• ಹೋಂ
  • »
  • ನ್ಯೂಸ್
  • »
  • Jobs
  • »
  • BBMPಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ

BBMPಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ

BBMP

BBMP

ಒಟ್ಟು 3673 ಪೌರಕಾರ್ಮಿಕ- ಗ್ರೂಪ್​ ಡಿ(Group D) ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ನಾಳೆಯೊಳಗೆ ಅರ್ಜಿ ಹಾಕಿ.

  • Share this:

BBMP Recruitment 2023: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(Bruhath Bengaluru Mahanagara Palike) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಜನವರಿ 30 ಅಂದರೆ ನಾಳೆಯೇ ಕೊನೆಯ ದಿನವಾಗಿದೆ. ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಿತ್ತು. ಒಟ್ಟು 3673 ಪೌರಕಾರ್ಮಿಕ- ಗ್ರೂಪ್​ ಡಿ(Group D) ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ನಾಳೆಯೊಳಗೆ ಅರ್ಜಿ ಹಾಕಿ. ಆಸಕ್ತರು ಆಫ್​ಲೈನ್/ಪೋಸ್ಟ್​​ ​ ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಹುದ್ದೆಪೌರಕಾರ್ಮಿಕ- ಗ್ರೂಪ್​ ಡಿ
ಒಟ್ಟು ಹುದ್ದೆ3673
ವಿದ್ಯಾರ್ಹತೆಕೇಳಿಲ್ಲ
ವೇತನಮಾಸಿಕ 17,000-28,950 ರೂ.
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಜನವರಿ 30, 2023

ಹುದ್ದೆಯ ಮಾಹಿತಿ:
ಸ್ಥಳೀಯ ವೃಂದದ ಹುದ್ದೆಗಳು(KK) ಕಲ್ಯಾಣ ಕರ್ನಾಟಕ- 430 ಹುದ್ದೆಗಳು
ಉಳಿಕೆ ಮೂಲ ವೃಂದದ ಹುದ್ದೆಗಳು (RPC)- 3243 ಹುದ್ದೆಗಳು


ವಿದ್ಯಾರ್ಹತೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೇರ ಪಾವತಿ/ ಕಲ್ಯಾಣ/ ದಿನಗೂಲಿ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಯಾವುದೇ ಶೈಕ್ಷಣಿಕ ಅರ್ಹತೆ ಇರಬೇಕು ಎಂದು ಬಿಬಿಎಂಪಿ ತಿಳಿಸಿಲ್ಲ.


ಇದನ್ನೂ ಓದಿ: Post Office Jobs: ಕರ್ನಾಟಕದಲ್ಲಿ 3036 ಪೋಸ್ಟ್ ಆಫೀಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ-10th ಪಾಸಾದವರು ಅಪ್ಲೈ ಮಾಡಿ


ವಯೋಮಿತಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 55 ವರ್ಷ ಮೀರಿರಬಾರದು.


ವೇತನ:
ಗ್ರೂಪ್​ ಡಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 17,000-28,950 ರೂ. ಸಂಬಳ ಕೊಡಲಾಗುತ್ತದೆ.




ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: 30/01/2023
ಅಭ್ಯರ್ಥಿಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 5. 30ರೊಳಗೆ ಅರ್ಜಿ ಹಾಕಬೇಕು.


ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಪಾಲಿಕೆಯ ಆಯಾ ವಾರ್ಡ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ (ಘನತ್ಯಾಜ್ಯ ನಿರ್ವಹಣೆ) ಕಚೇರಿಗೆ ಕಳುಹಿಸಬೇಕು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು