SSLR Karnataka Recruitment 2021 : ಬಿಇ, ಬಿ.ಟೆಕ್, ಡಿಪ್ಲೊಮ, ಐಟಿಐ ಪಾಸಾದವರಿಗೆ ಸಿಹಿ ಸುದ್ದಿ- ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ

Job News: ವೆಬ್‌ಸೈಟ್‌ rdservices.karnataka.gov.in ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಹೊರತುಪಡಿಸಿ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶ ಇರುವುದಿಲ್ಲ.

 3000 ಭೂಮಾಪಕರ ಹುದ್ದೆ ಖಾಲಿ

3000 ಭೂಮಾಪಕರ ಹುದ್ದೆ ಖಾಲಿ

  • Share this:
ಕರ್ನಾಟಕ ಭೂಮಾಪನ ಕಂದಾಯ ವ್ಯವಸ್ಥೆ(SSLR Karnataka Recruitment 2021) ಮತ್ತು ಭೂದಾಖಲೆಗಳ ಇಲಾಖೆಯು 3000 ಭೂಮಾಪಕರು ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದ್ದು, ಆನ್​ಲೈನ್​ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪಿಯು, ಬಿಇ, ಬಿ.ಟೆಕ್, ಡಿಪ್ಲೊಮ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯೋಗದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ







































ಇಲಾಖೆಕರ್ನಾಟಕ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಹುದ್ದೆಯ ಹೆಸರುಭೂಮಾಪಕರು
ಹುದ್ದೆಗಳ ಸಂಖ್ಯೆ3000
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ31-12-2021 ರ ಸಂಜೆ 05 ಗಂಟೆವರೆಗೆ.
ಶೈಕ್ಷಣಿಕ ಅರ್ಹತೆ
ದ್ವಿತೀಯ ಪಿಯುಸಿ ಅನ್ನು ವಿಜ್ಞಾನ ವಿಭಾಗದಲ್ಲಿ ಪಾಸ್‌ ಮಾಡಿರಬೇಕು.ಬಿಇ ಸಿವಿಲ್‌ / ಬಿ.ಟೆಕ್ ಸಿವಿಲ್ / ಡಿಪ್ಲೊಮ ಸಿವಿಲ್ ಇಂಜಿನಿಯರಿಂಗ್‌ ಆಗಿರಬೇಕು.
ಅರ್ಜಿ ಶುಲ್ಕ ರೂ.1000.
ಪರೀಕ್ಷೆ ಮಾಹಿತಿ ವೆಬ್​ಸೈಟ್​ https://landrecords.karnataka.gov.in/Service201/
ಅರ್ಜಿ ಸಲ್ಲಿಸುವ ವೆಬ್​ಸೈಟ್​ rdservices.karnataka.gov.in
ವಯೋಮಿತಿಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು
ಗರಿಷ್ಠ ವಯೋಮಿತಿ 65 ವರ್ಷಗಳು ಮೀರಿರಬಾರದು.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02-12-2021
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-12-2021 ರ ಸಂಜೆ 05 ಗಂಟೆವರೆಗೆ.

ಶೈಕ್ಷಣಿಕ ಅರ್ಹತೆ
ದ್ವಿತೀಯ ಪಿಯುಸಿ ಅನ್ನು ವಿಜ್ಞಾನ ವಿಭಾಗದಲ್ಲಿ ಪಾಸ್‌ ಮಾಡಿರಬೇಕು. ಗಣಿತ ವಿಷಯದಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಗಳಿಸಿರಬೇಕು. ಅಥವಾ ಬಿಇ ಸಿವಿಲ್‌ / ಬಿ.ಟೆಕ್ ಸಿವಿಲ್ / ಡಿಪ್ಲೊಮ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ 'ಲ್ಯಾಂಡ್ ಅಂಡ್ ಸಿಟಿ ಸರ್ವೆ'ಯಲ್ಲಿ ಪದವಿ ಪೂರ್ವ ಡಿಪ್ಲೊಮದಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್‌ ಸರ್ವೆ ಟ್ರೇಡ್ ನಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆ ಹೇಗೆ ಮಾಡಲಾಗುತ್ತದೆ?
ಮೊದಲು ಸ್ಪರ್ಧಾತ್ಮಕ ಪರೀಕ್ಷೆಯನ್ನು  ಜಿಲ್ಲಾ ಕೇಂದ್ರಗಳಲ್ಲಿ ಜನವರಿ ಅಥವಾ ಫೆಬ್ರವರಿ 2022 ರಲ್ಲಿ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ವೆಬ್‌ಸೈಟ್‌ rdservices.karnataka.gov.in ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಹೊರತುಪಡಿಸಿ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಶುಲ್ಕ : 1000 ರೂ

ವಯೋಮಿತಿ

ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು
ಗರಿಷ್ಠ ವಯೋಮಿತಿ 65 ವರ್ಷಗಳು ಮೀರಿರಬಾರದು.

ಅಭ್ಯರ್ಥಿಗಳ ಜನ್ಮ ದಿನಾಂಕವನ್ನು ಅವರ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣ ಪತ್ರ / ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ) / ಕ್ಯುಮುಲೇಟಿವ್ ರೆಕಾರ್ಡ್‌ ನಲ್ಲಿ ನಮೂದಿಸಿರುವಂತೆ ಪರಿಗಣಿಸಲಾಗುವುದು. ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.

ಇತರೆ ಹೆಚ್ಚಿನ ಮಾಹಿತಿಗೆ ಈ ಪಿಡಿಎಫ್ ಲಿಂಕ್ ಕ್ಲಿಕ್ ಮಾಡಿ 

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
Published by:Sandhya M
First published: