ ಸ್ಕೂಲ್​​ನಲ್ಲಿ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ




ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 21/02/2023
ಸಂದರ್ಶನ ನಡೆಯುವ ದಿನಾಂಕ: ಮಾರ್ಚ್ 1 ರಿಂದ​ 3, 2023


ಸಂದರ್ಶನ ನಡೆಯುವ ಸ್ಥಳ:
ಡಾ.ರಾಜ್ ಕುಮಾರ್ ಗಾಜಿನ ಮನೆ
ಬಿಬಿಎಂಪಿ ಕೇಂದ್ರ ಕಚೇರಿ
ಎನ್.ಆರ್. ಚೌಕ
ಬೆಂಗಳೂರು-560002

Published by:Latha CG
First published: