Ayush Department Hassan Recruitment 2023: ಆಯುಷ್ ಇಲಾಖೆ ಹಾಸನ (Ayush Department Hassan) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಕಮ್ಯುನಿಟಿ ಹೆಲ್ತ್ ಆಫೀಸರ್, ಸ್ಪೆಷಲಿಸ್ಟ್ ಡಾಕ್ಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 19, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹಾಸನದಲ್ಲಿ (Hassan) ಪೋಸ್ಟಿಂಗ್ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಆಯುಷ್ ಇಲಾಖೆ ಹಾಸನ |
ಹುದ್ದೆ | ಮ್ಯುನಿಟಿ ಹೆಲ್ತ್ ಆಫೀಸರ್, ಸ್ಪೆಷಲಿಸ್ಟ್ ಡಾಕ್ಟರ್ |
ಒಟ್ಟು ಹುದ್ದೆ | 18 |
ವಿದ್ಯಾರ್ಹತೆ | 10ನೇ ತರಗತಿ, ಡಿಪ್ಲೊಮಾ |
ವೇತನ | ಮಾಸಿಕ ₹ 35,000 |
ಉದ್ಯೋಗದ ಸ್ಥಳ | ಹಾಸನ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 19, 2023 (ನಾಳೆ) |
ವಿದ್ಯಾರ್ಹತೆ:
ಸ್ಪೆಷಲಿಸ್ಟ್ ಡಾಕ್ಟರ್- ಬಿಎನ್ವೈಎಸ್(BNYS), ಬಿಎಎಂಎಸ್ (BAMS), ಎಂಡಿ, ಎಂಎಸ್, ಸ್ನಾತಕೋತ್ತರ ಪದವಿ
ಫಾರ್ಮಾಸಿಸ್ಟ್- 10ನೇ ತರಗತಿ, ಡಿಪ್ಲೊಮಾ
ಮಸಾಜಿಸ್ಟ್- 7ನೇ ತರಗತಿ
ಕ್ಷಾರಸೂತ್ರ ಅಟೆಂಡರ್- 10ನೇ ತರಗತಿ
ಸ್ತ್ರೀರೋಗ ಅಟೆಂಡರ್-10ನೇ ತರಗತಿ
ಮಲ್ಟಿಪರ್ಪಸ್ ವರ್ಕರ್-10ನೇ ತರಗತಿ
ಕಮ್ಯುನಿಟಿ ಹೆಲ್ತ್ ಆಫೀಸರ್- ಬಿಎಎಂಎಸ್ (BAMS)
ಇದನ್ನೂ ಓದಿ:NIMHANS Recruitment 2023: ಕ್ಷೇತ್ರ ಸಂಪರ್ಕ ಅಧಿಕಾರಿ ಹುದ್ದೆಗೆ ಅರ್ಜಿ ಹಾಕಿ- ತಿಂಗಳಿಗೆ 25,000 ಸಂಬಳ
ವಯೋಮಿತಿ:
ಆಯುಷ್ ಇಲಾಖೆ ಹಾಸನ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 19, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ-1/ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
ವೇತನ:
ಸ್ಪೆಷಲಿಸ್ಟ್ ಡಾಕ್ಟರ್- ಮಾಸಿಕ ₹ 35,000
ಫಾರ್ಮಾಸಿಸ್ಟ್- ಮಾಸಿಕ ₹ 15,821
ಮಸಾಜಿಸ್ಟ್- ಮಾಸಿಕ ₹ 11,356
ಕ್ಷಾರಸೂತ್ರ ಅಟೆಂಡರ್- ಮಾಸಿಕ ₹ 11,356
ಸ್ತ್ರೀರೋಗ ಅಟೆಂಡರ್- ಮಾಸಿಕ ₹ 11,356
ಮಲ್ಟಿಪರ್ಪಸ್ ವರ್ಕರ್- ಮಾಸಿಕ ₹ 10,300
ಕಮ್ಯುನಿಟಿ ಹೆಲ್ತ್ ಆಫೀಸರ್- ಮಾಸಿಕ ₹ 15,000- 25,000
ಇದನ್ನೂ ಓದಿ: Canara Bank Recruitment 2023: ಕೆನರಾ ಬ್ಯಾಂಕ್ನಲ್ಲಿ ಗೋಲ್ಡ್ ಅಪ್ರೈಸರ್ ಹುದ್ದೆ ಖಾಲಿ ಇದೆ- SSLC ಪಾಸಾಗಿದ್ರೆ ಸಾಕು
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಜಿಲ್ಲಾ ಆಯುಷ್ ಕಚೇರಿ
ಹಾಸನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 19, 2023 (ನಾಳೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ