SSC Recruitment: 835 ಹೆಡ್​ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಸ್ಟಾಫ್​ ಸೆಲೆಕ್ಷನ್​ ಕಮಿಷನ್​ ದೇಶದ ನಾನಾ ಮೂಲೆಗಳಿಂದ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 ಹುದ್ದೆಗಳಿಗೆ ಅರ್ಜಿ ಹಾಕಿ

ಹುದ್ದೆಗಳಿಗೆ ಅರ್ಜಿ ಹಾಕಿ

  • Share this:
    ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission) ದೆಹಲಿ ಪೊಲೀಸ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ (ಸಚಿವಾಲಯ) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 835 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ಇದರಲ್ಲಿ 559ಹುದ್ದೆಗಳು ಪುರುಷರಿಗೆ ಮೀಸಲಾಗಿದ್ದು, 276 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿದೆ. ಈಗಾಗಲೇ ಹುದ್ದೆ ನೇಮಕಾತಿ ಅಧಿಸೂಚನೆ ಹೊರ ಬಿದಿದ್ದು, ಅರ್ಜಿ ಸಲ್ಲಿಸಲು ಜೂನ್​ 16 ಕಡೆಯ ದಿನವಾಗಿದೆ.

    ಸ್ಟಾಫ್​ ಸೆಲೆಕ್ಷನ್​ ಕಮಿಷನ್​ ದೇಶದ ನಾನಾ ಮೂಲೆಗಳಿಂದ  ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ವಿವರ, ಮಾಹಿತಿ, ನೇಮಕಾತಿ ಪ್ರಕ್ರಿಯೆ, ವೇತನ ಪ್ರಕ್ರಿಯೆ ಕುರಿತು ಮಾಹಿತಿ ಇಲ್ಲಿದೆ.



































    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಸ್ಟಾಫ್​ ಸೆಲೆಕ್ಷನ್​ ಕಮಿಷನ್​
    ಹುದ್ದೆದೆಹಲಿ ಪೊಲೀಸ್​ ಹೆಡ್​ಕಾನ್ಸ್​​​ಟೇಬಲ್
    ಒಟ್ಟು ಹುದ್ದೆಗಳು835
    ಪುರುಷ ಅಭ್ಯರ್ಥಿಗಳ ಹುದ್ದೆ 559
    ಮಹಿಳಾ ಅಭ್ಯರ್ಥಿಗಳ ಹುದ್ದೆ276
    ಕಾರ್ಯ ನಿರ್ವಹಣೆ ಸ್ಥಳದೆಹಲಿ
    ವೇತನ:25500-81100 ರೂ ಮಾಸಿಕ

    ವಿದ್ಯಾರ್ಹತೆ: ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10+2 ಅಥವಾ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
    ಅಭ್ಯರ್ಥಿಯು ಇಂಗ್ಲಿಷ್​​ ಮತ್ತು ಹಿಂದಿ ಟೈಪಿಂಗ್​ ಅನುಭವ ಹೊಂದಿರಬೇಕು. ಪ್ರತಿ ನಿಮಿಷಕ್ಕೆ 30 ಪದ ಇಂಗ್ಲಿಷ್​ ಹಾಗೂ ಪ್ರತಿ ನಿಮಿಷಕ್ಕೆ 25 ಪದ ಕನ್ನಡವನ್ನು ಟೈಪ್​ ಮಾಡಬೇಕು.

    ವಯೋಮಿತಿ : ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಆಗಿದ್ದು, ಗರಿಷ್ಠ 25 ವರ್ಷ ಮೀರಿರಬಾರದು.

    ವಯೋಮಿತಿ ಸಡಿಲಿಕೆ
    ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ
    ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ
    ವಿಕಲಚೇತನ ಅಭ್ಯರ್ಥಿಗೆ (ಮೀಸಲಾತಿ ರಹಿತ) : 10 ವರ್ಷ
    ವಿಕಲಚೇತನ ಅಭ್ಯರ್ಥಿಗೆ (ಪ. ಜಾತಿ, ಪ. ಪಂ ) 15 ವರ್ಷ
    ವಿಕಲಚೇತನ ಅಭ್ಯರ್ಥಿಗೆ (ಹಿಂದುಳಿದ ವರ್ಗ) 13 ವರ್ಷ

    ಅರ್ಜಿ ಸಲ್ಲಿಕೆ ವಿಧಾನ
    ಆನ್​ಲೈನ್​

    ಅರ್ಜಿ ಶುಲ್ಕ
    ಸಾಮಾನ್ಯ, ಹಿಂದುಳಿದ ಅಭ್ಯರ್ಥಿಗಳಿಗೆ 100 ರೂ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶುಲ್ಕದ ವಿನಾಯಿತಿ

    ಇದನ್ನು ಓದಿ: ಹುಬ್ಬಳ್ಳಿ ರೈಲ್ವೆಯಲ್ಲಿ ನೇಮಕಾತಿ; ಸ್ನಾತಕೋತ್ತರ ಪದವೀಧರರಿಂದ ಅರ್ಜಿ ಆಹ್ವಾನ

    ಪ್ರಮುಖ ದಿನಾಂಕ
    ಅರ್ಜಿ ಸಲ್ಲಿಕೆ ಆರಂಭ : ಮೇ 17, 2022
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 16, 2022
    ಅರ್ಜಿ ಶುಲ್ಕ ಕಟ್ಟಲು ಕಡೆಯ ದಿನಾಂಕ: ಜೂನ್​ 16, 2022
    ಆಫ್​ಲೈನ್ ಶುಲ್ಕ ಕಟ್ಟಲು ಕಡೆಯ ದಿನಾಂಕ: ಜೂನ್​ 20, 2022

    ಪ್ರಮುಖ ಲಿಂಕ್​
    ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
    ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್: ssc.nic.in

    ಇದನ್ನು ಓದಿ: ಭಾರತೀಯ ರೈಲ್ವೆಯಲ್ಲಿ ಉದ್ಯೋಗ; ಬೇಗ ಅರ್ಜಿ ಸಲ್ಲಿಸಿ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    -ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
    -ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
    - ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್​ ಅನ್ನು ಕ್ಲಿಕ್​ ಮಾಡಿ ಆನ್‌ಲೈನ್‌ನಲ್ಲಿ ಅನ್ವಯಿಸಿ -
    ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. - ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
    - ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
    ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.
    Published by:Seema R
    First published: