SSB Recruitment 2021: ತಿಂಗಳಿಗೆ ₹ 1,12,400 ಸಂಬಳ, 22 ಸಬ್​ ಇನ್ಸ್​​ಪೆಕ್ಟರ್​ ಹುದ್ದೆಗಳು ಖಾಲಿ

ನವೆಂಬರ್ 29 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

SSB

SSB

  • Share this:
SSB Recruitment 2021: ಸಶಸ್ತ್ರ ಸೀಮಾ ಬಲ(Sashastra Seema Bal) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 22 ಸಬ್​ ಇನ್ಸ್​ಪೆಕ್ಟರ್(Sub Inspector) ಹುದ್ದೆಗಳು ಖಾಲಿ ಇದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 29 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssb.nic.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸಶಸ್ತ್ರ ಸೀಮಾ ಬಲ
ಹುದ್ದೆಯ ಹೆಸರುಸಬ್​ ಇನ್ಸ್​ಪೆಕ್ಟರ್
ಒಟ್ಟು ಹುದ್ದೆಗಳು22
ವಿದ್ಯಾರ್ಹತೆಯಾವುದೇ ಪದವಿ
ಉದ್ಯೋಗದ ಸ್ಥಳನವದೆಹಲಿ
ವೇತನಮಾಸಿಕ ₹ 35,400-1,12,400
ಅರ್ಜಿ ಸಲ್ಲಿಕೆ ವಿಧಾನಆಫ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ29/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ28/12/2021ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/12/2021

ಇದನ್ನೂ ಓದಿ: Bengaluru Metro: SSLC ಪಾಸಾದವರಿಗೆ ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ, ತಿಂಗಳಿಗೆ ₹ 60,000 ಸಂಬಳ

ವಿದ್ಯಾರ್ಹತೆ:
ಅಭ್ಯರ್ಥಿಯು ಕೇಂದ್ರ/ರಾಜ್ಯ ಸರ್ಕಾರದ ನೌಕರನಾಗಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ:
ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 52 ವರ್ಷ ಮೀರಿರಬಾರದು.ಉದ್ಯೋಗದ ಸ್ಥಳ:
ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಉದ್ಯೋಗ ನೀಡಲಾಗುತ್ತದೆ.

ಇದನ್ನೂ ಓದಿ: RDPR Karnataka: ಪದವೀಧರರಿಗೆ ಸರ್ಕಾರಿ ಉದ್ಯೋಗ, ಮಾಸಿಕ ವೇತನ ₹ 24,000, ಬೆಂಗಳೂರಿನಲ್ಲಿ ಕೆಲಸ

ವೇತನ:
ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 35,400-​ 1,12,400 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಕೆಲಸ ಹುಡುಕುತ್ತಿದ್ದಾರಾ? ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಡೈರೆಕ್ಟೋರೇಟ್​ ಜನರಲ್
ಸಶಸ್ತ್ರ ಸೀಮಾ ಬಲ
ಈಸ್ಟ್​ ಬ್ಲಾಕ್ ವಿ
ಆರ್​.ಕೆ.ಪುರಂ
ನವದೆಹಲಿ-110066
Published by:Latha CG
First published: